Friday, 13th December 2024

BBH 18: ಬಿಗ್ ಬಾಸ್ ಮನೆಗೆ ಹೊಸ ಸ್ಪರ್ಧಿ ಎಂಟ್ರಿ: ಕತ್ತೆಯನ್ನು ನೋಡಿ ಶಾಕ್ ಆದ ಜನರು

Donkey in Bigg Boss

ಹಿಂದಿ ಕಿರುತೆರೆಯ ಬಹುದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 18ಕ್ಕೆ (Bigg Boss 18) ಚಾಲನೆ ದೊರಕಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಶೋನ ಗ್ರ್ಯಾಂಡ್ ಓಪನಿಂಗ್ ಭಾನುವಾರ ನಡೆಯಿತು. ಒಟ್ಟು 18 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ. ಇವರ ಜೊತೆಗೆ ಮತ್ತೊಂದು ಸ್ಪೆಷನ್ ಕಂಟೆಸ್ಟೆಂಟ್ ಕೂಡ ಈ ಬಾರಿ ಮನೆಯೊಳಗೆ ಎಂಟ್ರಿ ಕೊಟ್ಟಿದೆ.

ಈ ಬಾರಿಯ ಬಿಗ್ ಬಾಸ್​​ನಲ್ಲಿ 18 ಸ್ಪರ್ಧಿಗಳ ನಂತರ 19 ನೇ ಸ್ಪರ್ಧಿ ಕೂಡ ಮನೆಗೆ ಪ್ರವೇಶಿಸಿದ್ದು, ಆದರೆ ಮನುಷ್ಯರಲ್ಲ ಬದಲಾಗಿ ಕತ್ತೆ. ಇದು ವಕೀಲ ಗುಣರತ್ನ ಸದಾವರ್ತೆ ಅವರ ಕತ್ತೆಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಕತ್ತೆಯೊಂದು ವಾಸ ಮಾಡಲಿದೆ ಎಂಬ ಸುದ್ದಿ ಹರಿದಾಡಿತ್ತು. ಅದೀಗ ನಿಜವಾಗಿದೆ.

ಬಿಗ್ ಬಾಸ್ 18 ರಲ್ಲಿ ಅತಿಥಿಯಾಗಿ ಮನೆಯೊಳಗೆ ಕಾಲಿಟ್ಟಿರುವ ಕತ್ತೆಯ ಹೆಸರು ಗಡ್ರಾಜ್ ಆಗಿದೆ. ವಕೀಲ ಗುಣರತ್ನ ಸದಾವರ್ತೆ ಅವರ ಮುದ್ದಿನ ಕತ್ತೆ ಗಡ್ರಾಜ್ ಅವರ ಜೊತೆಯಲ್ಲಿ ಬಂದಿದೆ. ಇತರ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ 18ರ ಮನೆಯಲ್ಲಿ ಇದು ಕೂಡ ವಾಸಿಸಲಿದೆ. ಗುಣರತ್ನ ಅವರು ಕತ್ತೆಯನ್ನು ಸಾಕಲು ಕಾರಣವನ್ನು ಕೂಡ ವಿವರಿಸಿದರು. ಕತ್ತೆ ಹಾಲಿನಲ್ಲಿ ವೈದ್ಯಕೀಯ ಗುಣವಿದೆ ಎಂದು ಹೇಳಿರುವ ಇವರು ಸಂಶೋಧನೆಗೆಂದು ನನ್ನ ಮಗಳು ಮನೆಯಲ್ಲಿಟ್ಟುಕೊಂಡಿದ್ದಾಳೆ ಎಂದರು.

ಇನ್ನು ಬಿಗ್ ಬಾಸ್ ಮನೆಗೆ ಪ್ರಾಣಿಯೊಂದು ಪ್ರವೇಶಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಸಾಕು ನಾಯಿಯೊಂದು ಮನೆಯೊಳಗೆ ಪ್ರವೇಶ ಪಡೆದಿತ್ತು. ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ 16 ಸೀಸನ್​ನಲ್ಲಿ ನಾಯಿಯೂ ಇತ್ತು. ಭಾಗವಹಿಸಿದವರೆಲ್ಲರೂ ಅವನನ್ನು ಬಹಳವಾಗಿ ನೋಡಿಕೊಂಡರು. ಗಡ್ರಾಜ್ ಇದೀಗ ಇತರ ಸ್ಪರ್ಧಿಗಳೊಂದಿಗೆ ಹೇಗೆ ಬೆರೆಯುತ್ತದೆ?, ಮನೆಯವರು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಬಿಗ್ ಬಾಸ್ 18ರ ಸ್ಪರ್ಧಿಗಳ ಪಟ್ಟಿ:

ಚಾಹತ್ ಪಾಂಡೆ, ಶಹಜಾದಾ ಧಾಮಿ, ಅವಿನಾಶ್ ಮಿಶ್ರಾ, ಶಿಲ್ಪಾ ಶಿರೋಡ್ಕರ್, ತಜಿಂದರ್ ಬಗ್ಗಾ, ಶ್ರುತಿಕಾ ಅರ್ಜುನ್, ನೈರಾ ಬ್ಯಾನರ್ಜಿ, ಚುಮ್ ದರಾಂಗ್, ಕರಣ್‌ವೀರ್ ಮೆಹ್ರಾ, ರಜತ್ ದಲಾಲ್, ಮುಸ್ಕಾನ್ ಬಾಮ್ನೆ, ಅರ್ಫೀನ್ ಖಾನ್, ಸಾರಾ ಅರ್ಫೀನ್ ಖಾನ್, ಈಶಾ ಸಿಂಗ್, ಗುಣರತ್ನ ಶಾರದವರ್ತೆ, ವಿಯಾನ್ ಶಾರದವರ್ತೆ, ದಿಸೆನಾ ಮತ್ತು ಎಲಿಶ್ ಕೌಶಿಕ್.

BBK 11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅಬ್ಬರ ಮತ್ತೆ ಶುರು: ಇಂದು ನಡೆಯಲಿದೆ ದೊಡ್ಡ ಜಗಳ