Friday, 13th December 2024

ಶಕುಂತಲೆಯ ಅವತಾರದಲ್ಲಿ ಸಮಂತಾ

ಟಾಲಿವುಡ್‌ನಲ್ಲಿ ಪೌರಾಣಿಕ, ಐತಿಹಾಸಿಕ, ಬಯೋಪಿಕ್ ಸಿನಿಮಾಗಳು ಹೆಚ್ಚಾಗಿ ಸೆಟ್ಟೇರುತ್ತಿವೆ.

ಈಗ ಈ ಸಾಲಿಗೆ ಪೌರಾಣಿಕ ಕಥಾಹಂದರದ ‘ಶಕುಂತಲಂ’ ಸೇರ್ಪಡೆಯಾಗಿದೆ. ಒಂದು ವರ್ಷದ ಹಿಂದಿನಿಂದಲೂ ‘ಶಕುತಲಂ’ ತೆಲುಗು ಚಿತ್ರರಂಗದಲ್ಲಿ ಸದ್ದು ಮಾಡುತ್ತಿತ್ತು. ಈ ನಡುವೆಯೇ ಬಿಡುಗಡೆಯಾದ ಚಿತ್ರದ ಮೋಷನ್ ಪೋಸ್ಟರ್ ಕುತೂಹಲ ಮೂಡಿಸಿತ್ತು. ಆದರೆ ‘ಶಕುಂತಲ’ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದು ಖಚಿತವಾಗಿರಲಿಲ್ಲ. ಮೊದಲು ಶಕುಂತಲೆ ಯಾಗಿ ಅನುಷ್ಕಾ ಶೆಟ್ಟಿ ನಟಿಸುತ್ತಾರೆ ಎನ್ನಲಾಗುತ್ತಿತ್ತು.

ಬಳಿಕ ಶಕುಂತಲೆಯಾಗಿ ಪೂಜಾ ಹೆಗ್ಡೆ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಬಗ್ಗೆ ಚಿತ್ರತಂಡ  ಖಚಿತ ಪಡಿಸಿರಲಿಲ್ಲ. ಸದ್ಯ ಹೊಸ ವರ್ಷದ ಪ್ರಯುಕ್ತ ಚಿತ್ರದ ಮತ್ತೊಂದು ಮೋಷನ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಶಕುಂತಲ ಪಾತ್ರದಲ್ಲಿ ಸಮಂತಾ ಅಕ್ಕಿ ನೇನಿ ಬಣ್ಣಹಚ್ಚುತ್ತಾರೆ ಎಂಬು ದನ್ನು ಖಚಿತಪಡಿಸಿದೆ.

‘ಶಕುತಲಂ’, ಪ್ರಮು ಖ ಪೌರಾಣಿಕ ಕಥೆಯಾಗಿದ್ದು, ದುಷ್ಯಂತ ಮತ್ತು ಶಕುಂತಲೆಯ ಅಮರ ಪ್ರೇಮ ಕಥೆಯನ್ನು ತೆರೆಗೆ ತರಲಾಗುತ್ತಿದೆ. ಚಿತ್ರಕ್ಕೆ ಗುಣಶೇಖರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗುಣಶೇಖರ್ ಈ ಹಿಂದೆಯೇ ‘ಹಿರಣ್ಯಕಶ್ಯಪು’ ಚಿತ್ರವನ್ನು ಘೋಷಿಸಿದ್ದರು. ಆದರೆ ಅದ ಕ್ಕೂ ಮೊದಲೇ ‘ಶಕುತಲಂ’ ಚಿತ್ರವನ್ನು ಕೈಗೆತ್ತಿಕೊಂಡಿ ದ್ದಾರೆ.

ಚಿತ್ರಕ್ಕೆ ನೀಲಿಮಗುಣ ಬಂಡವಾಳ ಹೂಡುತ್ತಿದ್ದಾರೆ. ಮಣಿಶರ್ಮ ಅವರ ಸಂಗೀತ ಈ ಚಿತ್ರಕ್ಕಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ಈಗಾಗಲೇ ಚಿತ್ರತಂಡ ಹೇಳಿಕೊಂಡಿದೆ. ಹಾಗಾಗಿ ‘ಶಕುಂತಲಂ’ ಐದು ಭಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ.