Sunday, 13th October 2024

ಫೆಬ್ರವರಿ 17 ರಂದು ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ಬಿಡುಗಡೆ

ಹೈದರಾಬಾದ್: ನಟಿ ಸಮಂತಾ ಅಭಿನಯದ ‘ಶಾಕುಂತಲಂ’ ಸಿನಿಮಾ ವಿಶ್ವದಾದ್ಯಂತ ಫೆಬ್ರವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರೇಕ್ಷಕರು ಸಿನಿಮಾವನ್ನು 3Dಯಲ್ಲಿ ವೀಕ್ಷಿಸಬಹುದಾಗಿದೆ. ನಟಿ ಸಮಂತಾ, ‘ಶಾಕುಂತಲಂ’ ಚಿತ್ರದ ಹೊಸ ಬಿಡುಗಡೆ ದಿನಾಂಕ ಘೋಷಿಸಲು ಸೋಮವಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ‘2023ರ ಫೆಬ್ರವರಿ 17 ರಿಂದ ವಿಶ್ವದಾದ್ಯಂತ ಥಿಯೇಟರ್ಗ ಳಲ್ಲಿ ಎಪಿಕ್ ಲವ್ ಸ್ಟೋರಿಯಾದ ಶಾಕುಂತಲಂಗೆ ಸಾಕ್ಷಿಯಾಗಿರಿ!

ಹಾಗೆಯೇ 3D ನಲ್ಲಿ ಬಿಡುಗಡೆಯಾಗಲಿದೆ’ ಎಂದು ಅವರು ಬರೆದಿದ್ದಾರೆ.

ಈ ಸಿನಿಮಾವನ್ನು ಪ್ರಶಸ್ತಿ ವಿಜೇತ ನಿರ್ದೇಶಕ ಗುಣಶೇಖರ್ ಬರೆದು ನಿರ್ದೇಶಿಸಿದ್ದಾರೆ. ‘ಶಾಕುಂತಲಂ’ ಸಿನಿಮಾ ಶಕುಂತಲಾ ಮತ್ತು ರಾಜ ದುಶ್ಯಂತ್ ಅವರ ಪ್ರೇಮಕಥೆಯ ಸುತ್ತ ಸುತ್ತುತ್ತದೆ. ಸಿನಿಮಾದಲ್ಲಿ ಸಮಂತಾ ಮತ್ತು ‘ಸೂಫಿಯುಂ ಸುಜಾತಾಯುಂ’ ಖ್ಯಾತಿಯ ದೇವ್ ಮೋಹನ್ ನಟಿಸಿದ್ದಾರೆ.

ಸಚಿನ್ ಖೇಡೇಕರ್, ಕಬೀರ್ ಬೇಡಿ, ಡಾ. ಎಂ ಮೋಹನ್ ಬಾಬು, ಪ್ರಕಾಶ್ ರಾಜ್, ಮಧುಬಾಲಾ, ಗೌತಮಿ, ಅದಿತಿ ಬಾಲನ್, ಅನನ್ಯ ನಾಗಲ್ಲ ಮತ್ತು ಜಿಶು ಸೇನ್ಗುಪ್ತ ಸೇರಿದಂತೆ ಇತರರು ನಟಿಸಿದ್ದಾರೆ. ‘ಶಾಕುಂತಲಂ’ ಸಿನಿಮಾ ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲೂ ಬಿಡುಗಡೆಯಾಗಲಿದೆ.
Read E-Paper click here