Wednesday, 11th December 2024

Sandalwood Cinema : ಬರ್ತ್‌ ಡೇ ಗಿಫ್ಟ್‌; ʼಲಾಫಿಂಗ್‌ ಬುದ್ಧʼ ಪ್ರಮೋದ್‌ ಶೆಟ್ಟಿಯ ಹೊಸ ಸಿನಿಮಾ ಘೋಷಣೆ

Sandalwood Cinema

ಬೆಂಗಳೂರು:  ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ನಟ ಪ್ರಮೋದ್ ಶೆಟ್ಟಿ (Sandalwood Cinema) ಪ್ರಕಟಿಸಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ  ʼಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗʼ  ಎಂಬ ಚಿತ್ರವನ್ನು ಪ್ರಕಟಿಸಿದ್ದಾರೆ.  ಪ್ರಮೋದ್‌ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ, TEASER COMMING SOON ಅಂತ ಕೂಡ ಅನೌನ್ಸ್ ಮಾಡಲಾಗಿದೆ.  *ವಡ್ಡಾರಾಧಕ , ಶಬರಿಯಂತಹ ಕಿರುಚಿತ್ರಗಳ ಮೂಲಕ ತಮ್ಮೂರಿನ ಕಥೆಗಳು ಎಲ್ಲಾ ಊರುಗಳಲ್ಲೂ ತಲುಪಬೇಕೆಂಬ ಆಶಯ ಪ್ರಕಟಿಸಿದ್ದ ಅನೀಶ್ ಎಸ್ ಶರ್ಮಾ ಈ ಸಿನಿಮಾದ ಮುಂದಾಳತ್ವ ವಹಿಸಿದ್ದಾರೆ. ಚಿತ್ತರಂಜನ್ ಕಶ್ಯಪ್, ವಲ್ಲಭ ಸೂರಿ ಮತ್ತು ಸುನೀತ್ ಹಲಗೇರಿ ತಮ್ಮ ಸಂಸ್ಥೆ Gunnybag Studios ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರನ್ನು ಹೊರತುಪಡಿಸಿ ರಾಘು ಶಿವಮೊಗ್ಗ, ಕಿರಣ್ ನಾಯ್ಕ್, ಮಂಜುನಾಥ್ ಹೆಗ್ಡೆ, ಚಂದ್ರಕಲಾ, ಕೆ ಜಿ ಕೃಷ್ಣಮೂರ್ತಿ ಮತ್ತು ಮುಂತಾದವರು ಬಣ್ಣ ಹಚ್ಚಿದ್ದಾರೆ. ಸುಮಂತ್ ಶರ್ಮಾ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಂಗೀತ, ಸಂಜೀವ್ ಜಾಗಿರ್ದರ್ ಅವರ ಸಂಕಲನ ಈ ಚಿತ್ರಕ್ಕೆ ಶಕ್ತಿ ತುಂಬಿದೆ. ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಇನ್ನೇನು ತಮ್ಮ ಮೊದಲ ಟೀಸರ್ ಬಿಡುಗಡೆ ಮಾಡಲು ಸಿದ್ಧರಾಗುತ್ತಿದ್ದಾರೆ.

ಅಮ್ಮನ ಜತೆ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಜ್ಯೂ. ಎನ್‌ಟಿಆರ್‌; ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ ಸಾಥ್‌

ಉಡುಪಿ: ಟಾಲಿವುಡ್‌ನ ಖ್ಯಾತ ನಟ ಜ್ಯೂನಿಯರ್‌ ಎನ್‌ಟಿಆರ್‌ (Junior NTR) ಅವರು  ಕುಟುಂಬದ ಜತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶನಿವಾರ ಭೇಟಿ ನೀಡಿ ದರ್ಶನ ಪಡೆದರು. ಈ ಮೂಲಕ ತಾಯಿಯ ಬಹುದಿನಗಳ ಕನಸನ್ನು ಈಡೇರಿಸಿದ್ದಾರೆ. ಮಗನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂದು ತಾಯಿ ಬಯಸಿದ್ದರಿಂದ, ನಟ ಜ್ಯೂನಿಯರ್‌ ಎನ್‌ಟಿಆರ್‌ ಅವರು ತಾಯಿ ಶಾಲಿನಿ ನಂದಮೂರಿ ಹಾಗೂ ಪತ್ನಿ ಲಕ್ಷ್ಮಿ ಪ್ರಣತಿ ಅವರೊಂದಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು.

ಈ ಸುದ್ದಿಯನ್ನೂ ಓದಿ: Haryana election : ಹರಿಯಾಣ ವಿಧಾನಸಭಾ ಚುನಾವಣೆ ಮುಂದೂಡಿಕೆ, ಮತ ಎಣಿಕೆ ದಿನಾಂಕವೂ ಮುಂದಕ್ಕೆ

ಮಂಗಳೂರು ಏರ್‌ಪೋರ್ಟ್‌ಗೆ ಆಗಮಿಸಿದ ನಟ ತಾರಕ್ ಅವರನ್ನು ಡಿವೈನ್ ಸ್ಟಾರ್ ರಿಷಬ್‌ ಶೆಟ್ಟಿ (Rishab shetty) ಸ್ವಾಗತಿಸಿದರು. ಬಳಿಕ ಒಟ್ಟಿಗೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಅವರು ಭೇಟಿ ನೀಡಿದರು. ಎನ್‌ಟಿಆರ್‌ ಅವರ ತಾಯಿ ಶಾಲಿನಿ ನಂದಮೂರಿ ಅವರು ಕುಂದಾಪುರ ಮೂಲದವರಾಗಿದ್ದು, ಅವರ ಕುಟುಂಬ 40 ವರ್ಷಗಳ ಬಳಿಕ ಉಡುಪಿಗೆ ಭೇಟಿ ನೀಡಿದ್ದು ವಿಶೇಷವಾಗಿದೆ. ಉಡುಪಿ ಭೇಟಿ ವೇಳೆ ನಿರ್ಮಾಪಕ ವಿಜಯ್‌ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಉಪಸ್ಥಿತರಿದ್ದರು.

Junior NTR

ಉಡುಪಿ ಕೃಷ್ಣ ಮಠ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೂ.ಎನ್‌ಟಿಆರ್‌ ಅವರು, ನನ್ನನ್ನು ಹುಟ್ಟೂರಾದ ಕುಂದಾಪುರಕ್ಕೆ ಕರೆತಂದು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಪಡೆಯಬೇಕೆಂಬ ನನ್ನ ತಾಯಿಯ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಇದು ಸೆಪ್ಟೆಂಬರ್ 2ರ ನನ್ನ ತಾಯಿಯ ಜನ್ಮದಿನಕ್ಕೆ ನಾನು ನೀಡಬಹುದಾದ ಅತ್ಯುತ್ತಮ ಉಡುಗೊರೆಯಾಗಿದೆ. ನಿರ್ಮಾಪಕ ವಿಜಯ್‌ ಕಿರಗಂದೂರು, ನನ್ನ ಆತ್ಮೀಯ ಸ್ನೇಹಿತ, ನಿರ್ದೇಶಕ ಪ್ರಶಾಂತ್ ನೀಲ್ ಇದನ್ನು ಸಾಧ್ಯವಾಗಿಸಿದ್ದಾರೆ. ಇನ್ನು ರಿಷಬ್‌ ಶೆಟ್ಟಿ ಅವರ ಉಪಸ್ಥಿತಿ ಈ ಕ್ಷಣವನ್ನು ಮತ್ತಷ್ಟು ವಿಶೇಷವಾಗಿಸಿದೆ ಎಂದು ತಿಳಿಸಿದ್ದಾರೆ.

https://x.com/tarak9999/status/1829829672521138279

ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೆ ನಟ ಜ್ಯೂ. ಎನ್‌ಟಿಆರ್‌ ಸದ್ಯ ʼದೇವರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿರುವ ದೇವರ ಚಿತ್ರದ ಪಾರ್ಟ್-1‌, ಸೆ.27ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ. ಇದರ ಜತೆಗೆ ಬಾಲಿವುಡ್‌ನ ವಾರ್-2‌ ಚಿತ್ರದಲ್ಲೂ ಜ್ಯೂ. ಎನ್‌ಟಿಆರ್‌ ನಟಿಸುತ್ತಿದ್ದಾರೆ. ಇನ್ನು ಪ್ರಶಾಂತ್‌ ನೀಲ್‌ ಜತೆಗಿನ ಎನ್‌ಟಿಆರ್‌31 ಚಿತ್ರದ ಶೂಟಿಂಗ್‌ ಆರಂಭಕ್ಕೆ ಇತ್ತೀಚೆಗೆ ಪೂಜೆ ನೆರವೇರಿದೆ.