Sunday, 13th October 2024

ಸಂಜನಾ, ರಾಗಿಣಿಗೆ ಮತ್ತೆ ಜೈಲೇ ಗತಿ

*ನಟಿಯರಿಂದ ಜಾಮೀನಿಗಾಗಿ ಹೈಕೋರ್ಟ್‌’ಗೆ ಮೊರೆ ಸಾಧ್ಯತೆ

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರದಲ್ಲಿ ಜೈಲು ವಾಸ ಅನುಭವಿಸು ತ್ತಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರ ಜಾಮೀನು ಅರ್ಜಿ ಇಂದು ಕೂಡ ವಜಾಗೊಂಡಿತು.

ಸೆ.14 ರಿಂದ ಜೈಲಲ್ಲಿರುವ ನಟಿ ರಾಗಿಣಿ ಹಾಗೂ ಬಳಿಕ ಸಂಜನಾ ಇಬ್ಬರೂ ಸತತವಾಗಿ ಜಾಮೀನು ಪಡೆಯಲು ಶತಪ್ರಯತ್ನ ಮಾಡುತ್ತಿದ್ದಾರೆ. ಎನ್‌ಡಿಪಿಎಸ್ ಕೋರ್ಟ್‌ ನ್ಯಾಯಾಧೀಶ ಸೀನಪ್ಪ ಅವರು ಜಾಮೀನು ಅರ್ಜಿಯನ್ನಯ ವಜಾಗೊಳಿಸಿ, ಆದೇಶ ನೀಡಿದ್ದಾರೆ.

ಜಾಮೀನು ನೀಡಿದರೆ ಅದೇ ಕೃತ್ಯವನ್ನು ನಟಿಯರು ಸೇರಿದಂತೆ, ಎಲ್ಲರೂ ಕೃತ್ಯ ಮುಂದುವರಿಸಬಹುದು ಎಂದು ತನಿಖಾಧಿಗಳ ಪರ ವಕೀಲರು ವಾದಿಸಿದರು. ಹೀಗಾಗಿ, ಎನ್‌ಡಿಪಿಎಸ್ ಕೋರ್ಟ್‌ ಜಾಮೀನು ಅರ್ಜಿ ವಜಾ ಮಾಡಿದ ಹಿನ್ನೆಲೆಯಲ್ಲಿ ಹೈಕೋರ್ಟಿಗೆ ಜಾಮೀನು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.