Thursday, 12th December 2024

Zee Entertainers: ಜೀ ಎಂಟರ್‌ಟೈನರ್ಸ್​ನಲ್ಲಿ ಈ ವಾರ ಸೀತಾರಾಮ ಟೀಮ್ vs ಅಮೃತಧಾರೆ ಟೀಮ್: ಗೆದ್ದಿದ್ದು ಯಾರು?

Zee Entertainers

ಕರ್ನಾಟಕ ಜನತೆಯ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಆರಂಭವಾದಾಗಿನಿಂದ ರಿಯಾಲಿಟಿ ಶೋ, ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬರುತ್ತಿದೆ. ಪುಟ್ಟಕ್ಕನ ಮಕ್ಕಳು, ಲಕ್ಷ್ಮೀ ನಿವಾಸ, ಶ್ರೀರಸ್ತು ಶುಭಮಸ್ತು, ಸೀತಾರಾಮ ಅಮೃತಧಾರೆ, ಸೇರಿದಂತೆ ಅನೇಕ ಧಾರಾವಾಹಿಗಳು ವೀಕ್ಷಕರನ್ನು ರಂಜಿಸುತ್ತಿದೆ. ಕಾಮಿಡಿ ಕಿಲಾಡಿಗಳು, ಸರಿಗಮಪ ದಂಥ ರಿಯಾಲಿಟಿ ಶೋಗಳೂ ನಡೆಯುತ್ತಿದೆ. ಇದಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದು ಅತೀ ದೊಡ್ಡ ಫ್ಯಾಮಿಲಿ ಶೋ ಜೀ ಎಂಟರ್‌ಟೈನರ್ಸ್.

ಕಳೆದ ವಾರ ಜೀ ಕುಟುಂಬದ ಎರಡು ಜನಪ್ರಿಯ ಧಾರಾವಾಹಿಗಳ ತಂಡಗಳು ಜೀ ಎಂಟರ್‌ಟೈನರ್ಸ್ ಶೋನಲ್ಲಿ ಭಾಗವಹಿಸಿತ್ತು. ಸುಧಾರಾಣಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಶ್ರೀರಸ್ತು ಶುಭಮಸ್ತು ಹಾಗೂ ಪ್ರಮೋದ್ ಶೆಟ್ಟಿ ನಿರ್ಮಿಸುತ್ತಿರುವ ಅಣ್ಣಯ್ಯ ಸೀರಿಯಲ್‌ಗಳ ನಟ-ನಟಿಯರು ಈ ಎಂಟರ್‌ಟೈನರ್ ಶೋನಲ್ಲಿ ಭಾಗವಹಿಸಿದ್ದರು. ಇದಕ್ಕೆ ಭರ್ಜರಿ ಟಿಆರ್​ಪಿ ದೊರೆತಿತ್ತು.

ಇದೀಗ ಈ ವಾರ ಜೀ ಕುಟುಂಬದ ಮತ್ತೆರಡು ಧಾರಾವಾಹಿಗಳ ತಂಡ ಜೀ ಎಂಟರ್‌ಟೈನರ್ಸ್ ಶೋನಲ್ಲಿ ಭಾಗವಹಿಸುತ್ತಿವೆ. ಗಗನ್‌ ಚಿನ್ನಪ್ಪ ಹಾಗೂ ವೈಷ್ಣವಿ ಗೌಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸೀತಾ ರಾಮ ಹಾಗೂ ಛಾಯಾ ಸಿಂಗ್‌- ರಾಜೇಶ್ ನಟರಂಗ್ ಮುಖ್ಯ ಭೂಮಿಕೆಯಲ್ಲಿರುವ ಅಮೃತಧಾರೆ ಈ ಎರಡೂ ಸೀರಿಯಲ್‌ಗಳ ನಟ-ನಟಿಯರು ಈ ಎಂಟರ್‌ಟೈನರ್ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಈಗಾಗಲೇ ಜೀ ಕನ್ನಡ ವೀಕೆಂಡ್ ಮನರಂಜನೆಯ ಶೋದ ಪ್ರೋಮೊಗಳನ್ನು ರಿಲೀಸ್ ಮಾಡಿದೆ. ಇದರಲ್ಲಿ ಕೆಲವು ಕಂಟೆಂಟ್ ಇಂಟ್ರೆಸ್ಟಿಂಗ್ ಆಗಿವೆ. ಸ್ಟೇಜ್​ಗೆ ಕಾಲಿಡುತ್ತಿದ್ದಂತೆ ವೈಷ್ಣವಿ ಅವರು ಟೀಂನಲ್ಲಿ ಇರುವುದು ಸೀತಾ.. ನೀವೆಲ್ಲ ಗೋತಾ.. ಎಂದು ಡೈಲಾಗ್ ಹೊಡೆದಿದ್ದಾರೆ. ತಲೆ ಮೇಲೆ ಗ್ಲಾಸ್ ಇಟ್ಟುಕೊಂಡು ಐಸ್ ಮೇಲೆ ನಿಂತು ಡ್ಯಾನ್ಸ್ ಮಾಡುವ ಟಾಸ್ಕ್​ಗೆ ಎಲ್ಲರೂ ನಕ್ಕು-ನಕ್ಕು ಸುಸ್ತಾಗಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ತಂಡದ ಸದಸ್ಯರು ಭಾಗವಹಿಸುತ್ತಾರೆ. ಪ್ರತೀ ವೀಕೆಂಡ್ ರಾತ್ರಿ 9 ರಿಂದ 10.30 ವರೆಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಧಾರಾವಾಹಿ ಕಲಾವಿದರು ವೀಕ್ಷಕರನ್ನು ರಂಜಿಸುತ್ತಾರೆ. ಅಕುಲ್‌ ಬಾಲಾಜಿ, ಜೀ ಎಂಟರ್‌ಟೈನರ್ಸ್‌ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

Bramhagantu Serial: ಸೌಂದರ್ಯಾ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ಮುಂದಾದ ದೀಪಾ