Friday, 13th December 2024

Seetha Rama Serial: ರಾಮ್ ಎಲ್ಲವನ್ನೂ ಇನೋಸೆಂಟ್ ಆಗಿ ನಂಬ್ತಿದ್ದಾನೆ: ಸೀತಾಗೆ ಶುರುವಾಯಿತು ಮತ್ತೊಂದು ಭಯ

Seetha Rama Serial

ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ (Seetha Rama) ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೇ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದರೂ ಸೀತಾ ರಾಮ ಸೀರಿಯಲ್​ಗೆ ಯಾವುದೇ ಹೊಡೆತ ಬಿದ್ದಿಲ್ಲ. ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸೀತಾ ರಾಮ ಧಾರಾವಾಹಿಯ ಮುಂದಿನ ಏಪಿಸೋಡ್‌ಗಳು ಹೇಗಿರಬಹುದು ಎಂಬ ಕುತೂಹಲಕ್ಕೆ ಪ್ರೋಮೋಗಳ ಮೂಲಕ ಉತ್ತರ ನೀಡುತ್ತಿದೆ.

ಪ್ರೋಮೋ ನೋಡಿದ ಅನೇಕ ಮಂದಿ ಸಿಹಿ ಪಾತ್ರಧಾರಿ ಎಂಡ್ ಆಗಿ ಬಿಡುತ್ತಾ ಎನ್ನುವ ಆಲೋಚನೆಯಲ್ಲಿ ಇದ್ದಾರೆ. ಇದರ ನಡುವೆ ಆಸ್ತಿ ವಿಚಾರ ಕೂಡ ಸಾಕಷ್ಟು ಕುತೂಹಲ ಮೂಡಿದೆ. ಸೀತಾ ಬರ್ತ್‌ಡೇಯನ್ನು ಗ್ರ್ಯಾಂಡ್‌ ಆಗಿಯೇ ಸೆಲೆಬ್ರೇಟ್‌ ಮಾಡಲು ಸೀತಾ ಮತ್ತು ಸಿಹಿಯನ್ನು ಶಾಪಿಂಗ್‌ ಕರೆದುಕೊಂಡು ಹೋಗಿದ್ದಾನೆ ರಾಮ. ಜತೆಗೆ ಸತ್ಯ ಚಿಕ್ಕಪ್ಪ ಬರೆದ ಪತ್ರದ ಜಾಡು ಹಿಡಿದು ಆಸ್ತಿ ವಿಚಾರದ ಬಗ್ಗೆ ಮಾತನಾಡುವ ಸಲುವಾಗಿ, ಲಾಯರ್‌ ಆಫೀಸ್‌ಗೂ ಭೇಟಿ ನೀಡಿದ್ದಾರೆ ಸೀತಾ ಮತ್ತು ರಾಮ.

ಶಾಪಿಂಗ್‌ಗೂ ಮುನ್ನ ಆಸ್ತಿ ವಿಚಾರವಾಗಿ ಲಾಯರ್‌ನ ಭೇಟಿಯಾಗಿದ್ದಾರೆ ಸೀತಾ ಮತ್ತು ರಾಮ. ಮನೆಯಲ್ಲಿ ಆಸ್ತಿ ವಿಚಾರ ಚರ್ಚೆ ಮಾಡದೆ, ಆಫೀಸ್‌ಗೆ ಬಂದಿದ್ದು ಒಳ್ಳೆಯದಾಯ್ತು ಎಂದು ಲಾಯರ್‌ ಹೇಳಿದ್ದಾರೆ. ಈ ಆಸ್ತಿ ಮೇಲೆ ನಿಮ್ಮ ಸಂಸಾರಕ್ಕೆ ಮಾತ್ರ ಹಕ್ಕಿದೆ ಎಂದಿದ್ದಾರೆ ಲಾಯರ್.‌ ವಾಣಿ ಅವರು ವಿಲ್‌ನಲ್ಲಿ ಬರೆದ ಪ್ರಕಾರ ಆಸ್ತಿ ನಿಮ್ಮ ಸಂಸಾರ ಬಿಟ್ಟು ಬೇರೆ ಯಾರಿಗೂ ಹೋಗಬಾರದು. ಈ ಆಸ್ತಿ ಬೇರೆ ಯಾರಿಗೂ ಸೇರಬಾರದು ಎಂಬುದು ವಾಣಿ ಆಸೆ ಎಂದಿದ್ದಾರೆ.

ಲಾಯರ್‌ ಅವರ ಈ ಮಾತಿಗೆ ಪ್ರತಿಕ್ರಿಯೆ ನೀಡಿದ ಸೀತಾ, ವಾಣಿ ಅತ್ತಿಗೆ ಈ ಥರ ಇದೆಲ್ಲವನ್ನು ಬರೆದಿಟ್ಟು ಹೋಗಿದ್ದಾರೆ ಎಂದರೆ, ಅದಕ್ಕೊಂದು ಬಲವಾದ ಕಾರಣ ಇದ್ದೇ ಇರುತ್ತೆ. ನಾವು ಅದನ್ನು ಪ್ರೊಟೆಕ್ಟ್‌ ಮಾಡ್ತಿವಿ ಎಂದಿದ್ದಾಳೆ. ಎಲ್ಲ ಕೆಲಸ ಮುಗಿದ ಕಾರ್‌ನಲ್ಲಿ ವಾಪಾಸ್ ಬರೋವಾಗ ನಮ್ಮನ್ನು ಯಾರೋ ಫಾಲೋ ಮಾಡುತ್ತಿದ್ದಾರೆ ಎಂಬ ಭಯ ಸೀತಾಗೆ ಶುರುವಾಗಿದೆ. ಈ ವಿಚಾರವನ್ನು ರಾಮನಿಗೂ ಹೇಳಿದ್ದಾಳೆ. ಆದರೆ, ರಾಮ್‌ ಮಾತ್ರ ಸೀರಿಯೆಸ್ ಆಗಿ ತೆಗೆದುಕೊಳ್ಳುತ್ತಿಲ್ಲ. ಎಲ್ಲವನ್ನೂ ಇನೋಸೆಂಟ್ ಆಗಿ ನಂಬ್ತಿದ್ದಾನೆ ಎಂದು ಸೀತಾಗೆ ಭಯ ಶುರುವಾಗಿದೆ.

BBK 11: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್: ಕ್ಯಾಪ್ಟನ್ಸಿ ಓಟದಿಂದ ರಜತ್-ತ್ರಿವಿಕ್ರಮ್ ಔಟ್