Wednesday, 11th December 2024

ಪಾಪ ಪಾಂಡು ಖ್ಯಾತಿಯ ಶಂಕರ್ ರಾವ್ ನಿಧನ

ಬೆಂಗಳೂರು: ಪಾಪ ಪಾಂಡು ಧಾರವಾಹಿ ಮೂಲತ ಖ್ಯಾತಿ ಗಳಿಸಿದ, ಹಿರಿಯ ಕಲಾವಿದ ಶಂಕರ್ ರಾವ್ (84) ಸೋಮವಾರ ನಿಧನರಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬೆಳಿಗ್ಗೆ 6.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಶಾಲಾ ದಿನಗಳಿಂದಲೂ ನಟನೆಯಲ್ಲಿ ತುಂಬಾನೇ ಆಸಕ್ತಿ ಹೊಂದಿದ್ದ ಕಲಾವಿಧ ಶಂಕರ್ ರಾವ್, ಹವ್ಯಾಸಿ ರಂಗಭೂಮಿಯಲ್ಲಿ ಕಲಾವಿದರಾಗಿ ಪಾದಾ ರ್ಪಣೆ ಮಾಡಿದ್ದರು. ಇವರಿಗೆ ಹೆಚ್ಚು ಖ್ಯಾತಿ ತಂದಿಕೊಟ್ಟಿದ್ದು ಪಾಪಾ ಪಾಂಡು ಧಾರವಾಹಿ ಆಗಿತ್ತು.

ಹಿರಿಯ ನಟನ ನಿಧನಕ್ಕೆ ಚಂದನವನದ ನಟರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬನಶಂಕರಿ ಚಿತಾಗಾರದಲ್ಲಿ ಶಂಕರ್​ ರಾವ್​ ಅಂತ್ಯಕ್ರಿಯೆ ನೆರವೇರಲಿದೆ.