ಬಿಸಿನೆಸ್ ತೆರೆಯುವ ಆಸೆ ಇದ್ದವರಿಗೆ ಬಿಸಿನೆಸ್ ಶಾರ್ಕ್ ಗಳಿಂದ ಐಡಿಯಾ ನೀಡುವ ಶೋ
ಬೆಂಗಳೂರು: ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಕೌನ್ಬನೇಗಾ ಕರೋಡ್ ಪತಿ ಮುಕ್ತಾಯದ ಬಳಿಕ ಡಿ.20ರಿಂದ ರಾತ್ರಿ 9 ಗಂಟೆಗೆ “ಶಾರ್ಕ್ ಟ್ಯಾಂಕ್ ಇಂಡಿಯಾ” ಎಂಬ ನೂತನ ರಿಯಾಲಿಟಿ ಶೋ ಪ್ರಾರಂಭಿಸುತ್ತಿದ್ದು, ಸೋನಿ ಚಾನೆಲ್ನಲ್ಲಿ ಪ್ರಸಾರಗೊಳ್ಳಲಿದೆ.
ಸೋನಿ ಪಿಕ್ಚರ್ಸ್ ಇಂಡಿಯಾ ಸ್ವಾಧೀನ ಪಡಿಸಿಕೊಂಡಿರುವ ಜಾಗತಿಕವಾಗಿ ಈಗಾಗಲೇ ಯಶಸ್ವಿ ಕಂಡಿರುವ ಶಾರ್ಕ್ ಟ್ಯಾಂಕ್ ಶೋನನ್ನು ಭಾರತದ ಟೆಲಿವಿಷನ್ನಲ್ಲಿಯೂ ಪ್ರಸಾರ ಮಾಡುವ ಇಂಗಿತದಿಂದ ಈ ರಿಯಾಲಿಟಿ ಶೋ ಪ್ರಾರಂಭಿಸಲಾಗಿದ್ದು, ಇದರ ಮೊದಲ ಆವೃತ್ತಿ ಡಿಸೆಂಬರ್20 ರಿಂದ ಆರಂಭಗೊಳ್ಳತ್ತಿದೆ.
ಶಾರ್ಕ್ ಟ್ಯಾಂಕ್ ಈ ರಿಯಾಲಿಟಿ ಶೋ ಎಲ್ಲಾ ಶೋಗಳಿಗಿಂತ ವಿಭಿನ್ನವಾಗಿದೆ. ಬಿಸಿನೆಸ್ ಸಂಬಂಧಿತ ಶೋ ಆಗಿರುವ ಇದು, ಎಲ್ಲಾ ವರ್ಗದ ಅತಿದೊಡ್ಡ ಬಿಸಿನೆಸ್ ಮ್ಯಾನ್ಗಳನ್ನು ಈ ರಿಯಾಲಿಟಿ ಶೋಗಳಲ್ಲಿ ಪರಿಚರಿಸ ಲಾಗುತ್ತದೆ. ಈ ಶೋನಲ್ಲಿ ಬಿಸಿನೆಸ್ ಸಂಬಂಧಿತ ಆಕ್ಟಿವಿಟೀಸ್ಗಳನ್ನು ನೀಡಲಾಗುತ್ತದೆ. ಇದರಲ್ಲಿ ಬಿಸಿನೆಸ್ ಸಂಬಂಧಿತ ಐಡಿಯಾ, ಅವಕಾಶ ಮತ್ತು ವೇದಿಕೆಯನ್ನು ಅಭ್ಯರ್ಥಿಗಳಿಗೆ ನೀಡಲಾಗುತ್ತದೆ. ಅದನ್ನು ಶಾರ್ಕ್ ಗಳೆಂದು ಗುರುತಿಸಿ ಕೊಳ್ಳುವ ಅತಿದೊಡ್ಡ ಬಿಸಿನೆಸ್ಮ್ಯಾನ್ಗಳು ಅಭ್ಯರ್ಥಿಗಳ ಬಿಸಿನೆಸ್ ಐಡಿಯಾಗಳನ್ನು ಮೌಲ್ಯಮಾಪನ ಮಾಡುತ್ತಾರೆ.
ಮೊದಲ ಆವೃತ್ತಿಯ ಶಾರ್ಕ್ ಗಳೆಂದರೆ ಶುಗರ್ ಕಾಸ್ಮೆಟಿಕ್ಸ್ ಸಿಇಒ ವಿನೀತಾ ಸಿಂಗ್, ಲೆನ್ಸ್ ಕಾರ್ಟ್ ಸಂಸ್ಥಾಪಕ ಪೆಯೂಶ್ ಬನ್ಸಾಲ್, ಎಂಕ್ಯೂರ್ ಫಾರ್ಮಾಸ್ಯುಟಿಕಲ್ಸ್ ಕಾರ್ಯನಿರ್ವಾಹಕ ನಿರ್ದೇಶಕ ನಮಿತಾ ಥಾಪರ್, ಭಾರತ್ ಸಂಸ್ಥಾಪಕ ಅಶ್ನೀರ್ ಗ್ರೋವರ್, ಮಾಮಅರ್ಥ್ ಸಹ ಸಂಸ್ಥಾಪಕ ಗಜಲ್ ಅಲಾಗ್, ಬೋಟ್ ಹಾಗೂ ಶಾದಿ.ಕಾಂ ಸಂಸ್ಥೆಯ ಮುಖ್ಯಸ್ಥರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋ ನನ್ನು ರಣವಿಜಯ್ ಸಿಂಹ ನಡೆಸಿ ಕೊಡುತ್ತಿದ್ದಾರೆ.
ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಮುಖ್ಯಸ್ಥ ಆಶಿಶದ್ ಗೋಲ್ವಾಲ್ಕರ್ ಮಾತನಾಡಿ, ಮೂರು ವರ್ಷಗಳ ಹಿಂದೆಯೇ ಈ ಶೋನನ್ನು ಭಾರತ ದಲ್ಲಿ ಪ್ರದರ್ಶಿಸುವ ಇಂಗಿತ ಹೊಂದಿದ್ದೆವು. ಆದರೆ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಭಾರತದಲ್ಲಿ ಬಿಸಿನೆಸ್ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಬಿಸಿನೆಸ್ ತಂತ್ರಗಳು ಸೇರಿದಂತೆ ಬಿಸಿನೆಸ್ ಸಂಬಂಧಿತ ಆಕ್ಟಿವಿಟೀಸ್ ಹೊಂದಿರುವ ಶೋ ಇದಾಗಿದ್ದು, ಜನರಿಗೆ ಮೆಚ್ಚುಗೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.