Monday, 9th December 2024

BBK 11: ಶಿಶಿರ್ Loves ಐಶ್ವರ್ಯ: ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು ಮತ್ತೊಂದು ಲವ್ ಸ್ಟೋರಿ?

Shishir loves Aishwarya

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಾದಿನಿಂದ ವೀಕ್ಷಕರು ಮನೆಯೊಳಗೆ ಟಾಸ್ಕ್​​, ಮುದ್ದಾದ ಮಾತುಕತೆಗಿಂತ ಹೆಚ್ಚು ಜಗಳಗಳನ್ನೇ ಕಂಡರು. ಆದರೀಗ ಮನೆ ಶಾಂತವಾಗಿದೆ ಎಂದು ಹೇಳುತ್ತಿದ್ದಾರೆ. ಜಗದೀಶ್ ಹಾಗೂ ರಂಜಿತ್ ಅವರನ್ನು ದೊಡ್ಮೆಯಿಂದ ಹೊರ ಕಳುಹಿಸಲಾಗಿದೆ. ಮನೆ ಮಂದಿಗೆ ಜಗದೀಶ್ ಹೋದ ಖುಷಿ ಒಂದುಕಡೆಯಾದರೆ ಅತ್ತ ರಂಜಿತ್ ಕೂಡ ತೆರಳಿರುವುದು ದುಃಖ ತರಿಸಿದೆ. ಇದರ ನಡುವೆ ಮನೆಯೊಳಗೆ ಹೊಸ ಲವ್ ಸ್ಟೋರಿ ಶುರುವಾದಂತಿದೆ.

ಧನು ಕೀರ್ತಿರಾಜ್ ಜೊತೆ ಇಷ್ಟೂ ದಿನ ಐಶ್ವರ್ಯಾ ಅವರು ಕ್ಲೋಸ್‌ ಆಗಿರುತ್ತಿದ್ದರು. ಆದರೆ, ಧರ್ಮ ಈಗ ಅನುಷಾ ಜೊತೆ ಹೆಚ್ಚು ಮಾತನಾಡುತ್ತಿದ್ದಾರೆ. ಅತ್ತ ಐಶ್ವರ್ಯ ಈ ವಿಚಾರಕ್ಕೆ ಬೇಸರಗೊಂಡಿದ್ದರು. ಆದರೆ, ಇದೀಗ ದಿಢೀರ್ ಎಂಬಂತೆ ಐಶ್ವರ್ಯ ಮತ್ತು ಶಿಶಿರ್ ತುಂಬಾ ಕ್ಲೋಸ್ ಆಗಿದ್ದಾರೆ. ಶಿಶಿರ್‌ ಬೆಚ್ಚನೆಯ ಅಪ್ಪುಗೆಯಲ್ಲಿ ಐಶು ಬಂಧಿಯಾಗಿದ್ದಾರೆ.

ಐಶ್ವರ್ಯಾ ಹಾಗೂ ಶಿಶಿರ್ ಒಂದೇ ಬೆಡ್​ಶೀಟ್ ಹೊತ್ತು ಕುಳಿತಿದ್ದಾರೆ. ಐಶ್ವರ್ಯಾ ಅವರ ಕೈಯಲ್ಲಿ ಕಪ್ ಇತ್ತು. ಅದರಲ್ಲಿ ಇದ್ದ ಬಿಸಿ ಕಾಫಿಯನ್ನು ಒಬ್ಬರಾದ ಬಳಿಕ ಒಬ್ಬರು ಹೀರಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಇಬ್ಬರ ಜೋಡಿಯ ತಮಾಷೆಗೆ ಸ್ಪರ್ಧಿಗಳು ಕೂಡ ನಕ್ಕು ನಲಿದಿದ್ದಾರೆ. ಇದನ್ನು ಕಂಡು ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಲವ್​ ಸ್ಟೋರಿ ಹುಟ್ಟಿದೆ ಎಂದಿದ್ದಾರೆ ನೆಟ್ಟಿಗರು.

ಜೈಲು ಸೇರಿದ ಚೈತ್ರಾ ಕುಂದಾಪುರ:

ಮನೆಮಂದಿಗೆ ಬಿಗ್ ಬಾಸ್ ಅಪ್ರಾಮಾಣಿಕ-ಕುತಂತ್ರಿ ಯಾರು ಎಂಬುದನ್ನು ತಿಳುಸಲು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅತಿ ಹೆಚ್ಚು ಮತ ಪಡೆದವರನ್ನು ಜೈಲಿಗೆ ಹಾಕಲಾಗಿದೆ. ಈ ಮೂಲಕ ಬಿಬಿಕೆ 11 ರಲ್ಲಿ ಜೈಲು ಕಾನ್ಸೆಪ್ಟ್ ಶುರುವಾಗಿದೆ. ಈ ಸೀಸನ್​ನ ಮೊದಲ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಸೆರೆಮನೆಗೆ ತೆರಳಿದ್ದಾರೆ. ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಬಿಗ್​ಬಾಸ್​ ಜೈಲಿಗೆ ಹೋಗಿದ್ದಾರೆ. ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.

BBK 11: ಬಿಗ್ ಬಾಸ್ ಮನೆಯೊಳಗೆ ಶುರುವಾಯಿತು ಜೈಲು ಶಿಕ್ಷೆ: ಮೊದಲು ಹೋಗಿದ್ದು ಯಾರು ನೋಡಿ