Thursday, 12th December 2024

BBK 11: ಬಿಗ್ ಬಾಸ್​ನಲ್ಲಿ ರೋಚಕ ತಿರುವು: ಶಿಶಿರ್​ಗೆ ಕೈಕೊಟ್ಟ ಚೈತ್ರಾ, ಏನು ಮಾಡ್ತಾರೆ ತ್ರಿವಿಕ್ರಮ್?

Shishir Shastry and Chaithra Kundapura

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಬಿಗ್ ಬಾಸ್ ನೀಡುತ್ತಿರುವ ಒಂದೊಂದು ಟಾಸ್ಕ್ ವೀಕ್ಷಕರನ್ನು ಹಿಡಿದು ಕೂರಿಸಿದೆ. ಸದ್ಯ ಮನೆಯಲ್ಲಿ ಜೋಡಿ ಟಾಸ್ಕ್ ನಡೆಯುತ್ತಿದೆ. ಸ್ವತಃ ಬಿಗ್ ಬಾಸ್ ಅವರೇ ಮನೆಯ ಸದ್ಯರನ್ನು ಜೋಡಿಯಾಗಿ ಆಯ್ಕೆ ಮಾಡಿದ್ದಾರೆ. ಇದರಲ್ಲಿ ಶಿಶಿರ್ ಶಾಸ್ತ್ರೀ ಹಾಗೂ ಚೈತ್ರಾ ಕುಂದಾಪುರ ಜೋಡಿಯಾಗಿದ್ದಾರೆ. ಇದೀಗ ಇವರಿಬ್ಬರ ಮಧ್ಯೆ ಬಿಗ್ ಬಾಸ್ ನೀಡಿರುವ ಟ್ವಿಸ್ಟ್​ಗೆ ದೊಡ್ಡ ಜಗಳ ಆಗಿದೆ.

ನಾಮಿನೇಷನ್​ನಿಂದ ಬಚಾವ್ ಮಾಡಿದ್ದ ಶಿಶಿರ್:

ನಾಮಿನೇಷನ್ ವಿಚಾರದಲ್ಲಿ ಜೋಡಿಗಳು ತಮ್ಮಲ್ಲೇ ಚರ್ಚಿಸಿ ತಮ್ಮಿಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕು ಎಂಬ ನಿಯಮವಿತ್ತು. 10 ನಿಮಿಷಗಳ ಒಳಗೆ ಇಬ್ಬರಲ್ಲಿ ಯಾರೆಂದು ಹೇಳದಿದ್ದರೆ ಇಬ್ಬರೂ ನಾಮಿನೇಟ್ ಆಗುತ್ತೀರಿ ಎಂಬ ಬಿಗ್ ಬಾಸ್ ಹೇಳಿದ್ದರು. ಆಗ ಏನೇ ಮನಸ್ತಾಪ, ಭಿನ್ನಾಭಿಪ್ರಾಯ ಇದ್ದರೂ ಅದನ್ನ ಬದಿಗಿಟ್ಟು ನಾಮಿನೇಷನ್‌ ವೇಳೆ ತಾವು ನಾಮಿನೇಟ್ ಆಗಿ ಚೈತ್ರಾ ಕುಂದಾಪುರ ಅವರನ್ನ ಶಿಶಿರ್ ಸೇಫ್ ಮಾಡಿದ್ದರು. ಆದರೀಗ ಶಿಶಿರ್​ಗೆನೇ ಚೈತ್ರಾ ಕೈಕೊಟ್ಟಿದ್ದಾರೆ.

ಬಿಗ್ ಬಾಸ್ ನೀಡಿದ ಟ್ವಿಸ್ಟ್ ಏನು?:

ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಕೆಲವರಿಗೆ ಬಿಗ್ ಬಾಸ್‌ ಆಫರ್ ಕೊಟ್ಟಿದ್ದಾರೆ. ಈ ಆಫರ್‌ನ ಚೈತ್ರಾ ಕುಂದಾಪುರ ಒಪ್ಪಿಕೊಂಡುಬಿಟ್ಟಿದ್ದಾರೆ. ಚೈತ್ರಾ ನಿರ್ಧಾರ ಕೇಳಿ ಶಿಶಿರ್ ಶಾಕ್ ಆಗಿದ್ದಾರೆ. ಚೈತ್ರಾ ಮೇಲೆ ಕೆಂಡಾಮಂಡಲರಾಗಿದ್ದಾರೆ. ಕೂಗಾಡಿ ರಂಪಾಟ ಮಾಡಿದ್ದಾರೆ. ನೀವು ಮಾಡಿದ್ದು ಎಷ್ಟು ಸರಿ ಎಂದು ಚೈತ್ರಾರನ್ನು ಪ್ರಶ್ನೆ ಮಾಡಿದ್ದಾರೆ.

ನಾನೇನು ಕಡ್ಲೆಪುರಿ ತಿಂತಿದ್ನಾ ಇಷ್ಟು ದಿನ ಎಂದು ತಿಳಿಸಿದ್ದಾರೆ. ತ್ರಿವಿಕ್ರಮ್ ಅವರು ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ ಎಂದು ಚೈತ್ರಾ ತಮ್ಮ ಕಾರಣ ಒದಗಿಸಿದ್ದಾರೆ. ಮಾನಸಿಕ ಅನ್ನೋ ಕಾರಣ ಕೊಡ್ತಾರೆ, ಇಷ್ಟು ದಿನ ಮಾನಸಿಕ ಏನಾಗಿತ್ತು?, ನಾಮಿನೇಷನ್​ ಅಂತಾ ಬಂದಾಗ ಅಯ್ಯೋ ಅಮ್ಮಾ ಅಂತಾ ಹೇಳಿಬಿಡ್ತಾರೆ. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್​​ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೈತ್ರಾ ಅವರ ಈ ನಿರ್ಧಾರದಿಂದ ಇಡೀ ವಾರದ ಟಾಸ್ಕ್‌ಗಳಿಂದ ಶಿಶಿರ್‌ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತ್ರಿವಿಕ್ರಮ್ ಜೊತೆಗೆ ಸೇರಿರುವ ಚೈತ್ರಾ ಏನು ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಅತ್ತ ಪ್ರೋಮೋ ನೋಡಿದ ವೀಕ್ಷಕರು ಕೂಡ ಚೈತ್ರಾ ನಿರ್ಧಾರವನ್ನ ತೀವ್ರವಾಗಿ ಖಂಡಿಸಿದ್ದು ಮನೆಯ ನಿಜವಾದ ಊಸರವಳ್ಳಿ ಎಂದು ಕಿಡಿಕಾರಿದ್ದಾರೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮುರಿದುಬಿತ್ತು ಮತ್ತೊಂದು ಫ್ರೆಂಡ್​ಶಿಪ್: ದೂರವಾದ ಧರ್ಮಾ-ಅನುಷಾ