Wednesday, 11th December 2024

BBK 11: ಬಿಗ್ ಬಾಸ್ ಮನೆಗೆ ಹೊಸ ಕ್ಯಾಪ್ಟನ್: ಶಿಶಿರ್ ಶಾಸ್ತ್ರಿ ಈಗ ದೊಡ್ಮನೆ ನಾಯಕ

Shishir Shastry

ಸ್ವರ್ಗ ಮತ್ತು ನರಕ ಎಂಬ ವಿಭಿನ್ನ ಕಾನ್ಸೆಪ್ಟ್​ನೊಂದಿಗೆ ಪ್ರಾರಂಭವಾದ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada) ಎರಡು ವಾರ ಮುಕ್ತಾಯಗೊಂಡಿದೆ. ಎರಡೇ ವಾರಕ್ಕೆ ನರಕದ ವಾಸಸ್ಥಳ ಕೂಡ ಪುಡಿ ಪುಡಿ ಆಗಿದೆ. ಇನ್ನುಂದೆ ಮನೆಯ ಎಲ್ಲ ಸದಸ್ಯರು ಒಟ್ಟಾಗಿ ಸ್ವರ್ಗದಲ್ಲಿ ನೆಲೆಸಲಿದ್ದಾರೆ. ಆದರೆ, ಸ್ವರ್ಗ ಸ್ವರ್ಗವಾಗಿ ಇರುತ್ತಾ ಅಥವಾ ನರಕವಾಗುತ್ತಾ ಎಂಬುದು ಮುಂದಿನ ದಿನಗಳಲ್ಲಿ ನೋಡಬೇಕು. ಇದರ ನಡುವೆ ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆ ಆಗಿದ್ದಾರೆ.

ಕ್ಯಾಪ್ಟನ್ ಟಾಸ್ಕ್ ಆಡಲು ನರಕ ನಿವಾಸಿಗಳಾದ ಶಿಶಿರ್ ಶಾಸ್ತ್ರಿ, ಚೈತ್ರಾ ಕುಂದಾಪುರ ಮತ್ತು ಸ್ವರ್ಗ ವಾಸಿ ಗೌತಮಿ ಜಾದವ್ ಸೆಲೆಕ್ಟ್ ಆಗಿದ್ದರು. ಇವರಿಗೆ ಬಿಗ್ ಬಾಸ್ ನೀಡಿದ್ದ ಬಲೆಯ ಆಟದಲ್ಲಿ ಶಿಶಿರ್ ಗೆದ್ದಿದ್ದಾರೆ. ಎರಡೂ ರೌಂಡ್‌ನಲ್ಲಿ ಶಿಶಿರ್ ಜಯಿಸಿ ಗೌತಮಿ ಮತ್ತು ಚೈತ್ರಾ ಅವರನ್ನು ಸೋಲಿಸಿ ದೊಡ್ಮನೆಯಲ್ಲಿ ಎರಡನೇ ವಾರ ಕ್ಯಾಪ್ಟನ್ ಆಗಿದ್ದಾರೆ.

ಶಿಶಿರ್ ಮೇಲೆ ಈಗ ದೊಡ್ಡ ಜವಾಬ್ದಾರಿ ಮತ್ತು ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ ಮೊದಲ ವಾರದ ಕ್ಯಾಪ್ಟನ್ ಆಗಿದ್ದ ಹಂಸ ಬಹುತೇಕ ಎಲ್ಲ ಕಡೆಗಳಲ್ಲಿ ಮತ್ತು ಟಾಸ್ಕ್​ಗಳಲ್ಲಿ ಎಡವಟ್ಟು ಮಾಡಿಕೊಂಡಿದ್ದರು. ಇವರ ತಪ್ಪಿನಿಂದ ಸ್ಪರ್ಧಿಗಳು ಗರಂ ಆಗಿದ್ದರು. ಆದರೆ, ಶಿಶಿರ್ ನಾಯಕತ್ವ ಹೇಗಿರಲಿದೆ ಎಂಬ ಕುತೂಹಲ ಇದೆ. ಯಾವುದೇ ವಿಚಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಶಿಶಿರ್ ಮನೆಯ ಸದಸ್ಯರಿಗೆ ಭರವಸೆ ಕೊಟ್ಟಿದ್ದಾರೆ.

ಈ ವಾರ ನೋ ಎಲಿಮಿನೇಷನ್:

ಬಿಗ್ ಬಾಸ್ ಮನೆಯಿಂದ ಹೊರಹೋಗಲು  ಈ ವಾರ 11 ಮಂದಿ ನಾಮಿನೇಟ್ ಆಗಿದ್ದರು. ಭವ್ಯಾ ಗೌಡ, ಧನರಾಜ್ ಆಚಾರ್, ಧರ್ಮ ಕೀರ್ತಿರಾಜ್, ರಂಜಿತ್, ತ್ರಿವಿಕ್ರಮ್, ಮಾನಸಾ, ಐಶ್ವರ್ಯಾ ಸಿಂಧೋಗಿ, ಗೋಲ್ಡ್ ಸುರೇಶ್, ಹಂಸ, ಜಗದೀಶ್ ಹಾಗೂ ಅನುಷಾ ರೈ ಡೇಂಜರ್ ಝೋನ್​ನಲ್ಲಿದ್ದಾರೆ. ಆದರೆ, ಈ ಬಾರಿ ಬಿಗ್ ಬಾಸ್ ಎಲಿಮಿನೇಷನ್ ವಿಚಾರದಲ್ಲಿ ದೊಡ್ಡ ಟ್ವಿಸ್ಟ್ ನೀಡಿದ್ದಾರೆ. ಅದೇ ಈ ವಾರ ನೋ ಎಲಿಮಿನೇಷನ್.

ಈ ವಾರ ವೋಟಿಂಗ್‌ ಲೈನ್‌ಗಳನ್ನ ಬಿಗ್‌ ಬಾಸ್‌ ತೆರೆದಿಲ್ಲ. ಅದು ಅಲ್ಲದೇ ಪ್ರತೀ ಸೀಸನ್‌ನಲ್ಲಿ ನವರಾತ್ರಿ ಸಮಯದಂದು ಯಾವುದೇ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿಲ್ಲ. ಹೀಗಾಗಿ ಬಿಗ್ ಬಾಸ್ ಎಲ್ಲಾ ಸ್ಪರ್ಧಿಗಳಿಗೆ ಒಂದು ವಾರದ ಇಮ್ಮ್ಯುನಿಟಿ ನೀಡಿದೆ. ಹಬ್ಬದ ಕಾರಣ ಈ ವಾರ ಎಲ್ಲರೂ ಸೇಫ್ ಆಗಿದ್ದಾರೆ. ಆದರೆ, ಮುಂದಿನ ವಾರ ಡಬಲ್ ಎಲಿಮಿನೇಶನ್ ಇರುವ ಸಾಧ್ಯತೆ ಇದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಷನ್ ಟ್ವಿಸ್ಟ್: ನಾಮಿನೇಟ್ ಆದವರು ಏನಾಗಲಿದ್ದಾರೆ ನೋಡಿ