Wednesday, 11th December 2024

ತೆಲುಗು ರಿಮೇಕ್ ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಶ್ರುತಿ ಹಾಸನ್​

ಹೈದರಾಬಾದ್​: ತೆಲುಗಿನ ಚಿತ್ರ ಅರ್ಜುನ್​ ರೆಡ್ಡಿ ಹಿಂದಿ ರಿಮೇಕ್​ ಕಬೀರ್​ ಸಿಂಗ್​ ಚಿತ್ರದಲ್ಲಿ ನಟಿಸಿದ ಕಿಯಾರಾ ಬಹುಬೇಡಿಕೆಯ ನಟಿಯಾಗಿದ್ದಾರೆ. ಇದೀಗ ಕಮಲ್​ ಹಾಸನ್​ ಪುತ್ರಿ ಶ್ರುತಿ ಹಾಸನ್​ ‘ಲಸ್ಟ್​ ಸ್ಟೋರಿ’ ತೆಲುಗು ರಿಮೇಕ್​ನಲ್ಲಿ ಕಿಯಾರಾ ಪಾತ್ರವನ್ನು ನಿರ್ವಹಿಸಲಿದ್ದಾರೆಂದು ತಿಳಿದುಬಂದಿದೆ.

ಹಿಂದಿ ಲಸ್ಟ್​ ಸ್ಟೋರಿ ಚಿತ್ರದಲ್ಲಿ ಹಸ್ತಮೈಥುನ ದೃಶ್ಯದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಕಿಯಾರಾ ಸೈ ಎನಿಸಿಕೊಂಡಿದ್ದರು. ಮಹೇಶ್​ ಬಾಬು ನಟನೆಯ ‘ಭರತ್​ ಅನೆ ನೇನು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ‘ಲಸ್ಟ್​ ಸ್ಟೋರಿ’ ಚಿತ್ರದ ಮೂಲಕ ಮನೆ ಮಾತಾದವರು.

ಚಿತ್ರದಲ್ಲಿ ಕಿಯಾರಾದ್ದು ಯುವ ಹೆಂಡತಿಯ ಪಾತ್ರ. ವ್ಯಕ್ತಿ (ವಿಕ್ಕಿ ಕುಶಾಲ್​)ಯೊಂದಿಗೆ ಅರೇಂಜ್​ ಮ್ಯಾರೇಜ್​ ಆಗುವ ಕಿಯಾರಾ ಳನ್ನು ಪತಿ ತುಂಬಾ ಪ್ರೀತಿಸುತ್ತಾನೆ. ಆದರೆ, ದೈಹಿಕ ಸಂಪರ್ಕ ವಿಷಯ ಬಂದಾಗ ಪತ್ನಿಗೆ ತೃಪ್ತಿಯಾಗುವುದಿಲ್ಲ. ಹೀಗಾಗಿ ತನ್ನನ್ನು ತಾನೇ ಸಂತೃಪ್ತಿಗೊಳಿಸಲು ಮುಂದಾಗುತ್ತಾಳೆ. ಈ ಮೂಲಕ ಇಡೀ ಕುಟುಂಬವನ್ನು ಪೇಚಿಗೆ ಸಿಲುಕಿಸುತ್ತಾಳೆ. ಇದು ಲಸ್ಟ್​ ಸ್ಟೋರಿ ಚಿತ್ರದ ಕತೆ.

ಕಿಯಾರಾ ಪಾತ್ರಕ್ಕೆ ಇದಕ್ಕೂ ಮುನ್ನ ಅಮಲಾ ಪೌಲ್​ ಮತ್ತು ಈಶಾ ರೆಬ್ಬಾ ಸೇರಿದಂತೆ ಕೆಲವು ನಟಿ ಹೆಸರು ಕೇಳಿಬಂದಿತ್ತು. ಆದರೆ, ಶ್ರುತಿ ಹಾಸನ್​ ಹೆಸರು ಕೇಳಿಬರುತ್ತಿದ್ದು,