Friday, 13th December 2024

ನಾಲ್ಕು ವರ್ಷ ಪೂರೈಸಿದ ಸ್ಮೈಲಿಂಗ್ ಕ್ವೀನ್‍

ಬೆಂಗಳೂರು: ರಕ್ಷಿತ್‍ ಶೆಟ್ಟಿಯವರ ಚಿತ್ರ ಕಿರಿಕ್‍ ಪಾರ್ಟಿ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ನಾಲ್ಕು ವರ್ಷ ಪೂರೈಸಿದ್ದಾರೆ.

ಈ ನಾಲ್ಕು ವರ್ಷಗಳ ಪಯಣದಲ್ಲಿ ಖ್ಯಾತನಾಮ ನಟರೊಂದಿಗೆ ನಟಿಸಿ ಸೈಎನಿಸಿಕೊಂಡರು. ಸದ್ಯ ಈಕೆಯ ನಾಲ್ಕು ವರ್ಷದ ಸಿನಿಮಾ ಪಯಣ ಟ್ವಿಟರ್‍ನಲ್ಲಿ ಟ್ರೆಂಡ್‍ ಆಗಿದೆ. ಅಭಿಮಾನಿಗಳು ಕರ್ನಾಟಕದ ಕ್ರಶ್‍, ಸೌಥ್‍ ಇಂಡಿಯಾ ಕ್ರಶ್‍, ಸಿನಿಮಾ ರಂಗದಲ್ಲಿ ರಶ್ಮಿಕಾಳ ಮೂರು ವರ್ಷ, ಗೀತಾ ಗೋವಿಂದಂ, ಡಿಯರ್‍ ಕಾಮ್ರೆಡ್‍ ಮುಂತಾದ ತೆಲುಗು ಸಿನೆಮಾದಲ್ಲೂ ನಟಿಸಿ ಬಹುಭಾಷಾ ನಟಿ ಎನಿಸಿಕೊಳ್ಳುವಲ್ಲಿಯೂ ಹಿಂದೆ ಬಿದ್ದಿಲ್ಲ.

ಯಾವುದೇ ಗಾಡ್ ಫಾದರ್‌ ಇಲ್ಲದೆ, ಸಿನೆಮಾ ರಂಗದಲ್ಲಿ ಮುಂದೆ ಸಾಗುತ್ತಿರುವ ನಟಿ, ರಶ್ಮಿಕಾ ಹಿರಿಯ ನಟರೊಂದಿಗೆ ನಟಿಸಿದ್ದರೆ.

ಅಂಜನಿಪುತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‍, ದರ್ಶನ್‍ ಜತೆ, ತೆಲುಗುವಿನಲ್ಲಿ ವಿಜಯ್‍ ದೇವರಕೊಂಡ ಜತೆ ಗೀತಾ ಗೋವಿಂದಂ ಹಾಗೂ ಡಿಯರ್‌ ಕಾಮ್ರೇಡ್‍ ಜತೆ ಕೂಡ ನಟಿಸಿದರು.