Sunday, 13th October 2024

ನಾಳೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

ಚೆನ್ನೈ : ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾದ ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ(74) ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ, ನಾಳೆ(ಶನಿವಾರ) ಬೆಳಿಗ್ಗೆ ಚೆನ್ನೈನಲ್ಲಿರುವ ರೆಡ್ ಹಿಲ್ಸ್ ಫಾರಂ ಹೌಸ್ ನಲ್ಲಿ ನೆರವೇರಲಿದೆ.

ಮೃತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆಯನ್ನು ಫಾರಂ ಹೌಸ್ ನಲ್ಲಿ ಅಂತ್ಯಕ್ರಿಯೆಗೆ ನಿರ್ಧಾರ ಕೈಗೊಳ್ಳಲಾಗಿದೆ. ತಾಮರೈಪಾಕಂ ಬಳಿಯಲ್ಲಿರುವ ಎಸ್ ಪಿ ಬಿಯವರ ರೆಡ್ ಹಿಲ್ಸ್ ಫಾರಂ ಹೌಸ್ ಅಂತ್ಯಕ್ರಿಯೆ ನೆರವೇರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ಹಾಗು ಶನಿವಾರ ಬೆಳಿಗ್ಗೆ 10 ಗಂಟೆಯವರೆಗೆ ಮೃತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತಿದೆ. ಬಳಿಕೆ ತಾಮರೈಪಾಕಂ ಬಳಿಯ ರೆಡ್ ಹಿಲ್ಸ್ ಫಾರಂ ಹೌಸ್ ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.