Thursday, 3rd October 2024

ದೀಪಿಕಾಳನ್ನು ನೆನಪಿಸಿದ ಶಾರೂಖ್‌ ಪುತ್ರಿ ಸುಹಾನಾ ಉಟ್ಟ ಸೀರೆ

ಮುಂಬೈ:  ಸೋಶಿಯಲ್ ಮೀಡಿಯಾ ಟ್ರೆಂಡಿಂಗ್‌ ನಲ್ಲಿರುವುದು ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಪುತ್ರಿ ಸುಹಾನಾ.

ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಶೇರ್ ಮಾಡಿದ ಫೋಟೊ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಕೆಲವರಂತೂ ದೀಪಿಕಾ ಪಡುಕೋಣೆಯನ್ನು ನೋಡಿದಂತೆ ಆಗುತ್ತೆ ಎನ್ನುತ್ತಿದ್ದಾರೆ. ಶಾರುಖ್ ಪುತ್ರಿ ಸುಹಾನಾ ಖಾನ್ ಬಾಲಿವುಡ್‌ಗೆ ಬಂದೇ ಬಿಟ್ಟಳು ಎನ್ನುವಷ್ಟು ಹರ್ಷ ವ್ಯಕ್ತಪಡಿಸು ತ್ತಿದ್ದಾರೆ.

ವಿದೇಶದಲ್ಲಿ ಓದುತ್ತಿರುವಾಗಲೇ ಸುಹಾನಾ ಖಾನ್ ಸಿನಿಮಾ ಬಗ್ಗೆನೇ ಹೆಚ್ಚು ಆಸಕ್ತಿ ಹೊಂದಿದ್ದಳು. ಶಾರ್ಟ್ ಫಿಲ್ಮ್ ನಿಂದ ಹಿಡಿದು ಸಿನಿಮಾ ಬಗ್ಗೆ ಬೇಕಾಗಿರುವ ವಿದ್ಯೆಗಳನ್ನು ಅಭ್ಯಾಸ ಮಾಡಿದ್ದಾಳೆ. ಈ ಮಧ್ಯೆ ಸೋಶಿ ಯಲ್ ಮೀಡಿಯಾದಲ್ಲಿ ಹರಿದಾ ಡುತ್ತಿರುವ ಈ ಫೋಟೊಗಳು ಈ ಸಂಗತಿಯನ್ನು ನಿಜ ಮಾಡಲು ಹೊರಟಿವೆ.

ಸುಹಾನಾ ಖಾನ್ ಕೆಂಪು ಸೀರೆಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾಳೆ. ಸೀರೆಯುಟ್ಟು ಪೋಸ್ ಕೊಟ್ಟ ಫೋಟೊ ಸೋಶಿ ಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆ ಶಾರುಖ್ ಖಾನ್ ಅಭಿಮಾನಿಗಳ ಖುಷಿ ಮುಗಿಲು ಮುಟ್ಟಿದೆ.

ಸೀರೆಯಲ್ಲಿ ಸುಹಾನಾಳನ್ನು ಕಂಡು ದೀಪಿಕಾ ಪಡುಕೋಣೆ ನೋಡಿದಂತೆ ಆಗುತ್ತೆ ಎಂದು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಖಾನ್ ಫೋಟೊಗಳು ವೈರಲ್ ಆಗುತ್ತಿದ್ದಂತೆ ಶಾರುಖ್ ಪುತ್ರಿ ದಿಲ್ ಖುಷ್ ಆಗಿದ್ದಾಳೆ.

ಮಗಳನ್ನು ಕಂಡು ಗೌರಿ ಖಾನ್ ಖುಷಿ ವ್ಯಕ್ತಪಡಿಸಿದ್ದಾರೆ. ಸದ್ಯ ಸುಹಾನಾ ಖಾನ್ ಬಾಲಿವುಡ್ ಎಂಟ್ರಿ ಕೊಡಲು ವೇದಿಕೆ ಸಜ್ಜಾಗುತ್ತಿದೆ.

ಸದ್ಯ ಬಾಲಿವುಡ್‌ನಲ್ಲಿ ಗಾಳಿ ಸುದ್ದಿಯೊಂದು ಹರಿದಾಡುತ್ತಿದ್ದು, ನಿರ್ದೇಶಕಿ ಜೋಹಾ ಅಖ್ತರ್ ಸಿನಿಮಾ ಮೂಲಕ ಸುಹಾನಾ ಖಾನ್ ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾಳೆ ಎಂದು ಹೇಳಲಾಗುತ್ತಿದೆ.