Wednesday, 11th December 2024

ತಿಪಟೂರು ರಘು ನಿಧನಕ್ಕೆ ಸುನೀಲ್ ಪುರಾಣಿಕ್ ಸಂತಾಪ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರ, ನಟ ಹಾಗೂ ನಿರ್ಮಾಪಕ ತಿಪಟೂರು ರಘು ನಿಧನಕ್ಕೆ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಬೆಂಕಿ ಬಿರುಗಾಳಿ, ಲೇಡಿಸ್​ ಹಾಸ್ಟೆಲ್’​, ನಾಗ ಕಾಳ ಭೈರವ, ಆಕ್ರೋಶ, ಕಲ್ಲು ವೀಣೆ ನುಡಿಯಿತು ಸೇರಿದಂತೆ ಹಲವಾರು ಚಿತ್ರ ಗಳನ್ನು ನೀಡಿದ್ದ ತಿಪಟೂರು ರಘು ಅವರು, 1965ರಿಂದಲೂ ಕನ್ನಡ ಚಿತ್ರರಂಗದಲ್ಲಿ ನಟನಾಗಿ, ಸಹಾಯಕ ನಿರ್ದೇಶಕನಾಗಿ ತೊಡಗಿಕೊಂಡಿದ್ದರು.

ವಯೋಸಹಜ ಕಾಯಿಲೆಯಿಂದ ಅವರು ನಿಧನರಾದ ಸುದ್ದಿ ತಿಳಿದು ಆಘಾತ ವಾಯಿತು. ತಿಪಟೂರು ರಘು ಅವರ ನಿಧನದಿಂದ ಕನ್ನಡ ಚಿತ್ರರಂಗದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಭಗವಂತ ಕರುಣಿಸಲಿ ಎಂದು ಪುರಾಣಿಕ್ ತಮ್ಮ ಸಂತಾಪ ದಲ್ಲಿ ತಿಳಿಸಿದ್ದಾರೆ.