Friday, 20th September 2024

ಇಂದು ಸಂಜೆ ಕಿರುತೆರೆಯಲ್ಲಿ ಟಗರು ಪಲ್ಯ ಸಿನಿಮಾ ಪ್ರಸಾರ

ಬೆಂಗಳೂರು: ಳೆದ ವರ್ಷ ಅಕ್ಟೋಬರ್ 27ರಂದು ತೆರೆ ಕಂಡು ಸೂಪರ್ ಡೂಪರ್ ಆಗಿದ್ದ ಫ್ಯಾಮಿಲಿ ಎಂಟರ್ಟೈನರ್ ‘ಟಗರು ಪಲ್ಯ’ ಸಿನಿಮಾ ಭಾನುವಾರ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ಸಂಜೆ 6 ಗಂಟೆಗೆ ಈ ಚಿತ್ರ ವೀಕ್ಷಿಸಬಹುದಾಗಿದೆ.

ಉಮೇಶ್ ಕೆ ಕೃಪಾ ನಿರ್ದೇಶನದ ಈ ಚಿತ್ರದಲ್ಲಿ ನಾಗಭೂಷಣ ಮತ್ತು ಪ್ರೇಮ್ ಪುತ್ರಿ ಅಮೃತ ಪ್ರಮುಖ ಪಾತ್ರದಲ್ಲಿದ್ದು, ಶೃತಿ, ಶರತ್ ಲೋಹಿತಾಶ್ವ, ಚಂದ್ರಕಲಾ ಮೋಹನ್, ರಂಗಾಯಣ ರಘು, ವಾಸಕಿ ವೈಭವ್, ವೈಜನಾಥ್ ಬಿರಾದರ್ ತೆರೆ ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್ ತಮ್ಮ ಡಾಲಿ ಪಿಚ್ಚರ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಧು ತುಂಬಾ ಕೆರೆ ಅವರ ಸಂಕಲನವಿದೆ.