Wednesday, 11th December 2024

ತಲೈವಾ ಕೊರೊನಾ ವರದಿ ನೆಗೆಟಿವ್

ಹೈದ್ರಾಬಾದ್:‌ ಸೂಪರ್ ಸ್ಟಾರ್ ರಜನಿಕಾಂತ್ ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಹೈದರಾಬಾದ್ʼನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಅಪೋಲೋ ಆಸ್ಪತ್ರೆ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು, ‘ರಕ್ತದೊತ್ತಡದಿಂದಾಗಿ ರಜನಿ ಕಾಂತ್ ಅವರಿಗೆ ಸಂಪೂರ್ಣ ವಿಶ್ರಾಂತಿಗೆ ಸೂಚಿಸಲಾಗಿದೆ. ಅವರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಅವರನ್ನ ಭೇಟಿ ಮಾಡಲು ಯಾವುದೇ ಸಂದರ್ಶಕ ರಿಗೆ ಅವಕಾಶ ನೀಡಲಾಗುವುದಿಲ್ಲ’ ಎಂದಿದೆ.

ರಕ್ತದೊತ್ತಡದಲ್ಲಿ ತೀವ್ರ ಏರುಪೇರು ಕಂಡು ಬಂದಿತ್ತು. ತೀವ್ರ ನಿಗಾದಲ್ಲಿರಿಸಲಾಗಿದೆ. ಏರಿಳಿತದ ರಕ್ತದೊತ್ತಡ ಮತ್ತು ಆಯಾಸದ ಹೊರತಾಗಿ ಅವ್ರಿಗೆ ಬೇರೆ ಯಾವುದೇ ರೋಗ ಲಕ್ಷಣಗಳಿರುವುದಿಲ್ಲ ಮತ್ತು ಆರೋಗ್ಯ ಸ್ಥಿರವಾಗಿದೆ’ ಎಂದು ಆಸ್ಪತ್ರೆ ತಿಳಿಸಿದೆ.

ಡಿ.22ರಂದು ರಜನಿಕಾಂತ್ ಕೊರೊನಾ ವೈರಸ್ʼನ ನೆಗೆಟಿವ್ ಪರೀಕ್ಷೆ ಮಾಡಿದ್ದರು. ಕಳೆದ ಇನ್ನು 10 ದಿನ ಗಳಿಂದ ಹೈದರಾ ಬಾದ್ʼನಲ್ಲಿ ರಜನಿಕಾಂತ್ ತಮ್ಮ ‘ಅನ್ನಾತೆ’ ಚಿತ್ರದ ಶೂಟಿಂಗ್ʼನಲ್ಲಿದ್ದರು.