Saturday, 9th December 2023

ಫೆಬ್ರವರಿಯಲ್ಲಿ ನಟಿ ತಮನ್ನಾ – ನಟ ವಿಜಯ್ ವರ್ಮಾ ವಿವಾಹ…!

ಹೈದರಾಬಾದ್: ನಟಿ ತಮನ್ನಾ ಮತ್ತು ನಟ ವಿಜಯ್ ವರ್ಮಾ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ. ಹೆಚ್ಚೆಚ್ಚು ಪ್ರೀತಿ ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ವಿಜಯ್ ವರ್ಮಾ ಖಚಿತ ಪಡಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

ಆದರೆ, ನಂತರದ ದಿನಗಳಲ್ಲಿ ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!