Friday, 13th December 2024

ತಮಿಳು ನಟ ಇಂದ್ರಕುಮಾರ್ ಆತ್ಮಹತ್ಯೆ

ಚೆನ್ನೈ: ತಮಿಳು ನಟ ಸಂದೀಪ್ ನಹರ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಮಾಸುವ ಮುನ್ನವೇ ಇನ್ನೊಬ್ಬ ಪ್ರತಿಭಾನ್ವಿತ ತಮಿಳು ನಟ ಇಂದ್ರಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಂದ್ರಕುಮಾರ್ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲಾಗಿದೆ ಎಂದು ವರದಿ ಮಾಡಿದೆ.

25 ವರ್ಷ ವಯಸ್ಸಿನ ಇಂದ್ರಕುಮಾರ್ ಶ್ರೀಲಂಕಾದ ತಮಿಳು ಮತ್ತು ಚೆನ್ನೈನ ನಿರಾಶ್ರಿತರ ಶಿಬಿರದಲ್ಲಿ ಉಳಿದಿದ್ದರು.