Friday, 13th December 2024

ಹಿರಿಯ ತೆಲುಗು ನಟ ಕೃಷ್ಣ ನಿಧನ

ಹೈದರಾಬಾದ್: ಹಿರಿಯ ತೆಲುಗು ನಟ ಕೃಷ್ಣ (80 ) ಅವರು ಹೃದಯಾಘಾತದಿಂದ ಚಿಕಿತ್ಸೆ ಪಡೆಯುತ್ತಿದ್ದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ನಿಧನರಾದರು.

ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ ಶ್ರೀ ಕೃಷ್ಣ ಅವರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೃದಯ ಸ್ತಂಭನದ ನಂತರ ಅವರಿಗೆ ನುರಿತ ವೈದ್ಯರ ತಂಡವು ಚಿಕಿತ್ಸೆ ನೀಡುತ್ತಿದ್ದರು. ಮಂಗಳವಾರ ನಟ ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶ್ರೀ ಕೃಷ್ಣಅವರು 350 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಕಾಲದ ಅಗ್ರ ನಟರಲ್ಲಿ ಇವರು ಒಬ್ಬರಾಗಿದ್ದರು. ಅವರು ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. ಅವರಿಗೆ 2009ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶ್ರೀ ಕೃಷ್ಣಅವರು 1980 ರ ದಶಕದಲ್ಲಿ ಕಾಂಗ್ರೆಸ್ ಸೇರಿ ಸಂಸದರಾದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಮರಣದ ನಂತರ ರಾಜಕೀಯ ತೊರೆದರು. ಅವರ ಪತ್ನಿ ಇಂದಿರಾ ದೇವಿ ಸೆಪ್ಟೆಂಬರ್ ನಲ್ಲಿ ನಿಧನರಾದರು. ಅವರ ಹಿರಿಯ ಮಗ ರಮೇಶ್ ಬಾಬು ಜನವರಿಯಲ್ಲಿ ನಿಧನರಾದರು.