Thama movie OTT : ರಶ್ಮಿಕಾ ಮಂದಣ್ಣ ನಟನೆಯ `ಥಾಮಾ' ಸಿನಿಮಾ ಒಟಿಟಿ ರಿಲೀಸ್ ಯಾವಾಗ?
ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಭಾಗವಾಗಿರುವ ಈ ಹಾರರ್ ಕಾಮಿಡಿ (Horror Comedy Movie) ಚಿತ್ರವನ್ನು ಆದಿತ್ಯ ಸರ್ಪೋತರ್ ನಿರ್ದೇಶಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್ ಸ್ಟೋರಿ (Love story) ಕೂಡ ಇದೆ. ‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಥಾಮಾ ಸಿನಿಮಾ -
ಆಯುಷ್ಮಾನ್ ಖುರಾನಾ (Ayushmann Khurrana) ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಥಾಮಾ' ಚಿತ್ರ ಇತ್ತೀಚೆಗೆ ತೆರೆಗೆ ಬಂದಿತು. ಮ್ಯಾಡಾಕ್ ಹಾರರ್ ಕಾಮಿಡಿ ಯೂನಿವರ್ಸ್‌ನ ಭಾಗವಾಗಿರುವ ಈ ಹಾರರ್ ಕಾಮಿಡಿ (Horror Comedy Movie) ಚಿತ್ರವನ್ನು ಆದಿತ್ಯ ಸರ್ಪೋತರ್ ನಿರ್ದೇಶಿಸಿದ್ದಾರೆ. ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ. ಇದರ ಜೊತೆಗೆ ಒಂದು ಲವ್ ಸ್ಟೋರಿ (Love story) ಕೂಡ ಇದೆ. ಈ ಸಿನಿಮಾ ಬುಕ್ ಮೈ ಶೋ ನಲ್ಲಿ ಒಳ್ಳೆಯ ರೇಟಿಂಗ್ ಕೂಡ ಪಡೆದುಕೊಂಡಿತ್ತು.
ಸ್ಟ್ರೀಮಿಂಗ್ ಎಲ್ಲಿ?
ಇತ್ತೀಚಿನ ಸುದ್ದಿಗಳ ಪ್ರಕಾರ, ' ಥಾಮಾ ' ಡಿಸೆಂಬರ್ 16 ರಂದು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಮೆಜಾನ್ ಪ್ರೈಮ್ ವಿಡಿಯೋ ಪೋಸ್ಟ್-ಥಿಯೇಟ್ರಿಕಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿದೆ. ಈ ಚಿತ್ರವು ಡಿಸೆಂಬರ್ ಮೊದಲ ವಾರದಲ್ಲಿ ಪ್ರೈಮ್ ವಿಡಿಯೋದಲ್ಲಿ ಬಾಡಿಗೆ ಆಧಾರದ ಮೇಲೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನೂ ಯಾವುದನ್ನೂ ದೃಢೀಕರಿಸಲಾಗಿಲ್ಲವಾದರೂ, ಊಹಾಪೋಹಗಳು ವೈರಲ್ ಆಗಿವೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
ಯಾರೆಲ್ಲ ಇದ್ದಾರೆ?
ಡಿಜಿಟಲ್ ಪ್ಲಾಟ್‌ಫಾರ್ಮ್‌ನಿಂದ ಅಧಿಕೃತ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ. 'ಥಾಮಾ' ಚಿತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ, ಪರೇಶ್ ರಾವಲ್, ಫೈಸಲ್ ಮಲಿಕ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ದಿನೇಶ್ ವಿಜನ್ ಈ ಚಿತ್ರವನ್ನು ಮ್ಯಾಡಾಕ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.
ಹಾರರ್ ಕಾಮಿಡಿ ಚಿತ್ರ "ಥಾಮಾ" ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸಂಪೂರ್ಣವಾಗಿ ರಂಜಿಸಿತು. ಆಯುಷ್ಮಾನ್ ಖುರಾನಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ ಈ ಚಿತ್ರವು ತನ್ನ ಆಕರ್ಷಕ ಕಥೆಯಿಂದ ಎಲ್ಲರನ್ನೂ ಮೆಚ್ಚಿಸಿತು. "ಥಾಮಾ" ಕೂಡ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು.
ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಯಾವುದೇ ಯಶಸ್ವಿ ಚಲನಚಿತ್ರವು ಥಿಯೇಟರ್‌ನಲ್ಲಿ ಬಿಡುಗಡೆಯಾದ 45-60 ದಿನಗಳ ಒಳಗೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವುದನ್ನು ಹೆಚ್ಚಾಗಿ ಕಾಣಬಹುದು. ನಟ ಆಯುಷ್ಮಾನ್ ಖುರಾನಾ ಅವರ ಥಾಮಾ ಚಿತ್ರದಲ್ಲೂ ಇದೇ ರೀತಿಯ ಪ್ರವೃತ್ತಿ ಕಂಡುಬರುತ್ತಿದೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿಗೆ ಆಟ! ಕ್ಯಾಪ್ಟನ್ ಮಾಳುಗೆ ಪ್ರಾಣ ಸಂಕಟ
"ಥಾಮಾ" ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, "ಥಾಮಾ" ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹121 ಕೋಟಿ ಗಳಿಸಿದೆ, ಆದರೆ ವಿಶ್ವಾದ್ಯಂತ ಅದರ ಗಳಿಕೆ ₹165 ಕೋಟಿಯನ್ನು ಮೀರಿದೆ. ‘ಮುಂಜ್ಯ’, ‘ಕುಕುಡ’ ರೀತಿಯ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ ಆದಿತ್ಯ ಸರ್ಪೋತ್ದಾರ್ ಅವರು ‘ಥಾಮಾ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಹಾರರ್ ಕಾಮಿಡಿ ಸಿನಿಮಾಗಳನ್ನು ನಿರ್ಮಿಸಿ ಗಮನ ಸೆಳೆದ ದಿನೇಶ್ ವಿಜನ್ ಅವರ ‘ಮ್ಯಾಡಾಕ್’ ನಿರ್ಮಾಣ ಮಾಡಿದೆ.