Saturday, 30th September 2023

‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಈಗ ಸ್ಟ್ರೀಮ್ ಆಗುತ್ತಿದೆ!

ವಿವೇಕ್ ರಂಜನ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿಯವರ ಝೀ5 ನ ಇತ್ತೀಚಿನ ಮೂಲ ಸರಣಿ 

ಮುಂಬೈ: ಆಗಸ್ಟ್ 2023: ಭಾರತದ ಅತಿದೊಡ್ಡ ಸ್ವದೇಶಿ ಒಟಿಟಿ ವೇದಿಕೆ ಮತ್ತು ಬಹುಭಾಷಾ ಕಥಾಸಂಗಮವಾದ ಝೀ5 ಇಂದು ತನ್ನ ಮುಂಬರುವ ಸರಣಿಯಾದ ‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಅನ್ನು ಬಿಡುಗಡೆ ಮಾಡಿತು.

ವಿಮರ್ಶಕರಿಂದ ಮೆಚ್ಚುಗೆ ಪಡೆದ ಚಿತ್ರವಾದ ದಿ ಕಾಶ್ಮೀರ್ ಫೈಲ್ಸ್‌ನ ಅತ್ಯದ್ಭುತವಾದ ಯಶಸ್ಸಿನ ನಂತರ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕರಾದ ವಿವೇಕ್ ರಂಜನ್ ಅಗ್ನಿಹೋತ್ರಿ ಈ ಚಿತ್ರದ ಮುಂದುವರಿದ ಭಾಗವು ಇನ್ನಷ್ಟು ಸತ್ಯಗಳನ್ನು ತೆರೆದಿಡುತ್ತದೆ ಮತ್ತು ನಡುಕ ಹುಟ್ಟಿಸುವಂತಿರುತ್ತಿದೆ ಎಂದು ಭರವಸೆ ನೀಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ಮತ್ತು ಪಲ್ಲವಿ ಜೋಶಿ ಅವರ ಐಎಮ್ ಬುದ್ಧ ಎಂಟರ್‌ಟೇನ್‌ಮೆಂಟ್ ಮತ್ತು ಮೀಡಿಯಾ ಎಲ್ಎಲ್‌ಪಿ ನಿರ್ಮಿಸಿರುವ 7 ಭಾಗಗಳ ಸರಣಿಯು ಇಂದು ಝೀ5 ನಲ್ಲಿ ಪ್ರೀಮಿಯರ್ ಆಗುತ್ತಿದೆ.

ನಿಜ ಜೀವನದ ಉಪಕಥೆಗಳು, ಬದುಕುಳಿದವರ ಸಾಕ್ಷ್ಯಗಳು ಮತ್ತು ಸಂಗ್ರಹಿಸಲಾದ ಫೂಟೇಜ್‌ಗಳ ಮೂಲಕ ಹೆಣೆದಿರುವ ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್, 1990ರ ದಶಕದಲ್ಲಿ ಕಣಿವೆಯಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಸಾಮೂ ಹಿಕ ನಿರ್ಗಮನಕ್ಕೆ ಕಾರಣವಾದ ಘಟನೆಗಳು, ತಪ್ಪುಗಳು, ಅಪರಾಧಗಳು ಮತ್ತು ಸಂದರ್ಭಗಳನ್ನು ಒಳಗೊಂಡ ಐತಿಹಾಸಿಕ ಮತ್ತು ಜನಾಂಗೀಯ ವಿವರಗಳ ಮೇಲೆ ಬೆಳಕು ಚೆಲ್ಲುತ್ತದೆ. ಇದು 370ನೇ ವಿಧಿಯನ್ನು ರದ್ದುಗೊಳಿಸಲು ಕಾರಣವಾದ ಪರಿಸ್ಥಿತಿ ಮತ್ತು ಇಂದು ಕಾಶ್ಮೀರದ ಮೇಲೆ ಅದರ ಪರಿಣಾಮಗಳನ್ನು ನಿರೂಪಿಸುತ್ತದೆ.

ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಕೆಲಸಕ್ಕಾಗಿ 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಡಾ.ಮೀನಾಕ್ಷಿ ಜೈನ್, ‘ದಿ ಲಾಸ್ಟ್ ಕ್ವೀನ್ ಆಫ್ ಕಾಶ್ಮೀರ್’ ಮತ್ತು ‘ಡಾನ್: ದ ವಾರಿಯರ್ ಪ್ರಿನ್ಸೆಸ್ ಅಪ್ ಕಾಶ್ಮೀರ್; ಶೇಶ್ ಪಾಲ್ ವೈದ್ – ಜಮ್ಮು ಮತ್ತು ಕಾಶ್ಮೀರದ ಮಾಜಿ ಪೊಲೀಸ್ ಮಹಾನಿರ್ದೇಶಕರು; ಮನೋಜ್ ರಘುವಂಶಿ – ಮಾಜಿ ಟಿವಿ ಪತ್ರಕರ್ತರು ಮತ್ತು ಜುಲೈ 1989 ರಲ್ಲಿ ಕಾಶ್ಮೀರ ದಲ್ಲಿ ಭುಗಿಲೆದ್ದ ಭಯೋತ್ಪಾದನೆಯ ಬಗ್ಗೆ ಪ್ರಮುಖ ವರದಿ ಮಾಡಿದ ಮೊದಲ ಪತ್ರಕರ್ತರು; ತೇಜ್ ಟಿಕೂ – ನಿವೃತ್ತ ಕರ್ನಲ್ ಮತ್ತು 1971 ರ ಇಂಡೋ-ಪಾಕ್ ಯುದ್ಧದ ಅನುಭವಿ ಮತ್ತು ‘ಕಾಶ್ಮೀರ್: ದ ಅಬಾರಿಜಿನ್ಸ್ ಎಂಡ್ ದೆರ್ ಎಕ್ಸೋಡಸ್’ ಲೇಖಕ ರಂಥ ತಜ್ಞರೂ ಸೇರಿದಂತೆ ಇತಿಹಾಸಕಾರರು, ತಜ್ಞರು, ನಿಜ ಜೀವನದ ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗಿನ ಸಂಭಾಷಣೆಗಳ ಮೂಲಕ ಈ ಸರಣಿಯನ್ನು ನಿರೂಪಿಸಲಾಗಿದೆ.

ದಿ ಕಾಶ್ಮೀರ್ ಫೈಲ್ಸ್ 3 ಗಂಟೆಗಳ ಸುದೀರ್ಘ ಚಲನಚಿತ್ರವಾಗಿದ್ದರೂ, ಅದು ರಾಷ್ಟ್ರವನ್ನು ಬೆಚ್ಚಿಬೀಳಿಸಿತು, ಆದರೆ ಅದು ಹಿಮಗಡ್ಡೆಯ ತುದಿಬಿಂದು ಮಾತ್ರವಾಗಿತ್ತು. ಈ ಸರಣಿಯು ಹೆಚ್ಚು ಹೃದಯ ವಿದ್ರಾವಕವಾಗಿದೆ, ನಿಮ್ಮ ಕಣ್ಣು ತೆರೆಸುತ್ತದೆ ಮತ್ತು ನಿಮ್ಮಲ್ಲಿ ಕಂಪನ ಹುಟ್ಟಿಸುತ್ತದೆ. ಏಕೆಂದರೆ ಇದು ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರ ನಿರ್ಗಮನದ ಹಿಂದಿನ ವರದಿಯಾಗದ ವಾಸ್ತವತೆಗಳು, ಸಂಗತಿಗಳು ಮತ್ತು ಸತ್ಯವನ್ನು ಸಂಬಂಧಪಟ್ಟವರ ಬಾಯಿಯಿಂದ ನೇರವಾಗಿ ಬಿಚ್ಚಿಡುತ್ತದೆ.

ಭೂಲೋಕ ಸ್ವರ್ಗವೆಂದು ಪ್ರಶಂಸಿಸಲ್ಪಟ್ಟ ಕಾಶ್ಮೀರದ ಶತಮಾನಗಳಷ್ಟು ಪ್ರಾಚೀನವಾದ ಪ್ರಯಾಣ, ಭಾರತ, ಅದರ ಜನರು ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಅದರ ಪ್ರಾಮುಖ್ಯತೆ ಮತ್ತು ನಾಗರಿಕತೆ ಮತ್ತು ಜ್ಞಾನದ ಕೇಂದ್ರಬಿಂದುವಾಗಿದ್ದಾಗಿನಿಂದ ಪದೇ ಪದೇ ಅದರ ಮೇಲೆ ಆದ ಆಕ್ರಮಣ, ತೀವ್ರಗಾಮಿತ್ವ ಮತ್ತು ವ್ಯವಸ್ಥಿತವಾಗಿ ಇಂದು ಕಂಡುಬರುವಂತಹ ಯುದ್ಧ ಪ್ರದೇಶ ವಾಗುವಂತಹ ಸ್ಥಿತಿಗೆ ಬರುವವರೆಗೆ ಅದರ ಬೆಳವಣಿಗೆಯ ಜಾಡನ್ನು ಪರಿಶೀಲಿಸುತ್ತದೆ.

ನಿರ್ದೇಶಕ-ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಮಾತನಾಡಿ, “ಕಾಶ್ಮೀರದ ನರಮೇಧವು ಭಾರತಕ್ಕೆ ಮಾತ್ರವಲ್ಲ, ಮಾನವೀಯ ತೆಗೇ ಕಳಂಕವಾಗಿದೆ. ಇದನ್ನು ಆಧುನಿಕ ಕಾಲದ ಅತಿದೊಡ್ಡ ಗುಪ್ತ ದುರಂತವೆಂದು ಪರಿಗಣಿಸಲಾಗಿದೆ. ಈ ಕಥೆಯನ್ನು ಪ್ರಾಮಾಣಿಕವಾಗಿ ಹೇಳುವುದು ನಮಗೆ ಬಹಳ ಮುಖ್ಯವಾಗಿತ್ತು. ಇಲ್ಲಿಯವರೆಗೆ, ಎಲ್ಲಾ ಚಲನಚಿತ್ರಗಳು, ಸಾಹಿತ್ಯ ಮತ್ತು ಮಾಧ್ಯಮಗಳಲ್ಲಿ, ವರದಿಯಾಗಿರುವುದು ಸಮಕಾಲೀನವಾಗಿದೆ.

32 ವರ್ಷಗಳ ನಂತರ ನಾವು 4 ವರ್ಷಗಳ ವ್ಯಾಪಕ ಸಂಶೋಧನೆಯ ಆಧಾರದ ಮೇಲೆ ಕಾಶ್ಮೀರ್ ಫೈಲ್ಸ್ ಅನ್ನು ತಯಾರಿಸಿದಾಗ, ಅದು ಜನರ ಕಣ್ಣು ತೆರೆಯಿತು. ಆದರೆ ಚಿತ್ರದ ಬಗ್ಗೆ ತುಂಬಾ ವೈರುಧ್ಯಮಯವಾದ ಅಭಿಪ್ರಾಯಗಳಿದ್ದವು – ಈ ಚಲನಚಿತ್ರವು ಕೇವಲ 10% ವಾಸ್ತವವನ್ನು ಮಾತ್ರ ಚಿತ್ರಿಸುತ್ತದೆ ಎಂದು ಕೆಲವರು ಭಾವಿಸಿದರೆ, ಕೆಲವರು ದಿ ಕಾಶ್ಮೀರ್ ಫೈಲ್ಸ್ ಒಂದು ಪ್ರಚಾರದ ಚಿತ್ರ ಎಂದು ಭಾವಿಸಿದರು. ಆದ್ದರಿಂದ, ಸತ್ಯವನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಜನರಿಗೆ ಅರ್ಥಮಾಡಿಸಲು ನಾವು ಮಾಡಿದ ಎಲ್ಲಾ ಸಂಶೋಧನೆ ಮತ್ತು ಸಂದರ್ಶನಗಳನ್ನು ಅದರ ಪರಿಶುದ್ಧ ಮತ್ತು ನೈಜ ರೂಪದಲ್ಲಿ ಅವರ ಎದುರಿಗೆ ಬಿಚ್ಚಿಡುವುದು ನಮಗೆ ಮುಖ್ಯವಾಗಿತ್ತು.

‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ನಿಮ್ಮ ಹೃದಯವನ್ನು ಛಿದ್ರಗೊಳಿಸುತ್ತದೆ ಎಂದು ನಾನು ಭರವಸೆ ನೀಡಬಲ್ಲೆ, ಆದರೆ ಇಲ್ಲಿ ನಮ್ಮ ಉದ್ದೇಶ ನಾವು ಇತಿಹಾಸದಿಂದ ಕಲಿಯಬೇಕು ಮತ್ತು ನಾವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಮತ್ತು ನಾವು ಮಾನವೀಯತೆ ಮತ್ತು ನಮ್ಮ ಜನರ ಪರವಾಗಿ ನಿಲ್ಲಬೇಕು ಎನ್ನುವು ದಾಗಿದೆ” ಎಂದು ಹೇಳಿದರು.

ನಿರ್ಮಾಪಕಿ ಪಲ್ಲವಿ ಜೋಶಿ ಮಾತನಾಡಿ, “ನಮ್ಮ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು 4 ವರ್ಷಗಳ ವ್ಯಾಪಕ ಸಂಶೋಧನೆಯ ನಂತರ ತಯಾರಿಸಲಾಗಿದೆ. ಕಾಶ್ಮೀರಿ ಪಂಡಿತ ಸಮುದಾಯವು ಅವರು ಅನುಭವಿಸಿದ ಆಳವಾದ ನೋವು ಮತ್ತು ಯಾತನೆ ಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ಅವರ ಭಯಾನಕ ಕಥೆಗಳನ್ನು ಕೇಳುವುದು ನಮಗೆ ತುಂಬಾ ಕಷ್ಟವಾಯಿತು, ಏಕೆಂದರೆ ಅವರು ಅನುಭವಿಸಿದ ದುಃಖ ಮತ್ತು ನೋವು ನಮ್ಮ ಮೇಲೆ ತುಂಬಾ ಪ್ರಭಾವ ಬೀರಿದೆ, ಆದರೆ ಈ ಕಥೆಯನ್ನು ಸರ್ಕಾರ, ಆಡಳಿತ, ಮಾಧ್ಯಮ ಮತ್ತು ಇತರರು ನಮಗೆ ಹೇಳೇ ಇಲ್ಲ ಎನ್ನುವುದು ನಮಗೆ ಅರಿವಾದಾಗ ನಮಗೆ ನಮ್ಮ ಬಗ್ಗೆ ಅಲ್ಪ ಭಾವನೆ ಮೂಡಲು ಪ್ರಾರಂಭವಾಯಿತು.

ನಾವು ದಿ ಕಾಶ್ಮೀರ್ ಫೈಲ್ಸ್ ಮಾಡಿದಾಗ, ಅದು 3 ಗಂಟೆಗಳ ಸುದೀರ್ಘ ಚಿತ್ರವಾಗಿತ್ತು, ಆದರೂ ಅದು ಹಿಮಗಡ್ಡೆಯ ತುದಿ ಮಾತ್ರವಾಗಿತ್ತು. ಮತ್ತು ಸಮಾಜದ ಒಂದು ವರ್ಗವು ಇದು ಸುಳ್ಳು ಮತ್ತು ಪ್ರಚಾರದ ಚಿತ್ರ ಎಂದು ಹೇಳಲು ಪ್ರಾರಂಭಿಸಿದಾಗ, ಸತ್ಯವು ಅದರ ನಿಜವಾದ ಮತ್ತು ನಗ್ನವಾದ ರೂಪದಲ್ಲಿ ಜನರ ಮುಂದೆ ಹೊರಬರಬೇಕಾಗಿದೆ ಎಂದು ನಾವು ಅರಿತುಕೊಂಡೆವು. ಆದ್ದರಿಂದ ಇಲ್ಲಿ ನಾವು ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್ ಅನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಇದು ನಾವು ನಡೆಸಿದ ವ್ಯಾಪಕ ಸಂಶೋಧನೆಯನ್ನು ನಿಮಗೆ ತೋರಿಸುತ್ತದೆ, ಮತ್ತು ಈ ಪಂಡಿತರು ಅನುಭವಿಸಿದ ಊಹಿಸ ಲಾಗದ ಭಯಾನಕ ಮತ್ತು ಭಯದ ಕಥೆಗಳನ್ನು ಅವರ ಬಾಯಿಂದಲೇ ನೀವು ಕೇಳಬಹುದು. ಆದ್ದರಿಂದ, ಇದು ಪ್ರತಿಯೊಬ್ಬ ಭಾರತೀಯನು ನೋಡಬೇಕಾದ ಸರಣಿಯಾಗಿದೆ ಏಕೆಂದರೆ ಪ್ರತಿಯೊಬ್ಬ ಭಾರತೀಯನು ಭಾರತಕ್ಕೆ ಕಾಶ್ಮೀರ ಎಂದರೇನು ಮತ್ತು ಅದು ನಮ್ಮ ದೇಶದ ಆಂತರಿಕ ಭಾಗವಾಗಿದೆ ಮತ್ತು ಅದು ಹೇಗೆ ಮುಂದುವರಿಯುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು” ಎಂದು ಅವರು ಹೇಳಿದರು.

‘ದಿ ಕಾಶ್ಮೀರ್ ಫೈಲ್ಸ್ ಅನ್‌ರಿಪೋರ್ಟೆಡ್’ ಸ್ಟ್ರೀಮಿಂಗ್ ಅನ್ನು ಈಗ ಝೀ5 ನಲ್ಲಿ ಮಾತ್ರವೇ ವೀಕ್ಷಿಸಿ!

Leave a Reply

Your email address will not be published. Required fields are marked *

error: Content is protected !!