Friday, 13th December 2024

ವಿವೇಕ್ ಅಗ್ನಿಹೋತ್ರಿ ಮುಂದಿನ ಚಿತ್ರ – ದಿ ವ್ಯಾಕ್ಸಿನ್ ವಾರ್…!

vivekAgnihotri

ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದಿ ವ್ಯಾಕ್ಸಿನ್ ವಾರ್ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ದಿ ವ್ಯಾಕ್ಸಿನ್ ವಾರ್ ಸಿನಿಮಾದ ಬಜೆಟ್ ಘೋಷಣೆ ಮಾಡುವ ಮೂಲಕ ವಿವೇಕ್ ಅಗ್ನಿ ಹೋತ್ರಿ ಅಚ್ಚರಿ ಮೂಡಿಸಿದ್ದಾರೆ.

ದಿ ವ್ಯಾಕ್ಸಿನ್ ವಾರ್ ಸಿನಿಮಾದ ನಿರ್ಮಾಪಕ ಕಂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಸಿನಿಮಾದ ಬಜೆಟ್ ಅನ್ನು ಬಹಿರಂಗ ವಾಗಿ ಹಂಚಿಕೊಂಡಿದ್ದಾರೆ.

ಕೇವಲ 12 ಕೋಟಿ ಬಜೆಟ್ ನಲ್ಲಿ ತಯಾರಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಳಿಕ ಕೋಟಿ ಕೋಟಿ ಕಲೆಕ್ಷನ್ ಮಾಡಿತ್ತು. ಅಂದಾಜು 200 ಕೋಟಿಗೂ ಅಧಿಕ ಹಣವನ್ನು ದಿ ಕಾಶ್ಮೀರ್ ಫೈಲ್ಸ್ ಗಳಿಸಿತ್ತು. ದಿ ವ್ಯಾಕ್ಸಿನ್ ವಾರ್ ಚಿತ್ರವನ್ನು ಕೇವಲ 10 ಕೋಟಿ ವೆಚ್ಚದಲ್ಲಿ ಮಾಡಿರುವುದಾಗಿ ಅಗ್ನಿಹೋತ್ರಿ ಘೋಷಿಸಿದ್ದಾರೆ.

‘ದಿ ವ್ಯಾಕ್ಸಿನ್ ವಾರ್’ ಸಿನಿಮಾ ಹಿಂದಿ, ಕನ್ನಡ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಕರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಅವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು.

ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆ ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡಿದ್ದಾರೆ.