ಬಹುಭಾಷಾ ನಟಿಯಾಗಿ ತ್ರಿಷಾ ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ನಟಿಸಿದ್ದ ‘ಪವರ್’ ಚಿತ್ರಕ್ಕೆ ನಾಯಕಿ ಆಗಿದ್ದರು. ಪುನೀತ್ ನಟಿಸಬೇಕಿದ್ದ ‘ದ್ವಿತ್ವ’ ಚಿತ್ರಕ್ಕೆ ತ್ರಿಷಾ ನಾಯಕಿ ಆಗಿ ಆಯ್ಕೆ ಆಗಿದ್ದರು. ವಿವಿಧ ಚಿತ್ರಗಳಲ್ಲಿ ಬ್ಯುಸಿ ಇರುವ ತ್ರಿಷಾ ರಾಜಕೀಯದತ್ತ ಒಲವು ತೋರುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಎಂಜಿಆರ್, ಜಯಲಲಿತಾ ಮೊದಲಾದವರು ಚಿತ್ರರಂಗದಲ್ಲಿ ಗುರುತಿಸಿಕೊಂಡು ನಂತರ ರಾಜಕೀಯದಲ್ಲಿ ಸೈ ಎನಿಸಿಕೊಂಡಿದ್ದರು.
ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ಅವರು ಅಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.