Friday, 13th December 2024

BBK 11: ಅವಳ ಪರವಾಗಿ ನಾನು ಕ್ಷಮೆ ಕೇಳುತ್ತೇವೆ: ಮಾನಸಾ ಔಟಾದ ಬೆನ್ನಲ್ಲೇ ತುಕಾಲಿ ಸಂತು ಮಾತು

Manasa Santhosh

ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಐದನೇ ವಾರ ತುಕಾಲಿ ಮಾನಸ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಮಾನಸ ಎಲಿಮಿನೇಟ್ ಆಗಿ ಹೊರಗೆ ಹೋಗುವಾಗ ಎಲ್ಲರೂ ಭಾವುಕರಾದರು. ಶಿಶಿರ್, ಭವ್ಯಾ ಗೌಡ ಮುಂತಾದರು ಕಣ್ಣೀರಿಟ್ಟರು. ಮಾನಸ ಕೂಡ ಎಲಿಮಿನೇಟ್ ಆಗುತ್ತಿರುವ ದುಃಖದಲ್ಲಿ ತುಂಬ ಅತ್ತರು. ಹೊರ ಹೋಗುವ ಮುನ್ನ ವಿಶೇಷ ಅಧಿಕಾರದ ಮೂಲಕ ಉಗ್ರಂ ಮಂಜು ಅವರನ್ನು ಜೈಲಿಗೆ ಕಳುಹಿಸಿದ್ದಾರೆ.

ಕಳೆದ ಕೆಲ ವಾರಗಳಿಂದ ಮಾನಸಾ ವಿರುದ್ಧ ಮನೆಮಂದಿ ಸಾಕಷ್ಟು ದೂರುಗಳನ್ನು ನೀಡಿದ್ದರು. ಇದೇ ಇವರ ಎಲಿಮಿನೇಷನ್​ಗೆ ಕಾರಣವಾಯಿತು ಎನ್ನಲಾಗುತ್ತಿದೆ. ತನ್ನದಲ್ಲದ ವಿಷಯಗಳಿಗೆ ಮೂಗು ತೂರಿಸಿಕೊಂಡು ಬಂದು ಜಗಳ ಆಡುವುದು, ಇತರರ ಚರ್ಚೆಗಳಲ್ಲಿ ತಾನಾಗಿಯೇ ಭಾಗವಹಿಸಿ ಆ ಚರ್ಚೆಯ ದಿಕ್ಕನ್ನೇ ತಪ್ಪಿಸುವುದು, ಮಾತಾಡುವಾಗ ತಮಗಿಷ್ಟ ಬಂದಂತೆ ಅಗೌರವವಾಗಿ ಮಾತಾಡೋದು, ನಾಲಿಗೆ ಮೇಲೆ ಹಿಡಿತ ಕಡಿಮೆ ಎಂದು ಮಾನಸಾ ವಿರುದ್ಧ ಸ್ಪರ್ಧಿಗಳು ದೂರಿದ್ದರು.

ಮಾನಸಾ ಮನೆಯಿಂದ ಹೊರಬಂದ ಬೆನ್ನಲ್ಲೇ ಇವರ ಪತಿ ತುಕಾಲಿ ಸಂತು ಕ್ಷಮ ಕೇಳಿದ್ದಾರೆ. ಮಾನಸಾ ಎಲಿಮಿನೇಟ್​ ಆಗಿದ್ದಕ್ಕೆ ಬೇಸರ ಇದೆ. ಖುಷಿ ಕೂಡ ಇದೆ. ಹಳ್ಳಿಯಲ್ಲಿ ಹುಟ್ಟಿ, ಕಡು ಬಡತನದಲ್ಲಿ ಕುಟುಂಬ ಸಾಗಿಸುತ್ತಿದ್ದಳು. ಅವಳ ಬದುಕಿಗೆ ನಾನು ಬಂದೆ. ಅವಳು ಇಷ್ಟು ದೊಡ್ಡ ರಿಯಾಲಿಟಿ ಶೋಗೆ ಬಂದಿದ್ದಾಳೆ ಎಂದರೆ ಅದೇ ಅವಳ ದೊಡ್ಡ ಗೆಲುವು. ಆಕೆಯ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ನಾನು ಅವಳ ಪರವಾಗಿ ಕ್ಷಮೆ ಕೇಳುತ್ತೇನೆ. ಮಾನಸನಾ ಯಾವತ್ತೂ ನಾನು ಬಿಟ್ಟುಕೊಡಲ್ಲ ಎಂದು ಹೇಳಿದ್ದಾರೆ.

ಮಂಜುಗೆ ಶಾಕ್ ನೀಡಿದ ಮಾನಸ:

ಮನೆಯಿಂದ ಎಲಿಮಿನೇಟ್ ಆಗಿ ಹೊರಗೆ ಹೋಗುತ್ತಿದ್ದ ಮಾನಸಗೆ ಬಿಗ್ ಬಾಸ್ ಒಂದು ಅವಕಾಶವನ್ನು ನೀಡಿದರು. ಒಬ್ಬ ಸ್ಪರ್ಧಿಯನ್ನು ನೇರವಾಗಿ ಜೈಲಿಗೆ ಕಳುಹಿಸುವುದಕ್ಕೆ ಸೂಚಿಸಿದರು. ಆಗ ಮಾನಸ ಉಗ್ರಂ ಮಂಜು ಅವರನ್ನು ಜೈಲಿಗೆ ಕಳುಹಿಸಿದರು. “ನನ್ನಂತೆಯೇ ಮಂಜಣ್ಣನಲ್ಲಿ ಸಿಟ್ಟು, ಕೋಪ, ತಾಳ್ಮೆ ಎಲ್ಲವೂ ಇದೆ. ಅವರನ್ನು ನೋಡಿದಾಗ, ಮಾನಸನಾ ಮತ್ತೊಂದು ವರ್ಷನ್ ನೋಡಿದಂತೆ ಆಗುತ್ತದೆ. ಹಾಗಾಗಿ, ನನ್ನನ್ನೇ ನಾನು ಕಳಪೆಗೆ ಹಾಕಿ ಹೋಗುತ್ತಿದ್ದೇನೆ” ಎಂದು ಮಾನಸ ಹೇಳಿದರು.

BBK 11: ಬಂದ ಎರಡೇ ವಾರಕ್ಕೆ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡ ಹನುಮಂತ