Saturday, 14th December 2024

Ugram Manju: ಟಾಸ್ಕ್​ಗು ಸೈ-ನಗಿಸೋಕು ಜೈ: ನಾಮಿನೇಟ್ ಆಗಿದ್ದ ಉಗ್ರಂ ಮಂಜು ಈಗ ಸೇಫ್

Ugram Manju

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸ್ವರ್ಗ-ನರಕ ಎಂಬ ವಿಶೇಷ ಕಾನ್​ಸೆಪ್ಟ್ ಮೇಲೆ ಸಾಗುತ್ತಿದೆ. ಒಟ್ಟು 17 ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದು, ಸಖತ್ ಇಂಟ್ರೆಸ್ಟಿಂಗ್ ಸದಸ್ಯರಿಂದ ಮನೆ ಕೂಡಿದೆ. ಇದರ ನಡುವೆ ಮೊದಲ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 10 ಮಂದಿ ನಾಮಿನೇಟ್ ಆಗಿದ್ದರು. ಇದರಲ್ಲಿ 6 ಮಂದಿ ಸ್ವರ್ಗದಿಂದ ಮತ್ತು ನಾಲ್ಕು ಮಂದಿ ನರಕದಿಂದ ನಾಮಿನೇಟ್ ಆಗಿದ್ದರು.

ನಾಮಿನೇಟ್ ಆದವರ ಪೈಕಿ ಇದೀಗ ಉಗ್ರಂ ಮಂಜು ಎಲಿಮಿನೇಟ್ ಝೋನ್​ನಿಂದ ಸೇಫ್ ಆಗಿದ್ದಾರೆ. ಮೂರನೇ ದಿನ ಬಿಗ್ ಬಾಸ್ ನೀಡಿದ ಟಾಸ್ಕ್​ನಲ್ಲಿ ಜಯಶಾಲಿಯಾದ ಮಂಜು ನಾಮಿನೇಟ್ ಲಿಸ್ಟ್​ನಿಂದ ಹೊರಬಿದ್ದಿದ್ದಾರೆ. ನಾಮಿನೇಷನ್​ ಪ್ರಕ್ರಿಯೆಯಿಂದ ಪಾರಾಗಲು ಬಿಗ್ ಬಾಸ್ ಸ್ವರ್ಗದಲ್ಲಿರುವ ಉಗ್ರಂ ಮಂಜು, ಜಗದೀಶ್,​ ಯಮುನಾ, ಹಂಸ, ಭವ್ಯ ಗೌಡ ಅವರಿಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು.

ಟಾಸ್ಕ್ ಏನೆಂದರೆ, ಒಂದು ಬಕೆಟ್​ ನೇತು ಹಾಕಿರುತ್ತಾರೆ. ಅದರಲ್ಲಿ ನಾಮಿನೇಷನ್ ಆದವರ ಫೋಟೋಗಳನ್ನು ಅಂಟಿಸಿರುತ್ತಾರೆ. ಅದಕ್ಕೆ ಎದುರಾಳಿಗಳು ಬಂದು ಮರಳು ತುಂಬಿಸಬೇಕು. ಇದನ್ನು ಅವರು ತಡೆಯಲೂ ಬೇಕು. ಬೇಗನೆ ಬಕೆಟ್ ತುಂದಿವರು ನಾಮಿನೇಟ್ ಆಗಿಯೇ ಉಳಿಯುತ್ತಾರೆ. ಕೊನೆಗೆ ಯಾರ ಬಕೆಟ್​ ತುಂಬದೆ ಇರುತ್ತದೋ ಅವರು ಸೇಫ್ ಆಗುತ್ತಾರೆ.

ಈ ಬಿಗ್ ಟಾಸ್ಕ್​ನಲ್ಲಿ ಉಗ್ರಂ ಮಂಜು ಗೆದ್ದು, ನಾಮಿನೇಷನ್​ ಪ್ರಕ್ರಿಯೆಯಿಂದ ಸೇಫ್​ ಆಗಿದ್ದಾರೆ. ಹೀಗಾಗಿ ಜಗದೀಶ್,​ ಯಮುನಾ, ಹಂಸ, ಭವ್ಯ ಗೌಡ ನಾಮಿನೇಟ್​ ಪ್ರಕ್ರಿಯೆಯಲ್ಲಿ ಮುಂದುವರಿದಿದ್ದಾರೆ. ಅತ್ತ ನರಕದಲ್ಲಿರುವ ಚೈತ್ರಾ ಕುಂದಾಪರ, ಶಿಶಿರ್, ಮೋಕ್ಷಿತಾ, ಮಾನಸ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಬಿಗ್ ಬಾಸ್ ಪ್ರೊಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ ಹೆಸರು ಬೇರೆ ಇಡಿ: ಬಾಂಬ್ ಸಿಡಿಸಿದ ಜಗದೀಶ್

ಬಿಗ್‌ ಬಾಸ್‌ ಸೀಸನ್‌‌ 11ರಲ್ಲಿ ಉಗ್ರಂ ಮಂಜು ಅವರ ವ್ಯಕ್ತಿತ್ವ ಬಹುತೇಕ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೊರಗಡೆ ಜನರು ಕೂಡ ಇವರ ಬಗ್ಗೆ ಪಾಸಿಟಿವ್ ಮಾತನಾಡುತ್ತಿದ್ದಾರೆ. ಟಾಸ್ಕ್​ಗು ಸೈ-ನಗಿಸೋಕೂ ಜೈ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮಂಜು ಮಾಡುವ ಕಾಮಿಡಿ ನೋಡಿ ಎಲ್ಲರೂ ನಗುತ್ತಿದ್ದಾರೆ. ಹಾಗೆಯೆ ಇವರು ತಮ್ಮ ಉಗ್ರ ರೂಪ ಕೂಡ ತೋರಿಸಿದ್ದಾರೆ.

ಜಗದೀಶ್ ಅವರು ಮಾನಸ ಅವರೊಂದಿಗೆ ಜಗಳವಾಡುವ ಭರದಲ್ಲಿ ‘ಯಾವ ಸೀಮೆ ಹೆಂಗಸು ಅವಳು’ ಎಂಬ ಪದ ಬಳಕೆ ಮಾಡಿದ್ದಾರೆ. ಇದನ್ನು ಕೇಳಿ ಮಂಜು ಅವರು ರೊಚ್ಚಿಗೆದ್ದಿದ್ದಾರೆ. ‘ಹೆಂಗಸರಿಗೆ ಗೌರವ ಕೊಡಿ. ಒಂದು ಹೆಂಗಸಿಗೆ ಸರಿಯಾಗಿ ಮರಿಯಾದೆ ಕೊಟ್ಟು ಮಾತಾಡು, ಇದು ನಮ್ ಮನೆ, ನಮ್ಮ ಮನೆಯ ಹೆಂಗಸಿನ ಬಗ್ಗೆ ಮಾತಾಡಿದ್ರೆ ನಾವೂ ಮಾತಾಡ್ತೀವಿ. ನೀವು ಹೆಂಗಸರ ಬಗ್ಗೆ ಮಾತನಾಡ ಬಾರದು’ ಎಂದು ಉಗ್ರಂ ಮಂಜು ಅವರು ಲಾಯರ್​ಗೆ ಖಡಕ್ ಆಗಿ ಹೇಳಿದ್ದಾರೆ.

‘ಯಾವ ಸೀಮೆ ಹೆಂಗಸು ಅವಳು’ ಎಂದ ಜಗದೀಶ್: ಶನಿವಾರದ ಕಿಚ್ಚನ ಮಾತಿಗೆ ಕಾಯುತ್ತಿದೆ ಇಡೀ ಕರ್ನಾಟಕ