Tuesday, 10th December 2024

BBK 11: ಎಲ್ಲ ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿದ ಬಿಗ್ ಬಾಸ್: ದೊಡ್ಮನೆಯಲ್ಲಿ ಏನಾಯಿತು?

BBK 11 Crying

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾಗಿ ನಾಲ್ಕು ವಾರಗಳು ಕಳೆದಿವೆ. ಈ ನಾಲ್ಕೂ ವಾರಗಳಲ್ಲಿ ಮನೆ ನಗು-ಅಳುವಿಗಿಂತ ಹೆಚ್ಚು ಜಗಳಗಳನ್ನೇ ಕಂಡಿದೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳ ನಡೆಯುತ್ತಲೇ ಇತ್ತು. ಕಳೆದ ವಾರ ಸಿಂಗರ್ ಹನುಮಂತ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟ ಬಳಿಕ ಮನೆ ಮಂದಿ ಕೊಂಚ ನಗುತ್ತಿದ್ದಾರೆ. ಆದರೆ, ಈ ವಾರದ ಮೊದಲ ದಿನವೇ ಬಿಗ್ ಬಾಸ್ ಎಲ್ಲ ಸ್ಪರ್ಧಿಗಳನ್ನು ಅಳಿಸಿದ್ದಾರೆ.

ಇಷ್ಟು ದಿನ ಜೋರು ಗಲಾಟೆಯಿಂದ ಕೂಗಾಡುತ್ತಿದ್ದ ಸ್ಪರ್ಧಿಗಳಿಗೆ ಇದೀಗ ಮನಸ್ಸಿನ ಭಾರವನ್ನು ಇಳಿಸಲು ಬಿಗ್ ಬಾಸ್ ಒಂದು ಅವಕಾಶ ನೀಡಿದ್ದಾರೆ. ಬಿಗ್​ಬಾಸ್​ ಸೀಸನ್​ 11ರ ಸ್ಪರ್ಧಿಗಳು ಕನ್ಫೆಷನ್ ರೂಮ್ ಒಳಗೆ ತೆರಳಿ ತಮ್ಮ ಜೀವನದಲ್ಲಿ ಆದ ಕಷ್ಟಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ಇದರ ಪ್ರೊಮೋವನ್ನು ಕಲರ್ಸ್ ಕನ್ನಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಬಿಗ್​ಬಾಸ್​ ಒಬ್ಬೊಬ್ಬರೇ ಸ್ಪರ್ಧಿಗಳನ್ನು ಕನ್ಫೆಷನ್ ರೂಂಗೆ ಕರೆದಿದ್ದಾರೆ. ಬಳಿಕ ನಿಮ್ಮ ಜೀವನದಲ್ಲಿ ಆದ ಕಹಿ ಘಟನೆ ಬಗ್ಗೆ, ಅದರಲ್ಲೂ ಯಾರ ಮುಂದಿಯೂ ಇಲ್ಲಿಯವರೆಗೆ ಹಂಚಿಕೊಳ್ಳದ ಒಂದು ವಿಚಾರವನ್ನು ಹೇಳಿ ಅಂತ ಬಿಗ್​ಬಾಸ್​ ಹೇಳಿದ್ದಾರೆ. ಈ ಸಂದರ್ಭ ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ, ಉಗ್ರಂ ಮಂಜು, ಗೋಲ್ಡ್ ಸುರೇಶ್, ತ್ರಿವಿಕ್ರಮ್ ಮುಂತಾದವರು ಕಣ್ಣೀರು ಹಾಕಿದ್ದಾರೆ. ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಅವರು, ನಾನು ಒಂದು ವರ್ಷ ಯಾರದ್ದೋ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದೆ, ನಾನು ಬೇರೆಯವರ ಮನೆಯಲ್ಲಿ ಮನೆ ಕೆಲಸ ಮಾಡ್ತಾ ಇದ್ದೇ ಎಂದು ಹೇಳಿ ಅತ್ತಿದ್ದಾರೆ. ಉಗ್ರಂ ಮಂಜು ಅವರು ನಾನು ಊಟ ಮಾಡಿದೀಯಾ, ಚೆನ್ನಾಗಿದ್ದೀಯಾ ಅಂತ ಹೇಳೋರು, ಕೇಳುವವರು ಯಾರು ಇರಲಿಲ್ಲ. ಕೆಲವು ಚಟಗಳಿಗೆ ಬಿದ್ದಿದ್ದೆ ಅಂತ ಹೇಳಿದ್ದಾರೆ. ಐಶ್ವರ್ಯ ಅವರು ಅಳುತ್ತಾ, ನಮ್ಮ ತಾಯಿ ಹಾಸಿಗೆ ಹಿಡಿದಿದ್ದರು. ಆಗ ಸಂಬಂಧಿಕರು ನಮ್ಮ ಅಮ್ಮನ ತಲೆ ತುಂಬುತ್ತಿದ್ದರು. ನಾನು ಅಮ್ಮನ ಮೇಲೆ ತುಂಬ ಕಿರುಚಾಡಿದೆ. ಮಾತನಾಡಿಸಿ ಕೆಲವು ದಿನ ಆದ ಮೇಲೆ ಅವರು ನನ್ನ ಜೊತೆ ಇರಲ್ಲ ಎಂದು ಅತ್ತಿದ್ದಾರೆ.

BBK 11: ಇವತ್ತಿನಿಂದ ಆಟ ಶುರು: ತ್ರಿವಿಕ್ರಮ್​ಗೆ ಸವಾಲು ಹಾಕಿದ ಮೋಕ್ಷಿತಾ