Tuesday, 10th December 2024

BBK 11: ಜಗದೀಶ್ ಹೋದರೂ ಬಿಗ್ ಬಾಸ್​ನಲ್ಲಿ ನಿಂತಿಲ್ಲ ಜಗಳ: ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಮಾರಾಮಾರಿ

BBK 11 Fight week 4

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶುರುವಾದಾಗಿನಿಂದ ಮನೆ ಹೇಗಿತ್ತು ಎಂಬುದನ್ನು ಇಡೀ ಕರ್ನಾಟಕ ನೋಡಿದೆ. ಹೆಚ್ಚು ಜಗಳಗಳಿಂದಲೇ ಕೂಡಿದ್ದ ದೊಡ್ಮನೆಯಲ್ಲಿ ಕಳೆದ ವಾರವಂತು ದೊಡ್ಡ ಅನಾಹುತ ಸಂಭವಿಸಿತು. ಮಹಿಳೆಯರಿಗೆ ಕೆಟ್ಟದಾಗಿ ಮಾತನಾಡಿದ ಕಾರಣಕ್ಕೆ ಜಗದೀಶ್ ಮನೆಯಿಂದ ಹೊರ ಹೋದರೆ, ಇವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಕೂಡ ನಿರ್ಗಮನಿಸಬೇಕಾಯಿತು. ಜಗದೀಶ್ ಹೋದ ಬಳಿಕ ಮನೆ ಪ್ರಶಾಂತವಾಗಿರುತ್ತೆ ಎಂದು ಸ್ಪರ್ಧಿಗಳು ಹಾಗೂ ಸಾಮಾಜಿಕ ಜಾಣಗಳಲ್ಲಿ ಟಾಕ್ ನಡೆದಿತ್ತು.

ಆದರೆ, ಜಗದೀಶ್ ಇಲ್ಲದಿದ್ದರೂ ಬಿಗ್ ಬಾಸ್​ನಲ್ಲಿ ಅದೇ ಜಗಳ ಈ ವಾರ ಕೂಡ ಮುಂದುವರೆದಂತಿದೆ. ಕ್ಯಾಪ್ಟನ್ಸಿ ಟಾಸ್ಕ್ ಮಧ್ಯೆ ಉಗ್ರಂ ಮಂಜು ಮತ್ತು ಶಿಶಿರ್ ಶಾಸ್ತ್ರೀ ನಡುವೆ ದೊಡ್ಡ ಮಾರಾಮಾರಿ ನಡೆದಿದೆ. ಶಿಶಿರ್ ಬಳಿಕ ಅಲ್ಪಾವಧಿಗೆ ಹನುಮಂತ ಕ್ಯಾಪ್ಟನ್ ಆಗಿದ್ದರು. ಬಳಿಕ ಹೊಸ ಕ್ಯಾಪ್ಟನ್ ಆಯ್ಕೆಗೆ ಟಾಸ್ಕ್ ನೀಡಲಾಗಿದೆ. ಈ ವೇಳೆ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಜಗಳ ನಡೆದಿದೆ.

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಜೋಡಿಗಳು 17 ನಿಮಿಷಗಳನ್ನು ಎಣಿಸುತ್ತಾ ತಿರುಗಬೇಕು. ಈ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಉಗ್ರಂ ಮಂಜು ಹಾಗೂ ಶಿಶಿರ್​ ನಡುವೆ ಗಲಾಟೆಯಾಗಿದೆ. ಕ್ಯಾಪ್ಟನ್ಸಿ ಪಟ್ಟ ಸಿಗಬಾರದೆಂದು ಉಗ್ರಂ ಮಂಜು, ಶಿಶರ್​ಗೆ ಡಿಸ್ಟ್ರಾಕ್ಟ್ ಮಾಡಿದ್ದಾರೆ. ಆಗ ಅದೇ ಕೋಪದಲ್ಲಿ ಮಂಜು, ಶಿಶಿರ್​ಗೆ ಹಾಗೂ ಸುರೇಶ್​ಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯೆ ಮಧ್ಯೆ ಕೋಲನ್ನು ಅಡ್ಡ ತಂದಿದ್ದಾರೆ. ಜೋರಾಗಿ ಕೋಲು ತಳ್ಳಿದ್ದರಿಂದ ಶಿಶಿರ್​ ಕೈಗೆ ದೊಡ್ಡ ಪೆಟ್ಟಾಗಿದೆ.

ಇದೇ ಕೋಪದಲ್ಲಿ ಶಿಶಿರ್ ಮತ್ತು ಉಗ್ರಂ ಮಂಜು ನಡುವೆ ಹೊಡೆದಾಟ ನಡೆಯುವ ಮಟ್ಟಕ್ಕೆ ಜಗಳ ನಡೆದಿದೆ. ಇದನ್ನೂ ನೋಡಿದ ಮನೆಮಂದಿ ಶಾಕ್​ ಆಗಿ ಅವರನ್ನು ತಡೆದಿದ್ದಾರೆ. ಟಾಸ್ಕ್​ ಸಲುವಾಗಿ ನೀಡಿದ್ದ ವಸ್ತುಗಳಿಗೂ ಹಾನಿ ಮಾಡಲಾಗಿದೆ. ಇದಕ್ಕೆಲ್ಲ ಖಂಡಿತವಾಗಿಯೂ ಬಿಗ್ ಬಾಸ್​ ಶಿಕ್ಷೆ ನೀಡಲಿದ್ದಾರೆ.

ಎರಡೇ ದಿನಕ್ಕೆ ಸುಸ್ತಾದ ಹನುಮಂತ:

ಕ್ಯಾಪ್ಟನ್ ಆದ ಎರಡನೇ ದಿನಕ್ಕೆ ಹನಮಂತ ಅವರಿಗೆ ತಲೆಕೆಟ್ಟು ಹೋಯಿತು. ಬಿಗ್​ ಬಾಸ್​ ​ ಹನುಮಂತ ಅವರಿಗೆ ಟಾಸ್ಕ್​​ ಕೊಟ್ಟಿದ್ದರು. ಮನೆಯ ಸ್ಪರ್ಧಿಗಳನ್ನು ನಂಬರ್​ ಆಧಾರದ ಮೇಲೆ ಸ್ಥಾನಗಳನ್ನು ನೀಡಬೇಕು ಎಂದು ಹೇಳಿದ್ದಾರೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನ ವ್ಯಕ್ತಪಡಿಸಿದರು. ಚೈತ್ರಾ, ಭವ್ಯ ಗೌಡ, ಕೀರ್ತಿ ಧರ್ಮರಾಜ್​, ತ್ರಿವಿಕ್ರಮ್​ ಹೀಗೆ ಕೆಲವರು ಹನುಮಂತು​ ಮೇಲೆ ಸಿಟ್ಟಿಗೆದ್ದರು. ಕ್ಯಾಪ್ಟನ್ಶಿ ಬಗ್ಗೆ ಏನೂ ಗೊತ್ತಿರದ ಸಿಂಗರ್ ಹನುಮಂತ ಇದನ್ನು ಕೇಳಿ ಕಂಗಾಲಾಗಿದ್ದಾರೆ. ಇವರೆಲ್ಲರ ಮಾತು ಕೇಳಿ ಹನುಮಂತ ಅವರು, ಈ ರೀತಿ ಜಗಳ ಆಡುತ್ತೀರಾ ಅಂದರೆ ಬರುತ್ತಿರಲಿಲ್ಲ. ನಾನು ಈ ಆಟದಲ್ಲಿ ಇಲ್ಲ. ಕ್ಯಾನ್ಸಲ್​, ಕ್ಯಾಪ್ಟನ್​ ಕ್ಯಾನ್ಸಲ್​ ಎಂದು ಬಿಗ್​ ಬಾಸ್​ ಬಳಿ ಹೇಳಿದರು.

BBK 11: ಜಗದೀಶ್​ಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ಆಯ್ತು: ಕಿಚ್ಚನ ಎಪಿಸೋಡ್ ಬಗ್ಗೆ ಚೈತ್ರಾ ಅಸಮಾಧಾನ