Friday, 13th December 2024

BBK 11: ಬಿಗ್ ಬಾಸ್ ಮನೆ ಅಲ್ಲೋಲ ಕಲ್ಲೋಲ: ಯಾರೂ ಉಳಿಯಲ್ಲ ಎಂದು ತೊಡೆ ತಟ್ಟಿ ನಿಂತ ಉಗ್ರಂ ಮಂಜು

Ugramm Manju

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಪಡೆಯುತ್ತಿದೆ. ಸದ್ಯ ಏಳನೇ ವಾರದಲ್ಲಿ ಜೋಡಿ ಟಾಸ್ಕ್ ನಡೆಯುತ್ತಿದೆ. ಅಂದರೆ ಇಬ್ಬರು ಸ್ಪರ್ಧಿಗಳು ಸದಾ ಅಂಟಿಕೊಂಡೇ ಇರುವ ಟಾಸ್ಕ್ ಇದಾಗಿದೆ. ಈ ವಾರ ಜೋಡಿ ಜೋಡಿಯಾಗಿಯೇ ಎಲ್ಲ ಟಾಸ್ಕ್ ಆಡಬೇಕಿದೆ. ಇದರಲ್ಲಿ ಯಾರು ಗೆಲ್ಲುತ್ತಾರೊ ಎಂಬ ಕುತೂಹಲವಿದೆ. ಜೋಡಿಗಳು ಪೈಪೋಟಿಗೆ ಬಿದ್ದಂತೆ ಟಾಸ್ಕ್ ಆಡುತ್ತಿದ್ದಾರೆ. ಅಲ್ಲದೆ ಈ ವಾರದ ಜೋಡಿಗಳ ನಡುವೆ ಸಖತ್ ಕಾಂಬಿನೇಷನ್ ಇದೆ.

ಈ ಜೋಡಿ ಟಾಸ್ಕ್​ಗೆ ಜೋಡಿಯನ್ನು ಸೆಲೆಕ್ಟ್ ಮಾಡಿದ್ದು ಸ್ವತಃ ಬಿಗ್ ಬಾಸ್. ಬಿಗ್​ ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳಿಗೆ ತಾವೇ ಜೋಡಿಗಳನ್ನು ಸೆಲೆಕ್ಟ್ ಮಾಡಿದ್ದಾರೆ. ಹನುಮಂತ-ಗೌತಮಿ ಜಾಧವ್, ಉಗ್ರಂ ಮಂಜು-ಭವ್ಯಾ ಗೌಡ, ಶಿಶಿರ್-ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್-ಐಶ್ವರ್ಯಾ ಸಿಂಧೋಗಿ, ಅನುಷಾ ರೈ-ಗೋಲ್ಡ್ ಸುರೇಶ್ ಹಾಗೂ ಧನರಾಜ್-ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡಲಾಗುತ್ತಿದೆ. ತ್ರಿವಿಕ್ರಮ್ ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಇಂದು ಬಿಗ್ ಬಾಸ್ ಜೋಡಿಗಳಿಗೆ ತಮಗೆ ಮೀಸಲಿರುವ ಕೆಸರನ್ನ ಕಾಪಾಡಿಕೊಳ್ಳುವ ಹಾಗೂ ಇತರೆ ಜೋಡಿಗಳ ಕೆಸರನ್ನು ಹಾಳು ಮಾಡುವ ಚಟುವಟಿಕೆಯನ್ನು ನೀಡಿದ್ದಾರೆ. ಈ ಟಾಸ್ಕ್​ ಮಧ್ಯೆ ಮಂಜು ಉಗ್ರ ರೂಪ ತಾಳಿದ್ದಾರೆ. ಎಲ್ಲಾ ಜೋಡಿಗಳ ಬಳಿ ಇರುವ ಕೆಸರನ್ನು ಹಾಳು ಮಾಡಲು ಮಂಜು ಮುಂದೆ ಬಂದಿದ್ದಾರೆ.

ಟಾಸ್ಕ್ ನಡುವೆ ಮಾರಾಮಾರಿ ನಡೆದಿದ್ದು, ನಾವು ಮಾತ್ರ ಕಾಣ್ತಿದ್ದೀವಾ? ಬೇರೆಯವರು ಇಲ್ವಾ? ಎಂದು ಮಂಜುಗೆ ಅನುಷಾ ರೈ ಪ್ರಶ್ನೆ ಹಾಕಿದ್ದಾರೆ. ಅತ್ತ ಉಗ್ರಂ ಮಂಜು ಯಾರೂ ಉಳಿಯಲ್ಲ, ನೋಡೇಬಿಡೋಣ ಅಂತ ಓಪನ್‌ ಚಾಲೆಂಜ್ ಸಹ ಹಾಕಿ ತೊಡೆ ತಟ್ಟಿದ್ದಾರೆ. ಒಟ್ಟಾರೆ ಇಂದಿನ ಟಾಸ್ಕ್ ಸಾಕಷ್ಟು ರೋಚಕತೆ ಸೃಷ್ಟಿಸಿದೆ.

ಮಂಜು-ಭವ್ಯಾ ಇಬ್ಬರೂ ನಾಮಿನೇಟ್:

ಈ ಜೋಡಿ ಟಾಸ್ಕ್​ನಲ್ಲಿ ಮಂಜುಗೆ ಜೋಡಿಯಾಗಿ ಭವ್ಯಾ ಗೌಡ ಇದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಜೋಡಿಯಾಗಿದ್ದ ಸ್ಪರ್ಧಿಗಳು ತಮ್ಮಲ್ಲೇ ಚರ್ಚಿಸಿ ತಮ್ಮಿಬ್ಬರಲ್ಲಿ ಒಬ್ಬರನ್ನು ನಾಮಿನೇಟ್ ಮಾಡಬೇಕು. 10 ನಿಮಿಷಗಳ ಒಳಗೆ ಇಬ್ಬರಲ್ಲಿ ಯಾರೆಂದು ಹೇಳದಿದ್ದರೆ ಇಬ್ಬರೂ ನಾಮಿನೇಟ್ ಆಗುತ್ತೀರಿ ಎಂಬ ರೂಲ್ ಇತ್ತು. ಆದರೆ, ಇಲ್ಲಿ ಭವ್ಯಾ-ಮಂಜು ಇಬ್ಬರು ಸೇಫ್ ಆಗಬೇಕೆಂದೇ ಪಣತೊಟ್ಟರು. ನಿಮಗೆ ಅರ್ಹತೆ ಇದೆ. ಆದರೆ, ಕೆಲವು ವಿಚಾರಗಳಲ್ಲಿ ನೀವು ಎಡವಿದ್ದೀರಾ. ನಾನು ಸೇಫ್ ಆಗೋದು ತುಂಬಾ ಮುಖ್ಯ ಎಂದು ಮಂಜುಗೆ ಭವ್ಯಾ ಗೌಡ ತಿಳಿಸಿದರು. ಅದಕ್ಕೆ ಮಂಜು ಅವರು ನಾನೂ ಮೈ-ಕೈ ನೋಯಿಸಿಕೊಂಡು ಟಾಸ್ಕ್ ಆಡಿದ್ದೇನೆ. ಈಗ ನಾನು ಮಾತ್ರ ಬಿಟ್ಟುಕೊಡಲ್ಲ. ಇಬ್ಬರೂ ಬೇಕಾದರೆ ನಾಮಿನೇಟ್ ಆಗೋಣ ಎಂದರು. ಈ ಮೂಲಕ ಇಬ್ಬರೂ ಈ ವಾರ ಮನೆಯಿಂದ ಹೊರಹೋಗಲು ಸೆಲೆಕ್ಟ್ ಆಗಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ರೋಚಕ ತಿರುವು: ಶಿಶಿರ್​ಗೆ ಕೈಕೊಟ್ಟ ಚೈತ್ರಾ, ಏನು ಮಾಡ್ತಾರೆ ತ್ರಿವಿಕ್ರಮ್?