Friday, 13th December 2024

BBK 11: ಗೌತಮಿ-ಮೋಕ್ಷಿತಾ ಬಳಿ ಕ್ಷಮೆ ಕೇಳಿದ ಮಂಜಣ್ಣ: ಮತ್ತೆ ಒಂದಾದ್ರು ಬೆಸ್ಟ್ ಫ್ರೆಂಡ್ಸ್

Gowthami and Manju

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭದಿಂದಲೂ ಜೊತೆಯಾಗಿ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಉಗ್ರಂ ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ನಡುವಣ ಸ್ನೇಹದಲ್ಲಿ ಮಂಗಳವಾರ ಬಿರುಕು ಮೂಡಿತ್ತು. ಮೂವರು ಟಾಸ್ಕ್ ಮಧ್ಯೆ ಮನೆಯೊಳಗೆ ಜಗಳ ಆಡಿದ್ದರು. ಮುಖ್ಯವಾಗಿ ಉಗ್ರಂ ಮಂಜು ಆಡಿದ ರೀತಿಗೆ ಗೌತಮಿ ಅವರು ಅಸಮಾಧಾನಗೊಂಡು ಕಿರುಚಾಡಿದ್ದರು. ಕೆಲ ಸಮಯ ದೂರ-ದೂರ ಆಗಿದ್ದ ಇವರು ದಿನ ಮುಗಿಯುವ ಹೊತ್ತಿಗೆ ಮತ್ತೆ ಒಂದಾಗಿದ್ದಾರೆ.

ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಫ್ರೆಂಡ್​ಶಿಪ್ ನಡುವೆ ಜಗಳ ಆಗಲು ಕಾರಣವಾಗಿದ್ದು ಬಿಗ್ ಬಾಸ್ ನೀಡಿದ್ದ ಒಂದು ಟಾಸ್ಕ್. ಚೆಂಡನ್ನು ಗೋಲ್​ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿ ಮತ್ತು ಮೋಕ್ಷಿತಾ ತಂಡಕ್ಕೆ ಕೈಕೊಟ್ಟಿದ್ದಾರೆ. ಇದು ಗೌತಮಿಗೆ ತೀವ್ರ ಸಿಟ್ಟು ತರಿಸಿದೆ.

ಬಿ ಪಾಸಿಟಿವ್​ ಎಂದು ಹೆಚ್ಚಾಗಿ ಪ್ರಬುದ್ಧತೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುವ ಗೌತಮಿ ಅವರು ತಮ್ಮ ಅಸಮಧಾನ ಹೊರಹಾಕಿ, ಇದು ನಿಮ್ಮ ಆಟದ ರೀತಿಯಾ?, ನೀನು ಮಂಜಣ್ಣನ ಎಂಬ ಪ್ರಶ್ನೆ ಎದ್ದಿದೆ. ನಾವು ನೋಡಿದ ಮಂಜಣ್ಣ ಹೀಗೆ ಮಾಡುತ್ತಾ ಇರೋದು?, ಇನ್ನೊಬ್ಬರ ಸಹಾಯ ಬೇಕಾಗಿಲ್ಲ ನಿಮಗೆ, ನನ್ನ ಕೆಪಾಸಿಟಿ ಇಷ್ಟೇ ಎಂದು ನೀವೇ ತಿಳಿಸ್ತಾ ಇದ್ದೀರ ಎಂದು ಮಂಜು ಆಟದ ಬಗ್ಗೆ ಕೋಪಗೊಂಡಿದ್ದರು.

ಇದಕ್ಕೆ ಮಂಜು ಅವರು, ನಾವು ಆಡಿದ ಆಟ ಫೇರ್​ ಗೇಮ್​ ಅಲ್ಲ, ಬುದ್ಧಿವಂತರ ಆಟ ಎಂದು ಹೇಳಿದ್ದಾರೆ. ಆಗ ಜೋರಾಗಿ ಚಪ್ಪಾಳೆ ತಟ್ಟಿದ ಗೌತಮಿ-ಮೋಕ್ಷಿತಾ, ನನ್ನ ಗೆಳೆಯ ಇಷ್ಟೊಂದು ಬುದ್ಧಿವಂತ ಅನ್ನೋದು ಗೊತ್ತಿರಲಿಲ್ಲ ನನಗೆ ಎಂದು ಭಾವುಕರಾದರು. ಮಂಜು ಹೈಲೆಟ್​ ಆಗೋದಿಕ್ಕೆ ನೋಡುತ್ತಿದ್ದಾರೆ ಬಂದಾಗಿನಿಂದಲೂ. ನೀವು ಒಬ್ಬರೇ ಬಂದಿರೋದು, ನಿಮಗಾಗಿ ಅಷ್ಟೇ ಆಡಿ ಎಂದು ಮೋಕ್ಷಿತಾ ಹೇಳಿದರು.

ಈ ಎಲ್ಲ ಘಟನೆಯಿಂದ ಮಂಜು ಅವರು ಗೌತಮಿ-ಮೋಕ್ಷಿತಾ ಜೊತೆಗಿನ ಸ್ನೇಹ ಕಳೆದುಕೊಂಡರು ಎಂದೇ ನಂಬಲಾಗಿತ್ತು. ಆದರೆ, ರಾತ್ರಿ ವೇಳೆಗೆ ಮೂವರು ಕುಳಿತುಕೊಂಡು ಮಾತನಾಡಿ ಪುನಃ ಒಂದಾಗಿದ್ದಾರೆ. ಮಂಜು ಅವರು ಸ್ವಾರಿ ಎಂದು ಇಬ್ಬರ ಬಳಿ ಕೇಳಿದ್ದಾರೆ. ಬಳಿಕ ಕೆಲ ಸಮಯ ಇವರು ಹರಟೆ ಹೊಡೆದು ಎಲ್ಲವನ್ನೂ ಮರೆತು ನಮ್ಮ ಫ್ರೆಂಡ್​ಶಿಪ್ ಗಟ್ಟಿಯಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ.

BBK 11: ಕುಚಿಕು ಸ್ನೇಹಿತ ಧನರಾಜ್​ರನ್ನೇ ನಾಮಿನೇಟ್ ಮಾಡಿದ ಹನುಮಂತ: ಕೊಟ್ಟ ಕಾರಣ ಏನು ನೋಡಿ