Tuesday, 10th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅವಘಡ: ಮಹಿಳಾ ಸ್ಪರ್ಧಿಯನ್ನು ತಳ್ಳಿದ ಉಗ್ರಂ ಮಂಜು

Ugramm Manju and Manasa

ಈವರೆಗೆ ನಡೆದುಕೊಂಡು ಬಂದ 10 ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ಭಿನ್ನವಾಗಿದೆ. ಹಿಂದಿನ ಸೀಸನ್​ಗಳಲ್ಲಿ ಮುದ್ದಾದ ಮಾತು, ಹಾಡು, ಕಾಮಿಡಿ ಜೊತೆಗೆ ಸಣ್ಣ ಜಗಳ ಹೈಲೇಟ್ ಆಗಿತ್ತು. ಆದರೆ, ಈ ಬಾರಿಯ ಸೀಸನ್​ನಲ್ಲಿ ಅತಿ ಹೆಚ್ಚು ಜಗಳಗಳೇ ನಡೆಯುತ್ತಿದೆ. ಶೋ ಆರಂಭವಾಗಿ ಮೂರು ವಾರ ಕಳೆದಿವೆಯಷ್ಟೆ, ಅದಾಗಲೇ ಇಬ್ಬರು ಸರ್ಧಿಗಳು ಇದೇ ವಿಚಾರಕ್ಕೆ ಮನೆಯಿಂದ ಹೊರಹೋಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಂತು ಸೀಸನ್ 11ರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಕೆಲ ಸ್ಪರ್ಧಿಗಳು ಮನುಷ್ಯತ್ವ ಬಿಟ್ಟು ಆಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತಹ ಮತ್ತೊಂದು ಘಟನೆ ಇದೀಗ ದೊಡ್ಮನೆಯಲ್ಲಿ ನಡೆದಿದೆ. ಟಾಸ್ಕ್ ಆಡಿವ ಮಧ್ಯೆ ಕಿತ್ತಾಟಗಳು ಜೋರಾಗಿವೆ. ಬಿಗ್‌‌ ಬಾಸ್‌ ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್​ ಮಧ್ಯೆ ಮಂಜು ಆಡುವ ಭರದಲ್ಲಿ ಮಾನಸ ಅವರನ್ನು ದೂಡಿದ್ದಾರೆ.

ತಮ್ಮ ಪಕ್ಷದ ಚಿಹ್ನೆಯ ಪೋಸ್ಟರ್‌ಗಳನ್ನ ಗಾಜಿನ ಬಾಗಿಲುಗಳ ಮೇಲೆ ಐಶ್ವರ್ಯಾ ಸಿಂಧೋಗಿ ನಾಯಕತ್ವದ ಪಕ್ಷದ ಕಾರ್ಯಕರ್ತರು ಅಂಟಿಸಿದ್ದರು. ಅದನ್ನ ಗಮನಿಸಿದ ಮತ್ತೊಂದು ಪಕ್ಷದ ಗೋಲ್ಡ್ ಸುರೇಶ್,ರೂಲ್ಸ್‌ಗೆ ವಿರುದ್ಧವಾಗಿ ಅಂಟಿಸಿದ್ದಾರೆ. ಕ್ಯಾಮೆರಾ ಫೋಕಸ್ ಆಗಲ್ಲ ಎಂದರು. ಅದಕ್ಕೆ, ಹಾಗಾದ್ರೆ, ನಾವೂ ಅಂಟಿಸುತ್ತೇವೆ ಎಂದರು ಮಾನಸಾ.

ಬಳಿಕ ಗಾಜಿನ ಬಾಗಿಲುಗಳ ಮೇಲೆ ಅಂಟಿಸಿರುವ ಪೋಸ್ಟರ್‌ಗಳನ್ನ ಮಾನಸಾ ಕಿತ್ತು ಹಾಕಿದ್ದಾರೆ. ಈ ಸಮಯದಲ್ಲಿ ಮಾನಸಾ – ಹಂಸ ಮಧ್ಯೆ ಮಾತಿನ ಚಕಮಕಿ ನಡೆಯಿತು. ಮಧ್ಯೆ ಬಂದ ಉಗ್ರಂ ಮಂಜು ನಮ್ಮ ಪಕ್ಷದ ಪೋಸ್ಟರ್‌ನ ಹೇಗೆ ಮುಟ್ಟುತ್ತೀಯಾ? ಎಂದು ಮಾನಸಾಗೆ ಜೋರು ಮಾಡಿದರು. ಬಾಗಿಲ ಬಳಿಯೇ ಎರಡೂ ಪಕ್ಷಗಳ ಮಧ್ಯೆ ಜೋರು ಗಲಾಟೆ ನಡೆದಿದೆ. ಈ ವೇಳೆ ಹಿಂದೆಯಿಂದ ಬಂದ ಮಾನಸಾ ಮತ್ತೆ ಅದೇ ಪೋಸ್ಟರ್‌ನ ಕಿತ್ತು ಹಾಕಲು ಯತ್ನಿಸಿದಾಗ ಸಡನ್‌ ಆಗಿ ಉಗ್ರಂ ಮಂಜು ಮಾನಸಾ ಅವರನ್ನ ತಳ್ಳಿದ್ದಾರೆ.

ಮಂಜು ಅವರ ಮೊಣಕೈ ತಾಗಿದ ಪರಿಣಾಮ ಮಾನಸ ಅವರ ಕಿಬ್ಬೊಟ್ಟೆಗೆ ನೋವಾಗಿದ್ದು, ಕಣ್ಣಿರೀಟ್ಟಿದ್ದಾರೆ. ಈ ಕುರಿತು ಸಾಮಾಜಿಕ ತಾಣಗಳಲ್ಲಿ ದೊಡ್ಡದಾಗಿ ಟಾಕ್ ಆಗುತ್ತಿದೆ. ಕೆಲವರು ಉಗ್ರಂ ಮಂಜು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಕೆಲವರು ಉಗ್ರಂ ಮಂಜು ಅವರು ಮನೆಯಿಂದ ಹೊರಗೆ ಹೋಗಲೇ ಬೇಕು ಎಂದು ಕಮೆಂಟ್‌ ಮಾಡಿದ್ದಾರೆ.

BBK 11: ಬಿಗ್ ಬಾಸ್ ಮನೆಗೆ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ?: ನ್ಯೂಸ್ ಆ್ಯಂಕರ್ ಕಂಡು ಸ್ಪರ್ಧಿಗಳು ಶಾಕ್