Wednesday, 6th November 2024

BBK 11: ಇಂದು ಕಿಚ್ಚನ ಎರಡನೇ ಪಂಚಾಯಿತಿ: ವಾರದ ಕತೆಯಲ್ಲಿ ಈ ವಿಷಯ ಡಿಸ್ಕಸ್ ಖಚಿತ

Varada Kathe Kicchana Jothe

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಶುರುವಾಗಿ ಎರಡು ವಾರ ಆಗುತ್ತಿದೆ. ಮೊದಲ ವಾರ ಜಗಳಗಳಿಂದ ಕೂಡಿದ್ದ ಮನೆ ಎರಡನೇ ವಾರ ಟಾಸ್ಕ್​ನಲ್ಲೇ ಬ್ಯುಸಿ ಆಗಿತ್ತು. ಇದರ ಮಧ್ಯೆ ಸಣ್ಣ-ಪುಟ್ಟ ಜಗಳಗಳು ನಡೆದಿವೆ. ಸ್ವರ್ಗ ವಾಸಿಗಳು ಮತ್ತು ನರಕ ವಾಸಿಗಳು ಕಾನ್ಸೆಪ್ಟ್ ನಿನ್ನೆಗೆ (ಅ. 11) ಮುಕ್ತಾಯಗೊಂಡಿದ್ದು, ಇದೀಗ ಮನೆ ಮಂದಿ ಎಲ್ಲರೂ ಜೊತೆಯಾಗಿದ್ದಾರೆ. ಇದರ ನಡುವೆ ಇಂದು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ನಡೆಯಲಿದೆ.

ಕಳೆದ ವಾರದ ಪಂಚಾಯಿತಿಯಲ್ಲಿ ಕಿಚ್ಚ ಲಾಯರ್ ಜಗದೀಶ್ ಮೇಲೆ ಗರಂ ಆಗಿದ್ದರು. ಹೀಗಾಗಿ ಈ ವಾರ ಜಗದೀಶ್ ಮಾತು ಕಳೆದ ವಾರಕ್ಕಿಂತ ಕಡಿಮೆ ಇತ್ತು. ಈ ವಾರ ಸುದೀಪ್ ಕ್ಯಾಪ್ಟನ್ ಆಗಿದ್ದ ಹಂಸ ಅವರಿಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಈ ವಾರ ಟಾಸ್ಕ್​ನ ಉಸ್ತುವಾರಿ ನಿಭಾಹಿಸಿದ ಹಂಸ ಒಂದಲ್ಲ, ಎರಡಲ್ಲ ಅನೇಕ ಎಡವಟ್ಟು ಮಾಡಿಕೊಂಡಿದ್ದರು. ನಿಯಮವನ್ನು ಸರಿಯಾಗಿ ತಿಳಿಯದೆ ಮತ್ತು ಹೇಳದೆ ಗೊಂದಲ ಸೃಷ್ಟಿಸಿದ್ದರು.

ನಾಮಿನೇಷನ್​ನಿಂದ ಪಾರಾಗಲು ಟಾಸ್ಕ್​ನಲ್ಲಿ ಗೆಲುವು ಮುಖ್ಯವಾಗಿತ್ತು. ಹೀಗಿರುವಾಗ ಹಂಸ ತೆಗೆದುಕೊಂಡ ಕೆಲ ತಪ್ಪು ನಿರ್ಧಾರಕ್ಕೆ ಇಡೀ ಮನೆ ಹೊತ್ತಿ ಉರಿದಿತ್ತು. ಇವರು ಮಾಡಿದ ತಪ್ಪಿನಿಂದ ಐಶ್ವರ್ಯ ನರಕಕ್ಕೆ ತೆರಳುವಂತಾಯಿತು. ಈ ಎಲ್ಲ ತಪ್ಪಿಗೆ ಹಂಸ ಸಿಕ್ಕಾಪಟ್ಟೆ ಹರ್ಟ್ ಕೂಡ ಆಗಿದ್ದರು. ನನ್ನಿಂದಲೇ ಎಲ್ಲ ತಪ್ಪಾಗಿದೆ. ನಾನೇ ನರಕಕ್ಕೆ ಹೋಗುತ್ತೇನೆ. ನನಗೆ ಇದನ್ನು ಮುಂದುವರೆಸಲು ಸಾಧ್ಯವಿಲ್ಲ. ನಾನು ಈ ಪ್ರಯಾಣವನ್ನು ಇಲ್ಲಿಗೆ ನಿಲ್ಲಿಸುವುದು ಸೂಕ್ತ ಎಂದು ಅನಿಸುತ್ತಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಸುದೀಪ್ ಅವರು ಇಂದು ಹಂಸ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಲೈನ್ಸ್‌ ಡೌನ್‌ ಆಗಿದ್ದಾಗ, ಅದರಿಂದ ಆಚೆಗೆ ಇಣುಕಿ ನೋಡಬಾರದು ಎಂಬ ನಿಯಮವಿದ್ದರೂ ಕೆಲ ಸ್ಪರ್ಧಿಗಳು ಈ ನಿಯಮ ಉಲ್ಲಂಘಿಸಿದ್ದಾರೆ. ಈ ವಿಚಾರ ಕೂಡ ಇಂದು ಚರ್ಚೆಯಾಗಲಿದೆ. ಜೊತೆಗೆ ತಮಾಷೆಯ ಡಿಸ್ಕಷನ್ ಕೂಡ ನಡೆಯಲಿದೆ.

BBK 11: ನಗು ನಗುತ್ತಲೇ ಉಗ್ರಂ ಮಂಜುಗೆ ಟಕ್ಕರ್ ಕೊಟ್ಟ ಧನರಾಜ್ ಆಚಾರ್