Saturday, 14th December 2024

ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಇನ್ನಿಲ್ಲ

ಚೆನ್ನೈ: ಐದು ದಶಕಗಳ ವೃತ್ತಿಜೀವನ ಹೊಂದಿದ್ದ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಶನಿವಾರ ಚೆನ್ನೈನಲ್ಲಿ ನಿಧನರಾಗಿ ದ್ದಾರೆ.

ವಾಣಿ ಜಯರಾಮ್ ಕನ್ನಡ ಸೇರಿ ತಮಿಳು, ಹಿಂದಿ, ತೆಲುಗು, ಮಲಯಾಳಂ, ಮರಾಠಿ, ಒಡಿಯಾ, ಬಂಗಾಳಿ ಮತ್ತು ತುಳು ಸೇರಿದಂತೆ 19 ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ. ಅವರು ಭಕ್ತಿಗೀತೆಗಳು ಮತ್ತು ಖಾಸಗಿ ಆಲ್ಬಂಗಳು ಸೇರಿದಂತೆ 10,000 ಕ್ಕೂ ಹೆಚ್ಚು ಹಾಡು ಗಳನ್ನು ಹಾಡಿದ್ದಾರೆ. ಅವರು ಪ್ರಪಂಚದಾದ್ಯಂತ ಹಲವಾರು ಏಕವ್ಯಕ್ತಿ ಸಂಗೀತ ಕಚೇರಿ ಗಳನ್ನ ಸಹ ನೀಡಿದ್ದಾರೆ.

ವಾಣಿ ಜಯರಾಮ್ ಮೂರು ಬಾರಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಒಡಿಶಾ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗುಜರಾತ್ ಸೇರಿದಂತೆ ರಾಜ್ಯಗಳಿಂದ ತಮ್ಮ ಗಾಯನಕ್ಕಾಗಿ ರಾಜ್ಯ ಸರ್ಕಾರದ ಪ್ರಶಸ್ತಿ ಗಳನ್ನು ಪಡೆದಿದ್ದಾರೆ.

ಭಾರತ ಸರ್ಕಾರ ಇವರ ಅನನ್ಯ ಸಾಧನೆಯನ್ನ ಗುರುತಿಸಿ ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಿತ್ತು.