Thursday, 12th December 2024

BBK 11: 12 ಮಂದಿಯಲ್ಲಿ ಇಂದು ಸೇಫ್ ಆಗುವ ಕಂಟೆಸ್ಟೆಂಟ್ಸ್ ಯಾರು?

BBK 11 Nomination

ಬಿಗ್ ಬಾಸ್ (Bigg Boss Kannada 11) ಮನೆಯಿಂದ ಈ ವಾರ ಹೊರ ಹೋಗಲು ಬರೋಬ್ಬರಿ 12 ಮಂದಿ ನಾಮಿನೇಟ್ ಆಗಿದ್ದಾರೆ. ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿದ್ದಾರೆ. ನಾಮಿನೇಟ್ ಆಗಿರುವ 12 ಸದಸ್ಯರಲ್ಲಿ ಕ್ಯಾಪ್ಟನ್ ಹನುಮಂತ ಹೆಸರು ಕೂಡ ಇದೆ. ಕಳೆದ ವೀಕೆಂಡ್ ಕಿಚ್ಚ ಸುದೀಪ್ ಅವರು ತಾಯಿಯ ನಿಧನದ ಕಾರಣದಿಂದ ಶೋ ನಡೆಸಿಕೊಡಲು ಬಂದಿರಲಿಲ್ಲ. ಆದರೆ, ಇಂದು ಬರುವುದು ಖಚಿತವಾಗಿದೆ. ಹೀಗಾಗಿ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಏನಾದರು ಟ್ವಿಸ್ಟ್ ಇರುತ್ತಾ ಎಂಬುದು ನೋಡಬೇಕಿದೆ.

12 ಮಂದಿ ನಾಮಿನೇಷನ್:

ಈ ವಾರ ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿದ್ದು, ಅದು ಗೌತಮಿ ಮತ್ತು ತ್ರಿವಿಕ್ರಮ್‌ ಆಗಿದ್ದಾರೆ. ಇವರನ್ನು ಬಿಟ್ಟು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ, ತುಕಾಲಿ ಮಾನಸ, ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್, ಐಶ್ವರ್ಯಾ, ಧನರಾಜ್,‌ ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದಾರೆ.

ಹಾಗೆಯೆ ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದರು. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್‌ ಮಾಡಿದ್ದ ಕಾರಣಕ್ಕೆ ಅವರು ಕೂಡ ಈ ಲಿಸ್ಟ್​ನಲ್ಲಿ ಇದ್ದಾರೆ.

ಇಂದಿನ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಸುದೀಪ್ ಅವರು ಮೊದಲು ಆರು ಮಂದಿಯನ್ನು ಸೇಫ್ ಮಾಡುವ ಸಂಭವವಿದೆ. ಇದರಲ್ಲಿ ಧರ್ಮಾ ಕೀರ್ತಿರಾಜ್, ಉಗ್ರಂ ಮಂಜು, ಶಿಶಿರ್ ಶಾಸ್ತ್ರಿ, ಭವ್ಯಾ ಗೌಡ, ಅನುಷಾ ರೈ ಹಾಗೂ ಧನರಾಜ್ ಆಚಾರ್ ಇಂದಿನ ಎಪಿಸೋಡ್​ನಲ್ಲಿ ಸೇವ್ ಆಗಬಹುದು ಎಂಬ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.

ಕಳೆದ ವಾರ ಮೋಕ್ಷಿತಾ ಪೈ ಹಾಗು ಹಂಸ ಪ್ರತಾಪ್ ಡೇಂಜರ್ ಝೋನ್​ನಲ್ಲಿದ್ದರು. ಕೊನೆಯದಾಗಿ ಇವರಿಬ್ಬರು ಮಾತ್ರ ಉಳಿಸಿಕೊಂಡಿದ್ದರು. ಇದರಲ್ಲಿ ಹಂಸ ಎಲಿಮಿನೇಟ್ ಆದರೆ, ಮೋಕ್ಷಿತಾ ಉಳಿದುಕೊಂಡಿದ್ದರು. ಈ ವಾರ ಕೂಡ ಇವರು ನಾಮಿನೇಟ್ ಆಗಿರುವ ಕಾರಣ ಬಾಟಮ್ 2ನಲ್ಲಿ ಪುನಃ ಬರುವ ಸಂಭವವಿದೆ. ಹಾಗೆಯೆ ಇವರ ಜೊತೆಗೆ ತುಕಾಲಿ ಮಾನಸಾ ಇರಬಹುದು.

BBK 11: ಮನಸ್ಸು ಭಾರವಾಗಿದ್ರೂ ಜವಾಬ್ದಾರಿ ನಿಭಾಯಿಸೋಕೆ ಹಾಜರಾದ ಕಿಚ್ಚ ಸುದೀಪ್