ಬಿಗ್ ಬಾಸ್ (Bigg Boss Kannada 11) ಮನೆಯಿಂದ ಈ ವಾರ ಹೊರ ಹೋಗಲು ಬರೋಬ್ಬರಿ ಏಳು ಮಂದಿ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಮನೆಯಿಂದ ಅನುಷಾ ರೈ ಎಲಿಮಿನೇಟ್ ಆಗಿ ಹೊರಬಂದಿದ್ದರು. ಇದೀಗ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ- ಯಾರು ಸೇಫ್ ಆಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಯಾಕೆಂದರೆ ಎಂಟನೇ ವಾರ ನಾಮಿನೇಟ್ ಆಗಿರುವ ಎಲ್ಲ ಸ್ಪರ್ಧಿಗಳು ಬಲಿಷ್ಠರೇ ಆಗಿದ್ದಾರೆ.
ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್ ಹಾಗೂ ಕ್ಯಾಪ್ಟನ್ ಭವ್ಯಾ ಗೌಡಾ ಅವರ ನೇರ ನಾಮಿನೇಷನ್ನಿಂದ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಮೂರು ಜನರು ಶನಿವಾರದ ಎಪಿಸೋಡ್ನಲ್ಲಿ ಸೇವ್ ಆಗಿದ್ದಾರೆ.
ನಾಮಿನೇಟ್ ಆಗಿರುವವರ ಪೈಕಿ ಈ ವಾರ ಚೈತ್ರಾ, ಮಂಜು, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ ಹಾಗೂ ಹನುಮಂತ ಈ ವಾರ ಚೆನ್ನಾಗಿ ಆಡಿದ್ದಾರೆ. ಕಳೆದ ವಾರ ಚೈತ್ರಾ ಅವರು ನಾನು ಮನೆಯಿಂದ ಹೊರ ಹೋಗುತ್ತೇನೆ ಎಂದು ಹೇಳಿದ್ದರು. ಆದರೆ, ಈ ವಾರದ ಮೊದಲ ಎರಡು ದಿನ ಸೈಲೆಂಟ್ ಆಗಿದ್ದರೂ ಬಳಿಕ ಚಿಗುರಿದ್ದಾರೆ. ಆದರೆ, ಮೊದಲ ಮೂವರಲ್ಲಿ ಸೇಫ್ ಆದವರ ಪೈಕಿ ಇವರ ಹೆಸರಿಲ್ಲ.
ಶನಿವಾರದ ಎಪಿಸೋಡ್ನಲ್ಲಿ ಮೊದಲಿಗರಾಗಿ ಮೋಕ್ಷಿತಾ ಪೈ ಸೇಫ್ ಆಗಿದ್ದಾರೆ ಎನ್ನಲಾಗಿದೆ. ಬಳಿಕ ಹನುಮಂತ ಲಮಾಣಿ ಹಾಗೂ ಉಗ್ರಂ ಮಂಜು ಸೇಫ್ ಆಗಿದ್ದಾರಂತೆ. ಹಾಗೆಯೆ ಈ ವಾರದ ಕಿಚ್ಚನ ಚಪ್ಪಾಳೆ ಅದ್ಭುತ ಪ್ರದರ್ಶನ ನೀಡಿದ ಹಾಗೂ ಮುಂದಿನ ವಾರದ ಮನೆಯ ಕ್ಯಾಪ್ಟನ್ ಆಗಿರುವ ಉಗ್ರಂ ಮಂಜು ಅವರಿಗೆ ದಕ್ಕಿದೆ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸದ್ಯ ಉಳಿದಿರುವುದು ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಗೌತಮಿ ಜಾಧವ್ ಮತ್ತು ಧರ್ಮ ಕೀರ್ತಿರಾಜ್. ಈ ಪೈಕಿ ಧರ್ಮಾ ಎಲಿಮಿನೇಟ್ ಆಗಲಿದ್ದಾರೆ ಎಂಬ ಮಾತಿದೆ. ಬಿಗ್ ಬಾಸ್ ಮನೆಯಲ್ಲಿ ಧರ್ಮಾ ಕೀರ್ತಿರಾಜ್ ಮೂಲೆಗುಂಪಾಗುತ್ತಿದ್ದಾರೆ ಎಂದು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇದೆ. ತಮ್ಮ ಒಳ್ಳೆಯ ಮನಸ್ಸಿನಿಂದ ಧರ್ಮ ಅವರು ಎಲ್ಲರಿಗೂ ಇಷ್ಟ ಆಗುತ್ತಿದ್ದಾರೆ. ಆದರೆ, ಅವರು ಉತ್ತಮ ಆಟ ತೋರಿಸುತ್ತಿಲ್ಲ. ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ.
BBK 11: ನನ್ನ ಮುಂದೆ ಅದನ್ನೇ ವಾಪಸ್ ರಿಪೀಟ್ ಮಾಡಿ: ರಜತ್ಗೆ ಕನ್ನಡ ಪದಗಳ ಪಾಠ ಮಾಡಿದ ಸುದೀಪ್