Friday, 13th December 2024

Vikrant Massey: ʻದಿ ಸಬರಮತಿ ರಿಪೋರ್ಟ್‌ʼ ಸಿನಿಮಾದ ನಂತರ ನನ್ನ 9 ತಿಂಗಳ ಮಗನಿಗೂ ಬೆದರಿಕೆ ಬರ್ತಾ ಇದೆ; ನಟ ವಿಕ್ರಾಂತ್ ಮಾಸ್ಸೆ ಆತಂಕ

Vikrant Massey

ಮುಂ‌ಬೈ: ವಿಕ್ರಾಂತ್ ಮಾಸ್ಸೆ (Vikrant Massey) ಅಭಿನಯದ ಬಹುನಿರೀಕ್ಷಿತ ಚಿತ್ರ ʼದಿ ಸಬರಮತಿ ರಿಪೋರ್ಟ್‌ʼ (The Sabarmati Report )ನವೆಂಬರ್ 15 ರಂದು ಬಿಡುಗಡೆಯಾಗಲಿದೆ.  2002ರ ಫೆಬ್ರವರಿಯಲ್ಲಿ ಗುಜರಾತ್‌ನ ಗೋದ್ರಾದಲ್ಲಿ ನಡೆದ ಹತ್ಯಾಕಾಂಡದ (Godhra Tragedy) ಬಗ್ಗೆ ಹೇಳುವ ಕಥೆಯನ್ನಿಟ್ಟುಕೊಂಡು ಚಿತ್ರವನ್ನು ನಿರ್ಮಿಸಲಾಗಿದೆ. ರೈಲಿಗೆ ಬೆಂಕಿ ಇಟ್ಟ ಪರಿಣಾಮ ಸುಮಾರು 59 ಜನ ಮೃತಪಟ್ಟಿದ್ದರು. ʼದಿ ಸಬರಮತಿ ರಿಪೋರ್ಟ್‌ ಸಿನಿಮಾದಲ್ಲಿ ವಿಕ್ರಾಂತ್‌ ಮಾಸ್ಸೆ ನಟಿಸುತ್ತಿದ್ದು, ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ತಮಗೆ ಬೆದರಿಕೆ ಕರೆ ಬರುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಮಗೆ ಬೆದರಿಕೆ ಕರೆಗಳು ಬರುತ್ತಿವೆ. ನನಗೆ ನನ್ನ ಕುಟುಂಬದವರ ಬಗ್ಗೆ ಹೆಚ್ಚು ಚಿಂತೆಯಿದೆ ನನಗೆ 9 ತಿಂಗಳ ಮಗ ಇದ್ದಾನೆ ಎಂದು ಮಗುವಿನ ಸುರಕ್ಷತೆ ಕಳವಳ ವ್ಯಕ್ತಪಡಿಸಿದ್ದಾರೆ.

“ನನಗೆ ಸೋಶಿಯಲ್ ಮೀಡಿಯಾ, ವಾಟ್ಸಾಪ್ ಮೂಲಕ ನನಗೆ ಬೆದರಿಕೆ ಹಾಕಲಾಗುತ್ತಿದೆ. ಒಂಬತ್ತು ತಿಂಗಳ ಹಿಂದೆ ನಾನು ಒಂದು ಮಗುವಿನ ತಂದೆಯಾಗಿದ್ದೇನೆ ಎಂದು ಜನರಿಗೆ ತಿಳಿದಿದೆ. ನನ್ನ ಮಗು ಇನ್ನೂ ನಡೆಯಲೂ ಕೂಡ ಪ್ರಾರಂಭಿಸಿಲ್ಲ. ಅವನನ್ನೂ ಕೂಡ ಈ ವಿಷಯದಲ್ಲಿ ಎಳೆದು ತಂದು ಬೆದರಿಕೆ ಹಾಕುತ್ತಾರೆ. ಅವನ ಸುರಕ್ಷತೆಯ ಬಗ್ಗೆ ನಮಗೆ ಚಿಂತೆಯಾಗುತ್ತದೆ. ಇದೆಲ್ಲಾ ನೋಡಿದರೆ ನಾವು ಸಮಾಜದಲ್ಲಿ ವಾಸಿಸುತ್ತಿದ್ದೇವೆಯೆ ಎಂದು ನಮಗೆ ಅನುಮಾನ ಕಾಡುತ್ತದೆ ಎಂದು ಮಾಸ್ಸೆ ಹೇಳಿದ್ದಾರೆ.

ಸಬರಮತಿ ರಿಪೋರ್ಟ್‌ನಲ್ಲಿ, ವಿಕ್ರಾಂತ್ ಪತ್ರಕರ್ತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಗೋದ್ರಾ ಹತ್ಯಾಕಾಂಡದ ಸತ್ಯಾ ಸತ್ಯತೆಯನ್ನು ಬಿಚ್ಚಿಡುವ ಸಿನಿಮಾ ಇದಾಗಿದ್ದು,ರಾಶಿ ಖನ್ನಾ ಮತ್ತು ರಿದ್ಧಿ ಡೋಗ್ರಾ ಕೂಡ ನಟಿಸುತ್ತಿದ್ದಾರೆ. ಧೀರಜ್ ಸರ್ನಾ ನಿರ್ದೇಶನ ಹಾಗೂ ಏಕ್ತಾ ಕಪೂರ್ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದೆ.

ಇತ್ತೀಚೆಗೆ ಸಬರಮತಿ ರಿಪೋರ್ಟ್‌ ಸಿನಿಮಾದ ಬಗ್ಗೆ ಮಾತನಾಡುವಾಗ ಮಾಸ್ಸೆ ಹೇಳಿದ್ದ ಹೇಳಿಕೆಯೊಂದು ವಿವಾದಕ್ಕೀಡಾಗಿತ್ತು. ಚಿತ್ರದ ಕುರಿತು ಸಂದರ್ಶನದಲ್ಲಿ ಮಾತನಾಡಿದ್ದ ಮಾಸ್ಸೆ “ನನಗೆ ಕೆಟ್ಟದಾಗಿ ಕಂಡದ್ದು ನಿಜವಾಗಿ ಕೆಟ್ಟದ್ದಲ್ಲ.ಭಾರತದ ಮುಸ್ಲಿಮರು ಅಪಾಯದಲ್ಲಿದ್ದಾರೆ ಎಂದು ಜನರು ಹೇಳುತ್ತಾರೆ. ಯಾರೂ ಅಪಾಯದಲ್ಲಿಲ್ಲ; ಎಲ್ಲವೂ ಸರಿಯಾಗಿ ನಡೆಯುತ್ತಿದೆ. ಹೇಳಿದ್ದರು. ಈ ಹಿಂದೆ ಕೇಂದ್ರ ಸರ್ಕಾರದ ಬಗ್ಗೆ ಮಾಸ್ಸೆ ಕಿಡಿ ಕಾರಿದ್ದರು.

ಇದನ್ನೂಓದಿ: Salman Khan : ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾ ಲಿರಿಸಿಸ್ಟ್‌ಗೂ ಜೀವ ಬೆದರಿಕೆ; ಕರ್ನಾಟಕ ಮೂಲದ ಕಿಡಿಗೇಡಿ ಅರೆಸ್ಟ್‌