Saturday, 23rd November 2024

Viral Post: ಆರಾಧ್ಯ ಬರ್ತ್ ಡೇಗೆ ಅಭಿಷೇಕ್ ಗೈರು: ಬಚ್ಚನ್ ಫ್ಯಾಮಿಲಿಯಿಂದ ಐಶು ದೂರ ಆಗಿರೋದು ಗ್ಯಾರಂಟಿನಾ? ವೈರಲ್‌ ಪೋಸ್ಟ್‌ನಲ್ಲೇನಿದೆ?

ಮುಂಬೈ: ಬಾಲಿವುಡ್‌(Bollywood)ನ ತಾರಾ ಜೋಡಿಗಳ ವೈಯಕ್ತಿಕ ಜೀವನ ಸದಾ ಸೋಷಿಯಲ್​ ಮೀಡಿಯಾ(social media)ದಲ್ಲಿ ಚರ್ಚೆಗೊಳಗಾಗುತ್ತದೆ. ಅದರಲ್ಲೂ ಐಶ್ವರ್ಯಾ ರೈ ಬಚ್ಚನ್(Aishwarya Bachchan Rai)ಮತ್ತು ಅಭಿಷೇಕ್ ಬಚ್ಚನ್(Abhishek-bachchan)ದಂಪತಿಯ ದಾಂಪತ್ಯ ಜೀವನ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ರೊಮ್ಯಾನ್ಸ್, ಗ್ಲ್ಯಾಮರ್​ನಿಂದ ಗುರುತಿಸಲ್ಪಟ್ಟ ಅವರ ಸಂಬಂಧ ಕಳೆದ ಹಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಒಳಗಾಗಿದೆ(Viral Post).

ವಿಶೇಷವಾಗಿ, ಜುಲೈನಲ್ಲಿ ಅನಂತ್ ಅಂಬಾನಿ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡ ನಂತರ ವದಂತಿಗಳು ಹೆಚ್ಚು ಉಲ್ಬಣಗೊಂಡವು.ಸ್ಟಾರ್​ ಕಪಲ್​ನ ಸಂಬಂಧದ ಬಗ್ಗೆ ಅಭಿಮಾನಿಗಳು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳಿವೆ. ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಪಿಸುಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ.

ತೀವ್ರ ವದಂತಿಗಳ ನಡುವೆ ಇದೀಗ ಇವರ ಸಂಬಂಧ ಸರಿ ಇಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದ್ದು, ಬಚ್ಚನ್ ಕುಟುಂಬದ ಅನುಪಸ್ಥಿತಿಯಲ್ಲಿ ಐಶ್ವರ್ಯಾ ರೈ ತನ್ನ ಪ್ರೀತಿಯ ಪುತ್ರಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಹೌದು ಕಳೆದ ನವೆಂಬರ್ 16 ಐಶ್ವರ್ಯ ರೈ ಪುತ್ರಿ ಆರಾಧ್ಯಾಳ ಹುಟ್ಟುಹಬ್ಬವಿತ್ತು, ಈ ನಿಮಿತ್ತ ಬಿಲೇಟೆಡ್ ಬರ್ತಡೇ ಸೆಲೆಬ್ರೆಷನ್ ಮಾಡಿದ್ದು, ಇದೇ ವೇಳೆ ತಂದೆ ಕೃಷ್ಣರಾಜ್ ರೈ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಗಮನಿಸಬೇಕಾದ ಸಂಗತಿ ಎಂದರೆ ಐಶು ಹಂಚಿಕೊಂಡ ಪೋಸ್ಟ್ ಅಲ್ಲಿ ಅಭಿಷೇಕ್ ಬಚ್ಚನ್ ಈ ಇವೆಂಟ್ ಗೆ ಗೈರಾಗಿದ್ದು, ನೆಟ್ಟಿಗರು ಅಭಿಷೇಕ್ ಬಚ್ಚನ್ ಮಗಳ ಬರ್ತಡೇಗೂ ಬಾರದಿರುವಷ್ಟರ ಮಟ್ಟಿಗೆ ಐಶ್ವರ್ಯ ರೈ ಅವರಿಂದ ದೂರ ಆಗಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಐಶ್ವರ್ಯ ರೈ ಹಂಚಿಕೊಂಡಿರು ಪೋಸ್ಟ್ ನ ಪ್ರತಿ ಫೋಟೋಗಳಲ್ಲಿಯೂ ಅಭಿಷೇಕ್ ಬಚ್ಚನ್ ಗೈರು ಹಾಜರಿ ಎದ್ದು ಕಾಣುತ್ತಿದ್ದು, ಪ್ರೀತಿಯ ಪುತ್ರಿಯ ಹುಟ್ಟುಹಬ್ಬವನ್ನು ಅಮ್ಮ ಬೃಂದಾ ರೈ ಜೊತೆ ಸೇರಿ ಆಚರಿಸಿ ಮಗಳಿಗೆ ಶುಭ ಹಾರೈಸಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral) ಆಗಿವೆ.

ಆ ಪೋಸ್ಟ್ ನಲ್ಲಿ ತಮ್ಮ ತಂದೆಯನ್ನು ನೆನೆದು ಭಾವುಕಾರಾಗಿದ್ದು, ‘ನನ್ನ ಜೀವನದ ಶಾಶ್ವತ ಪ್ರೀತಿಗೆ ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಅಪ್ಪ-ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ ನನ್ನ ಹೃದಯ… ನನ್ನ ಆತ್ಮ… ಎಂದಿಗೂ ಮತ್ತು ಮುಂದೆಯೂ’ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಅವರು ತಮ್ಮ ಜೀವನದ ಶಾಶ್ವತ ಪ್ರೀತಿಯಾದ ಅಮ್ಮ ಹಾಗೂ ಮಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಮಾವನಿಗೆ ಸೊಸೆಯ ಬರ್ತ್​​​ಡೇ ವಿಶ್​:ಕಳೆದ ತಿಂಗಳು ಭಾರತೀಯ ಚಿತ್ರರಂಗದ ಹೆಸರಾಂತ ನಟ ಅಮಿತಾಭ್​ ಬಚ್ಚನ್​​​ ತಮ್ಮ 82ನೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ಹಿನ್ನೆಲೆ ಐಶ್ವರ್ಯಾ ತಮ್ಮ ಮುದ್ದು ಮಗಳು ಆರಾಧ್ಯ ಮತ್ತು ಮಾವ ಅಮಿತಾಭ್​​ ಅವರನ್ನೊಳಗೊಂಡ ಮುದ್ದಾದ ಫೋಟೋವನ್ನು ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ತಮ್ಮ ಸ್ಪೆಷಲ್​ ಪೋಸ್ಟ್​ಗೆ, ”ಜನ್ಮದಿನದ ಶುಭಾಶಯಗಳು ಪಾ-ದಾದಾಜಿ. ದೇವರು ಆಶೀರ್ವದಿಸಲಿ” ಎಂದು ಬರೆದುಕೊಂಡಿದ್ದರು. ಕ್ಯಾಪ್ಷನ್​ನಲ್ಲಿ ಪಾ (ಅಪ್ಪ) ಎಂದು ಉಲ್ಲೇಖಿಸಿರುವುದು ಬಹುತೇಕರ ಗಮನ ಸೆಳೆದಿತ್ತು. ಇದು ಬಚ್ಚನ್​ ಮತ್ತು ರೈ ಕುಟುಂಬಕ್ಕೆ ಸಂಬಂಧಿಸಿದ ಊಹಾಪೋಹಗಳನ್ನು ಸಂಪೂರ್ಣವಾಗಿ ತೊಡೆದುಹಾಕುವ ಕೆಲಸ ಮಾಡಿತ್ತು.

ಆದರೆ ಮತ್ತೀಗ ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್ ನಿಂದ ಐಶು ಹಾಗೂ ಅಭಿಷೇಕ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ವದಂತಿಗೆ ಪುಷ್ಟಿ ನೀಡಿದಂತಾಗಿದ್ದು, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಪ್ರಖ್ಯಾತ ವೃತ್ತಿಜೀವನ ಮಾತ್ರವಲ್ಲದೇ, ಗಂಡನ ಮನೆ ಬಚ್ಚನ್ ಕುಟುಂಬದೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾರೆ ಎಂಬ ವದಂತಿಗಳು ಕಳೆದ ಕೆಲ ತಿಂಗಳುಗಳಿಂದ ದೊಡ್ಡ ಮಟ್ಟದಲ್ಲೇ ನಡೆದಿದೆ.

ಈ ಸುದ್ದಿಯನ್ನೂ ಓದಿ: Viral Video: ಗುರ್ಗಾಂವ್‌ನಲ್ಲೊಂದು ಅಲ್ಟ್ರಾ ಲಕ್ಷುರಿ ಮನೆ; ಬೆಲೆ ಎಷ್ಟು ನೋಡಿ!