Friday, 13th December 2024

ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ: ಅಮೂಲ್ಯ-ಜಗದೀಶ್ ಚಂದ್ರ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ, ಚೆಲುವಿನ ಚಿತ್ತಾರದ ಚೆಲುವೆ ಅಮೂಲ್ಯ ಮತ್ತು ಪತಿ ಜಗದೀಶ್ ಚಂದ್ರ ಇಬ್ಬರಿಂದ ಮೂವರಾಗಲಿದ್ದಾರೆ. ನಟಿ ಅಮೂಲ್ಯ ತಾಯಿಯಾಗುತ್ತಿದ್ದು, ಈ ಶುಭ ಸಮಾಚಾರ ವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿ ಕೊಂಡಿದ್ದಾರೆ.

ನಾವೀಗ 2022ರ ಬೇಸಿಗೆಯಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ತಮ್ಮ ಮಾವನವರಾದ ಜಿ.ಎಚ್. ರಾಮಚಂದ್ರ ಅವರ ಪರ ಅಮೂಲ್ಯ ಪ್ರಚಾರ ಮಾಡಿದಾಗ, ಅಮೂಲ್ಯ ಅವರೇ ರಾಜಕೀಯಕ್ಕೆ ಬರ್ತಾರೆ ಅನ್ನುವ ಸುದ್ದಿ ಹರಡಿತ್ತು. ನಾನು ರಾಜಕೀಯಕ್ಕೆ ಬರಬೇಕು ಅಂತಾ ಯಾವತ್ತೂ ಅಂದುಕೊಂಡಿಲ್ಲ. ನಾನು ನಮ್ಮ ಮಾವನ ಪರ ಕ್ಯಾಂಪೇನ್ ಮಾಡಲು ಬಂದಿದ್ದೇನೆ ಅಷ್ಟೇ ಎಂದು ಹೇಳಿದ್ದರು. ಚುನಾವಣೆ ವೇಳೆ ದರ್ಶನ್ ಜೊತೆ ಅಮೂಲ್ಯ ರಾಜಕೀಯ ಪ್ರಚಾರ ಮಾಡಿದ್ದರು.

ಮದುವೆಯ ಬಳಿಕ ಅಮೂಲ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. 2017ರಲ್ಲಿ ರಿಲೀಸ್ ಆದ ಮುಗುಳುನಗೆ ಸಿನಿಮಾದಲ್ಲಿ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್‌ ಅವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ವೈವಾಹಿಕ ಜೀವನಕ್ಕೆ ಕಾಲಿ ಡಲು ನಿರ್ಧರಿಸಿದರು.

ಮೇ 12, 2017ರಲ್ಲಿ ಜಗದೀಶ್ ಚಂದ್ರ ಅವರನ್ನ ಅಮೂಲ್ಯ ವಿವಾಹವಾದರು. ಬಳಿಕ 5 ವರ್ಷ ಮ್ಯಾರೀಡ್ ಲೈಫ್ ಎಂಜಾಯ್ ಮಾಡಿದ ಅಮೂಲ್ಯ, ಇದೀಗ ತಾಯ್ತನದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ.