Wednesday, 11th December 2024

ವಿಲ್ ಸ್ಮಿತ್’ಗೆ 10 ವರ್ಷ ನಿಷೇಧ

ಲಾಸ್ ಏಂಜಲೀಸ್‌: ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್, ನಿರೂಪಕ ಕ್ರಿಸ್ ರಾಕ್‌ಗೆ ವೇದಿಕೆಯ ಮೇಲೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಹಾಲಿವುಡ್ ಚಲನಚಿತ್ರ ಅಕಾಡೆಮಿ ನಟನನ್ನ ಆಸ್ಕರ್ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಂದ 10 ವರ್ಷಗಳ ಕಾಲ ನಿಷೇಧಿಸಿದೆ.

94ನೇ ಆಸ್ಕರ್ ಪ್ರಶಸ್ತಿಯು ಕಳೆದ ವರ್ಷ ನಮ್ಮ ಸಮುದಾಯದ ಅನೇಕ ವ್ಯಕ್ತಿಗಳ ಸಂಭ್ರಮಾಚರಣೆಯಾಗಿದೆ’ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಮುಖ್ಯ ಕಾರ್ಯನಿರ್ವಾಹಕ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಮಿತ್ ಅವರು ವೇದಿಕೆಯಲ್ಲಿ ಪ್ರದರ್ಶಿಸುವುದನ್ನ ನಾವು ನೋಡಿದ ಸ್ವೀಕಾರಾರ್ಹವಲ್ಲದ ಮತ್ತು ಹಾನಿಕಾರಕ ನಡವಳಿಕೆಯಿಂದ ಆ ಕ್ಷಣಗಳು ಮರೆಯಾಗಿದ್ದವು’ ಎಂದು ಅಕಾಡೆಮಿ ತಿಳಿಸಿದೆ.