Wednesday, 11th December 2024

ನಟ ಯೋಗಿ ಬಾಬುಗೆ ಹ್ಯಾಂಡ್ ಶೇಕ್ ಮಾಡದ ದೇವಸ್ಥಾನದ ಪೂಜಾರಿ..!

ಚೆನ್ನೈ: ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಎಲ್ಲರ ಗಮನ ಸೆಳೆಯುವ ಯೋಗಿ ಬಾಬು ಸದ್ಯ ಕಾಲಿವುಡ್​ನಲ್ಲಿ ಬಹು ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಎಲ್ಲ ಸೂಪರ್​ಸ್ಟಾರ್​ಗಳೊಂದಿಗೂ ನಟಿಸಿ ಸೈ ಎನಿಸಿಕೊಂಡಿರುವ ಯೋಗಿ ಬಾಬು, ರಜನಿಕಾಂತ್​ ಜತೆ ಜೈಲರ್​ ಸಿನಿಮಾದಲ್ಲಿ ನಟಿಸಿದ್ದಾರೆ.

ಯೋಗಿ ಬಾಬುಗೆ ಸಂಬಂಧಿಸಿದ ವಿಡಿಯೋವೊಂದು ಎಲ್ಲೆಡೆ ಹರಿದಾಡುತ್ತಿದೆ. ಯೋಗಿ ಬಾಬು ಅವರು ಮುರುಗನ್ ದೇವರ ದೊಡ್ಡ ಭಕ್ತ. ಕಳೆದ ತಿಂಗಳು ತಿರುವಳ್ಳೂರ್​ ಜಿಲ್ಲೆಯಲ್ಲಿರುವ ಸಿರುವಪುರಿ ಮುರುಗನ್​ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ವೈರಲ್​ ಆಗಿರುವ ಇದಕ್ಕೆ ಸಂಬಂಧಿಸಿ​ದ್ದಾಗಿದೆ.

ಪಂಚೆ ಮತ್ತು ಶರ್ಟ್​ ಧರಿಸಿ, ಹೂವು ಮತ್ತು ನಿಂಬೆಹಣ್ಣಿನ ಹಾರ ಹಾಕಿಕೊಂಡಿರುವ ಯೋಗಿ ಬಾಬು ಮೊದಲು ಅಭಿಮಾನಿಯೊಬ್ಬರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಇದಾದ ಬಳಿಕ ತಮ್ಮ ಎದುರಿಗೆ ಇರುವ ಪೂಜಾರಿಯೊಬ್ಬರ ಬಳಿ ತೆರಳಿ ಶೇಕ್​ ಹ್ಯಾಂಡ್​ ಮಾಡಲು ಕೈ ಮುಂದೆ ಚಾಚುತ್ತಾರೆ. ಆದರೆ, ಪೂಜಾರಿ ಶೇಕ್​ ಹ್ಯಾಂಡ್​ ಮಾಡದೇ ಅಲ್ಲಿಯೇ ನಿಂತು ಮಾತನಾಡಿಸಿ ಕಳುಹಿಸುತ್ತಾರೆ.