ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾಸ್
Empuraan Movie: 'ಎಂಪುರಾನ್'​​ ನೋಡಿದ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು ಗೊತ್ತಾ...?

ಮೋಹನ್‌ಲಾಲ್ ನಟನೆಯ ಸಿನಿಮಾಕ್ಕೆ ಸಿಕ್ಕಿತ್ತಾ ಸಿನಿ ಪ್ರಿಯರ ಮೆಚ್ಚುಗೆ...!

Empuraan Movie: ಎಂಪುರಾನ್ ಸಿನೆಮಾ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಮರ್ಶೆಗಳು ವ್ಯಕ್ತವಾಗುತ್ತಿದ್ದು, ಮೋಹನ್ ಲಾಲ್ ನಟನೆಯ ಈ ಸಿನೆಮಾವನ್ನು ಹಲವಾರು ಒಪ್ಪಿ ಅಪ್ಪಿಕೊಂಡರೆ, ಇನ್ನೂ ಕೆಲವರು ಚೂರು ತೀಕ್ಷ್ಯಣವಾಗಿಯೇ ಕ್ರಿಟಿಕ್ ಮಾಡಿದ್ದಾರೆ. ಹಾಗಾದ್ರೆ ಅಭಿಮಾನಿ ದೇವರುಗಳು L2: ಎಂಪುರಾನ್ ನೋಡಿ ಹೇಳಿದ್ದೇನು, ಬಾಕ್ಸ್ ಆಫೀಸ್ ಅಲ್ಲಿ ಇದರ ಅಬ್ಬರ ಹೇಗಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Marali Manasagide Movie: ನಾಗರಾಜ್ ಶಂಕರ್ ನಿರ್ದೇಶನದ ʼಮರಳಿ ಮನಸಾಗಿದೆʼ ಚಿತ್ರದ 2ನೇ ಹಾಡು ರಿಲೀಸ್‌

ನಾಗರಾಜ್ ಶಂಕರ್ ನಿರ್ದೇಶನದ ʼಮರಳಿ ಮನಸಾಗಿದೆʼ ಚಿತ್ರದ 2ನೇ ಹಾಡು ರಿಲೀಸ್‌

Marali Manasagide Movie: ನಾಗರಾಜ್ ಶಂಕರ್ ನಿರ್ದೇಶನದಲ್ಲಿ ಅರ್ಜುನ್ ವೇದಾಂತ್ ನಾಯಕರಾಗಿ ನಟಿಸಿರುವ ʼಮರಳಿ ಮನಸಾಗಿದೆʼ ಸಿನಿಮಾದ ʼಸುಳಿಮಿಂಚು ಕಣ್ಣ ಒಳಗೆʼ ಎಂಬ ಎರಡನೇ ಹಾಡು ಬಿಡುಗಡೆಯಾಗಿದೆ. ವಿನು‌ ಮನಸು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು A2 MUSIC ಮೂಲಕ ಬಿಡುಗಡೆಯಾಗಿದೆ. ಈ ಕುರಿತ ವಿವರ ಇಲ್ಲಿದೆ.

Bhavana Belagere Interview:'ರಾಜ್ ಲೀಲಾ ವಿನೋದ' ಬುಕ್ ಬಗ್ಗೆ ಶಿವಣ್ಣ ಏನಂದಿದ್ರು ಗೊತ್ತಾ...?

'ರಾಜ್ ಲೀಲಾ ವಿನೋದ' ಬಗ್ಗೆ ಶಿವಣ್ಣ ಹೇಳಿದ್ದೇನು?

Bhavana Belagere Interview: ವಿಶ್ವವಾಣಿ ಯೂಟ್ಯೂಬ್ ತಂಡ ನಡೆಸಿದ ಸಂದರ್ಶನದಲ್ಲಿ ರವಿ ಬೆಳೆಗೆರೆ ಜೀವನ - ಬರಹ ಇತ್ಯಾದಿ ಕುರಿತು ಮಾತಾನಾಡಿದ್ದ ಭಾವನಾ ತಂದೆ ಬರೆದಿದ್ದ ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆಯೂ ಮಾತಾನಾಡಿದ್ದು, ಪುಸ್ತಕ ಬಿಡುಗಡೆಗೊಂಡಾಗ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಷಯವನ್ನು ಹೇಳಿದ್ದಾರೆ.

Actor Mohanlal: ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ಮೋಹನ್‌ಲಾಲ್‌ ಪ್ರಾರ್ಥನೆ; ಭಾರೀ ಆಕ್ರೋಶ

ಶಬರಿಮಲೆಯಲ್ಲಿ ಮಮ್ಮುಟ್ಟಿಗಾಗಿ ಮೋಹನ್‌ಲಾಲ್‌ ಪ್ರಾರ್ಥನೆ-ಭಾರೀ ಆಕ್ರೋಶ

Actor Mohanlal: ಕಳೆದ ಕೆಲವು ದಿನಗಳ ಹಿಂದೆ ನಟ ಮಮ್ಮುಟ್ಟಿ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಮೋಹನ್‌ ಲಾಲ್‌ ಮಮ್ಮುಟ್ಟಿ ಅವರಿಗಾಗಿ ಶಬರಿಮಲೆಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದು, ಮಮ್ಮುಟ್ಟಿ ಮುಸ್ಲಿಂ ಆಗಿದ್ದು, ಅವರಿಗಾಗಿ ಮೋಹನ್‌ಲಾಲ್‌ ಪ್ರಾರ್ಥನೆ ಸಲ್ಲಿಸಿದ್ದರೆ ಅದು ತಪ್ಪು. ತಕ್ಷಣ ಕ್ಷಮೆಯಾಚಿಸಬೇಕೆಂದು ಅನೇಕರು ಆಗ್ರಹಿಸಿದ್ದಾರೆ.

Thayi Kastur Gandhi Movie: ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ ಕಸ್ತೂರ್ ಗಾಂಧಿʼ ಚಿತ್ರ ಮಾ.28ರಂದು ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ

`ತಾಯಿ ಕಸ್ತೂರ್ ಗಾಂಧಿʼ ಚಿತ್ರ ಮಾ.28ರಂದು OTTಯಲ್ಲಿ ರಿಲೀಸ್‌

Thayi Kastur Gandhi Movie: ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ಜನಮಿತ್ರ ಮೂವೀಸ್ ನಿರ್ಮಾಣದ `ತಾಯಿ ಕಸ್ತೂರ್ ಗಾಂಧಿʼ ಕನ್ನಡ ಚಿತ್ರವು ಇದೇ ಮಾರ್ಚ್ 28ರಂದು ಅಮೇಜಾನ್ ಪ್ರೈಮ್ ಓ.ಟಿ.ಟಿ.ಯಲ್ಲಿ ಬಿಡುಗಡೆಯಾಗಲಿದೆ. ಬರಗೂರರ ಕಾದಂಬರಿಯನ್ನು ಆಧರಿಸಿ ಈ ಚಿತ್ರವು ನಿರ್ಮಾಣಗೊಂಡಿದೆ. ಈ ಕುರಿತ ವಿವರ ಇಲ್ಲಿದೆ.

Shihan Hussaini: ಜಯಲಲಿತಾ ಅಧಿಕಾರಕ್ಕೆ ಬರಲೆಂದು 2015ರಲ್ಲಿ ಶಿಲುಬೆಗೇರಿ ಸುದ್ದಿಯಾಗಿದ್ದ ನಟ ಇನ್ನಿಲ್ಲ

ಜಯಲಲಿತಾಗಾಗಿ ಶಿಲುಬೆಗೇರಿ ಸುದ್ದಿಯಾಗಿದ್ದ ನಟ ಇನ್ನಿಲ್ಲ

Shihan Hussaini:2015ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಕೈ-ಕಾಲುಗಳಿಗೆ ಮೊಳೆ ಹೊಡೆದುಕೊಂಡು ಶಿಲುಬೆಗೇರಿ ಭಾರೀ ಸುದ್ದಿಯಾಗಿದ್ದ ನಟ ಶಿಹಾನ್‌ ಹುಸೈನಿ ವಿಧಿವಶರಾಗಿದ್ದಾರೆ. ಅವರಿಗೆ 60ವರ್ಷ ವಯಸ್ಸಾಗಿದ್ದು, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂದು ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ.

Manada Kadalu Movie: ಯೋಗರಾಜ್ ಭಟ್ ನಿರ್ದೇಶನದ ʼಮನದ ಕಡಲುʼ ಚಿತ್ರದ ಟ್ರೈಲರ್‌ ಬಿಡುಗಡೆಗೊಳಿಸಿದ ರಾಕಿಂಗ್ ಸ್ಟಾರ್ ಯಶ್

ʼಮನದ ಕಡಲುʼ ಚಿತ್ರದ ಟ್ರೈಲರ್‌ ಬಿಡುಗಡೆಗೊಳಿಸಿದ ರಾಕಿಂಗ್ ಸ್ಟಾರ್ ಯಶ್

Manada Kadalu Movie: ಈ ಕೃಷ್ಣಪ್ಪ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ʼಮನದ ಕಡಲುʼ ಚಿತ್ರದ ಟ್ರೈಲರ್‌ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಈ ಚಿತ್ರವು ಮಾರ್ಚ್ 28 ರಂದು ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

META: 20ನೇ ಆವೃತ್ತಿಯ ಮಹೀಂದ್ರ ಥಿಯೇಟರ್ ಅವಾರ್ಡ್ಸ್ ಪ್ರದಾನ; ರಂಜನಿ ಘೋಷ್ - ಸುಮನ್ ಸಾಹಾ ಅತ್ಯುತ್ತಮ ನಟ, ನಟಿ

20ನೇ ಆವೃತ್ತಿಯ ಮಹೀಂದ್ರ ಥಿಯೇಟರ್ ಅವಾರ್ಡ್ಸ್ ಪ್ರದಾನ

Mahindra Theatre Awards: ಮಹೀಂದ್ರ ಗ್ರೂಪ್‌ನಿಂದ ಸ್ಥಾಪನೆಗೊಂಡಿರುವ ಮತ್ತು ಟೀಮ್‌ವರ್ಕ್ ಆರ್ಟ್ಸ್‌ನಿಂದ ಆಯೋಜಿಸಲಾಗಿದ್ದ ಈ ಉತ್ಸವಲ್ಲಿ ರಂಗಭೂಮಿ ಕಲೆಯುನ್ನು ಗೌರವಿಸಲಾಯಿತು. ಈ ಉತ್ಸವದಲ್ಲಿ ದೇಶದ ಹಲವಾರು ಅತ್ಯುತ್ತಮ ನಾಟಕಗಳು ಪ್ರದರ್ಶಿಸಲ್ಪಟ್ಟವು, ಇದರಲ್ಲಿ ಬಂಗಾಳಿ, ಹಿಂದಿ, ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳ ನಾಟಕಗಳು ಸೇರಿದ್ದವು. ಕಮಾನಿ ಆಡಿಟೋರಿಯಂ ಮತ್ತು ಶ್ರೀ ರಾಮ್ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ 13 ಸ್ಪರ್ಧಾತ್ಮಕ ವಿಭಾಗಗಳಲ್ಲಿ ಪ್ರಶಸ್ತಿ ವಿಜೇತರನ್ನು ಪ್ರಕಟಿಸಲಾಯಿತು.

N S Sridharamurthy Column: ನಮ್ಮ ಚಾಮಯ್ಯ ಮೇಷ್ಟ್ರು

ನಮ್ಮ ಚಾಮಯ್ಯ ಮೇಷ್ಟ್ರು

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಿಗೆ ಘನತೆ ತಂದು ಕೊಟ್ಟು, ಹಿರಿತನಕ್ಕೆ ಭಾಷ್ಯ ಬರೆದು ‘ನಾಗರ ಹಾವು’ ಚಿತ್ರದ ಚಾಮಯ್ಯ ಮೇಷ್ಟ್ರ ಪಾತ್ರದ ಮೂಲಕ ಕನ್ನಡಿಗರ ಮನದಲ್ಲಿ ಸದಾ ಹಸಿರಾಗಿರುವವರು ಕೆ.ಎಸ್.ಅಶ್ವಥ್. ಪೋಷಕ ನಟ ಪಾತ್ರಗಳಿಗೆ ಅವರು ಜೀವತುಂಬುವ ಪರಿ ಯಾವ ರೀತಿ ಇರುತ್ತಿತ್ತೆಂದರೆ, ಅವರ ಅಭಿನಯದ ಎದುರು ಕೆಲವು ಬಾರಿ ಮುಖ್ಯ ನಟನೇ ಸಪ್ಪೆ ಎನಿಸುತ್ತಿದ್ದರು! ಜತೆಗೆ, ಕೆ.ಎಸ್. ಅಶ್ವಥ್ ಅವರು ಪೋಷಕನಟ ನಾಗಿ ಅಭಿನಯಿಸಿದರು, ಎಂದರೆ, ನಾಯಕ ನಟನ ವರ್ಚಸ್ಸು ಹೆಚ್ಚು ತ್ತಿತ್ತು. ಹಲವು ಚಲನಚಿತ್ರಗಳ ಯಶಸ್ಸಿಗೆ ಪೋಷಕನಟರಾಗಿ ಕೆ.ಎಸ್.ಅಶ್ವಥ್ ಅವರ ಮನೋಜ್ಞ ಅಭಿನಯದ ಕೊಡುಗೆ ಅಪಾರ.

Mylapura Movie: ʼಮೈಲಾಪುರʼ ಚಿತ್ರತಂಡದಿಂದ ಶಂಕರ್ ನಾಗ್, ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ರಿಲೀಸ್‌

ಶಂಕರ್ ನಾಗ್, ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ರಿಲೀಸ್‌

Mylapura Movie: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಾದ ಕರಾಟೆ ಕಿಂಗ್ ಶಂಕರ್ ನಾಗ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ವಿಶೇಷ ಪೋಸ್ಟರ್ ಇತ್ತೀಚೆಗೆ ನಡೆದ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ʼಮೈಲಾಪುರʼ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರದ ಟೀಸರ್ ರಿಲೀಸ್‌ ಡೇಟ್‌ ಅನೌನ್ಸ್‌

ಬಹು ನಿರೀಕ್ಷಿತ ʼ45ʼ ಚಿತ್ರದ ಟೀಸರ್ ರಿಲೀಸ್‌ ಡೇಟ್‌ ಅನೌನ್ಸ್‌

45 Movie: ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ʼ45ʼ ಚಿತ್ರದ ಮಾರ್ಚ್ 30 ರಂದು ವಸಂತ ಋತುವಿನ ಮೊದಲ ದಿನ, ಯುಗಾದಿ ಹಬ್ಬದ ಶುಭದಿನದಂದು ಅನಾವರಣವಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಹುತಾತ್ಮ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಕುರಿತು ʼಬಂಡೆ ಸಾಹೇಬ್ʼ ಚಿತ್ರ

ನೈಜ ಘಟನೆ ಆಧಾರಿತ ಚಿತ್ರ ʼಬಂಡೆ ಸಾಹೇಬ್ʼ

Bande Saheb Movie: ಹುತಾತ್ಮ ಪೊಲೀಸ್ ಅಧಿಕಾರಿ (ಪಿ.ಎಸ್.ಐ) ಮಲ್ಲಿಕಾರ್ಜುನ ಬಂಡೆ ಅವರ ಕುರಿತಾದ ಚಿತ್ರವೊಂದು ನಿರ್ಮಾಣವಾಗಿದೆ. ನೈಜಘಟನೆ ಆಧಾರಿತ ಈ ಚಿತ್ರಕ್ಕೆ ʼಬಂಡೆ ಸಾಹೇಬ್ʼ ಎಂದು ಹೆಸರಿಡಲಾಗಿದೆ. ಚಿತ್ರದ ನಾಯಕನಾಗಿ ಸಂತೋಷ್ ರಾಮ್ ನಟಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

BAD Movie: ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರದ ಟೀಸರ್ ಔಟ್‌

ನಕುಲ್ ಗೌಡ - ಮಾನ್ವಿತ ಹರೀಶ್ ಅಭಿನಯದ ‘BAD’ ಚಿತ್ರದ ಟೀಸರ್ ಔಟ್‌

BAD Movie: ಪಿ.ಸಿ. ಶೇಖರ್ ನಿರ್ದೇಶನದ ಹಾಗೂ ʼಪ್ರೀತಿಯ ರಾಯಭಾರಿʼ ಖ್ಯಾತಿಯ ನಕುಲ್ ಗೌಡ ನಾಯಕನಾಗಿ ನಟಿಸಿರುವ ʼBADʼ ಚಿತ್ರದ ಟೀಸರ್ ಇತ್ತೀಚೆಗೆ ಲುಲು ಮಾಲ್‌ನಲ್ಲಿ ಅದ್ದೂರಿಯಾಗಿ ಅನಾವರಣವಾಯಿತು. ಈ ಕುರಿತ ವಿವರ ಇಲ್ಲಿದೆ.

S\O Muthanna Movie: ಪ್ರಣಂ ದೇವರಾಜ್ ಅಭಿನಯದ ʼS\O ಮುತ್ತಣ್ಣʼ ಚಿತ್ರದ ಹಾಡಿಗೆ ಗಾಯಕಿ ದೀಪ್ತಿ ಸುರೇಶ್ ಧ್ವನಿ

ʼS\O ಮುತ್ತಣ್ಣʼ ಚಿತ್ರದ ಹಾಡಿಗೆ ಗಾಯಕಿ ದೀಪ್ತಿ ಸುರೇಶ್ ಧ್ವನಿ

S\O Muthanna Movie: ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ ʼS\O ಮುತ್ತಣ್ಣʼ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ʼಕರೆದರೆ ಹಾಗೆಲಾ ಬರಲಾರೆ ನಾನುʼ ಎಂಬ ಹಾಡನ್ನು ತಮಿಳು ಹಾಗೂ ಹಿಂದಿ ಚಿತ್ರಗಳ ಪ್ರಸಿದ್ದ ಗೀತೆಗಳನ್ನು ಹಾಡಿ ಜನಪ್ರಿಯರಾಗಿರುವ ಗಾಯಕಿ ದೀಪ್ತಿ ಸುರೇಶ್ ಹಾಡಿದ್ದಾರೆ. ಈ ಹಾಡನ್ನು ಹಾಡುವ ಮೂಲಕ ದೀಪ್ತಿ ಸುರೇಶ್ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Disha Salian:  ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ತಳುಕು ಹಾಕಿಕೊಂಡ ಆದಿತ್ಯ ಠಾಕ್ರೆ ಹೆಸರು; ಮರು ತನಿಖೆಗೆ ಆಗ್ರಹ

ಆದಿತ್ಯ ಠಾಕ್ರೆಗೂ ಮೃತ ದಿಶಾ ಸಾಲಿಯಾನ್‌ಗೂ ಏನು ಸಂಬಂಧ?

Disha Salian: ದಿಶಾ ಸಾಲಿಯಾನ್ ಅವರ ತಂದೆ ತನ್ನ ಮಗಳ ಸಾವಿನ ಬಗ್ಗೆ ಮತ್ತೆ ಮರು ತನಿಖೆ ಮಾಡುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಹೆಸರು ಕೇಳಿ ಬಂದಿದೆ.

Chi Saujanya Movie: ‘ಚಿ: ಸೌಜನ್ಯ’ ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಚ

‘ಚಿ: ಸೌಜನ್ಯ’ ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಚ

Chi Saujanya Movie: ಕನ್ನಡದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಈಗ ನಿರ್ದೇಶಕಿಯಾಗುತ್ತಿದ್ದಾರೆ. ಹರ್ಷಿಕಾ ಪೂಣಚ್ಛ ಅವರು ನಿರ್ದೇಶಿಸುತ್ತಿರುವ, ಕಂಸಾಳೆ ಫಿಲಂಸ್ ಹಾಗೂ ಭುವನ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಮಧು ಮರಿಸ್ವಾಮಿ ಮತ್ತು ಭುವನ್ ಪೊನ್ನಣ್ಣ ನಿರ್ಮಿಸುತ್ತಿರುವ, ಬಹುಭಾಷಾ ನಟ ಕಿಶೋರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ʼಚಿ: ಸೌಜನ್ಯʼ ಎಂದು ಹೆಸರಿಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

L2E Empuraan Movie: ಕರ್ನಾಟಕದಲ್ಲಿ ಮಲಯಾಳಂನ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

ಕರ್ನಾಟಕದಲ್ಲಿ ‘L2E- ಎಂಪುರಾನ್’ ಚಿತ್ರ ವಿತರಿಸಲಿದೆ ಹೊಂಬಾಳೆ ಫಿಲಂಸ್

L2E Empuraan Movie: ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಮಲಯಾಳಂನ ಬಹುನಿರೀಕ್ಷಿತ ʼL2E: ಎಂಪುರಾನ್ʼ ಚಿತ್ರವನ್ನು ಕರ್ನಾಟಕದಾದ್ಯಂತ ವಿತರಿಸುವುದಾಗಿ ಹೊಂಬಾಳೆ ಫಿಲಂಸ್‌ ಘೋಷಿಸಿದೆ. ʼL2E: ಎಂಪುರನ್ʼ ಸಿನಿಮಾವನ್ನು ಕರ್ನಾಟಕದಾದ್ಯಂತ ಐದು ಭಾಷೆಗಳಲ್ಲಿ ಹೊಂಬಾಳೆ ಫಿಲಂಸ್‌ ಬಿಡುಗಡೆ ಮಾಡಲಿದೆ. ಈ ಕುರಿತ ವಿವರ ಇಲ್ಲಿದೆ.

Hina Khan: ಕ್ಯಾನ್ಸರ್‌ ಟ್ರೀಟ್‌ಮೆಂಟ್‌ ಮಧ್ಯೆಯೇ ಮೆಕ್ಕಾ ಯಾತ್ರೆ ಕೈಗೊಂಡ ಹೀನಾ ಖಾನ್‌- ವಿಡಿಯೊ ಇಲ್ಲಿದೆ

ನಟಿ ಹೀನಾ ಖಾನ್ ಮೆಕ್ಕಾ ಯಾತ್ರೆ- ಪೋಸ್ಟ್ ವೈರಲ್

Hina Khan: ಕ್ಯಾನ್ಸರ್‌ನಿಂದ ಬಳಲುತ್ತಿರುವ ನಡಿ ಹೀನಾ ಖಾನ್‌ ತಮ್ಮ ಚಿಕಿತ್ಸೆ ನಡುವೆಯೇ ಮೆಕ್ಕಾ ಯಾತ್ರೆಗೆ ತೆರಳಿದ್ದು, ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆದ ಫೋಟೋದಲ್ಲಿ ಹಿನಾಖಾನ್ ಮೆಕ್ಕಾದ ಮುಂಭಾಗದಲ್ಲಿ ಹಸಿರು ಬಣ್ಣದ ಬುರ್ಕಾ ಧರಿಸಿದ್ದು ಸನ್ ಗ್ಲಾಸ್ ತೊಟ್ಟು ಪೋಸ್ ನೀಡಿದ್ದು, ಅಭಿಮಾನಿಗಳ ಜೊತೆಯು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

Actor Adi Irani: ಸಿನಿಮಾ ಸಕ್ಸಸ್‌ ಆದರೂ ಮಗುವಿನ ಹಾಲು ಖರೀದಿಸಲು 5ರೂ. ಇರ್ಲಿಲ್ಲ.... ಶಾರುಖ್ ಖಾನ್ ಜೊತೆ ನಟಿಸಿದ್ದ ಖ್ಯಾತ ನಟ ಹೀಗಂದಿದ್ದೇಕೆ?

ಹಾಲು ಖರೀದಿಸಲು 5ರೂ. ಇರ್ಲಿಲ್ಲ; ಖ್ಯಾತ ನಟ ಅಳಲು

ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಅಭಿನಯದ ಬಾಜಿಗರ್ ಸಿನೆಮಾದಲ್ಲಿ ನಟಿಸಿದ್ದ ಆದಿ ಇರಾನಿ ತಾವು ಎದುರಿಸಿದ ಸಂಕಷ್ಟಗಳ ಬಗ್ಗೆ ಸಂದರ್ಶವೊಂದರಲ್ಲಿ ಹೇಳಿಕೊಂಡಿದ್ದಾರೆ. ಬಾಜಿಗರ್ ಮತ್ತು ಅನಾರಿ ಚಿತ್ರಗಳ ಬಳಿಕವೂ ಇವರ ವೃತ್ತಿಜೀವನವು ನಿರೀಕ್ಷೆಯಂತೆ ಸಾಗಲಿಲ್ಲ ಎಂದಿದ್ದಾರೆ. 1995ರಲ್ಲಿ ತನ್ನ ಮೊದಲ ಮಗಳು ಜನಿಸಿದ್ದು ಆಗ ಹಾಲಿನ ಬೆಲೆ 5ರೂಪಾಯಿ ಇತ್ತು. ಕೆಲವೊಮ್ಮೆ ಒಂದು ಪ್ಯಾಕ್ ಹಾಲು ಖರೀದಿ ಮಾಡಲು ನನ್ನಲ್ಲಿ ಹಣ ಇರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

Puneeth Rajkumar: ಪುನೀತ್‌ @50: ಕನ್ನಡದ ಪವರ್‌ ಸ್ಟಾರ್‌ ನಟಿಸಿದ ಟಾಪ್‌ 10 ಮೂವಿಗಳು ಯಾವುದು ಗೊತ್ತಾ?

ಅಪ್ಪು ನಟಿಸಿದ ಅತ್ಯುತ್ತಮ ಸಿನೆಮಾಗಳಿವು.

ಮಾರ್ಚ್ 17, ಕನ್ನಡದ ಸೂಪರ್‌ಸ್ಟಾರ್ ಆಗಿರುವ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನ. ಅವರು 2021ರಲ್ಲಿ ಹಠಾತ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಅವರ ಅಕಾಲಿಕ ಮರಣವು ರಾಷ್ಟ್ರದಾದ್ಯಂತ ಆಘಾತದ ಅಲೆಗಳನ್ನು ಎಬ್ಬಿಸಿತ್ತು.. ಅವರ ಜನ್ಮ ದಿನದಂದು, ಅವರು ನಟಿಸಿದ ಟಾಪ್‌ 10 ಮೂವಿಗಳ ಬಗ್ಗೆ ಸಣ್ಣ ಪರಿಚಯ ಇಲ್ಲಿದೆ ನೋಡಿ.

Puneeth Rajkumar: ಪುನೀತ್ ರಾಜ್‌ಕುಮಾರ್ ಅವರನ್ನು 'ಕರ್ನಾಟಕದ ಪವರ್ ಸ್ಟಾರ್' ಎಂದು ಏಕೆ ಕರೆಯುತ್ತಾರೆ ಗೊತ್ತಾ?

ಪುನೀತ್‌ಗೆ 'ಪವರ್ ಸ್ಟಾರ್' ಬಿರುದು ಕೊಟ್ಟಿದ್ದು ಯಾರು ಗೊತ್ತಾ?

ಪುನೀತ್‌ ನಮ್ಮನಗಲಿ ಮೂರೂವರೆ ವರ್ಷಗಳು ಕಳೆದರೂ, ಅವರ ಸಿನಿಮಾಗಳು(cinema) ಇಂದಿಗೂ ಕನ್ನಡಿಗರ ಮನದಲ್ಲಿ ಹಚ್ಚಹಸುರಾಗಿ ಉಳಿದಿವೆ. ಅವರ ನಟನೆ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿಯೂ ಅವರು ತೋರಿದ ಸರಳತೆ, ಪರೋಪಕಾರ, ಸಾಮಾಜಿಕ ಕಳಕಳಿಯಿಂದಾಗಿ ಅಭಿಮಾನಿಗಳು ಅವರನ್ನು ʼಪವರ್‌ ಸ್ಟಾರ್‌ʼ(Power Star) ಎಂದು ಕರೆಯುತ್ತಾರೆ... ಹಾಗಾದ್ರೆ ಅಪ್ಪುವನ್ನು ಯಾಕೆ ಪವರ್ ಸ್ಟಾರ್ ಅಂತ ಕರೆಯುವುದೇಗೆ ಯಾಕೆ...? ಇಲ್ಲಿದೆ ಉತ್ತರ

Puneeth Rajkumar: ನಗುವಿನ ಒಡೆಯ ಅಪ್ಪು ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು

ರಾಜಕುಮಾರನ ಬಗ್ಗೆ ನೀವರಿಯದ ಇಂಟ್ರೆಸ್ಟಿಂಗ್ ಸಂಗತಿಗಳಿವು

ಇಂದು ಪುನೀತ್ ಜನ್ಮದಿನ. ಅವರ ಅನುಪಸ್ಥಿತಿಯ ನಡುವೆಯೂ ಹಲವು ಸಾಮಾಜಿಕ ಕೆಲಸಗಳ ಮೂಲಕ ಅಭಿಮಾನಿಗಳು ನೆಚ್ಚಿನ ನಟನ ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಪುನೀತ್ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಅವರ ಬಗೆಗಿನ ಇನ್ನಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿವೆ ಓದಿ.

Puneeth Rajkumar: 10ನೇ ವಯಸ್ಸಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ʼಯುವರತ್ನʼ ಪುನೀತ್ ಹುಟ್ಟುಹಬ್ಬ ಇಂದು

ಸ್ಯಾಂಡಲ್‌ವುಡ್‌ ʼಯುವರತ್ನʼ ಪುನೀತ್ ಹುಟ್ಟುಹಬ್ಬ ಇಂದು

Puneeth Rajkumar: 10ನೇ ವಯಸ್ಸಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬ ಇಂದು. ಆದರೆ ಅವರು ಇಂದು ನಮ್ಮೊಂದಿಗಿಲ್ಲ. ಅವರು ಇನ್ನಿಲ್ಲವಾಗಿ ನಾಲ್ಕು ವರ್ಷಾನೇ ಆಗಿರಬಹುದು. ಆದರೆ ಕನ್ನಡಿಗರು ಅವರನ್ನು ನೆನೆಯದೆ ಇರೋ ದಿನಾನೇ ಇಲ್ಲ. ಕನ್ನಡಿಗರ ಮನೆ ಮಗನಾಗಿದ್ದ ಅವರ ದಿಢೀರ್‌ ಅಗಲಿಕೆ ಇನ್ನೂ ಅರಗಿಸಿಕೊಳ್ಳಲು ಆಗುತ್ತಲೇ ಇಲ್ಲ.

David Warner: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವಾರ್ನರ್‌: ಚಿತ್ರದ ಪೋಸ್ಟರ್ ಬಿಡುಗಡೆ

ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವಾರ್ನರ್‌: ಚಿತ್ರದ ಪೋಸ್ಟರ್ ಬಿಡುಗಡೆ

ಎಕ್ಸ್‌ನಲ್ಲಿ ಸಂತಸ ವ್ಯಕ್ತಪಡಿಸಿರುವ ವಾರ್ನರ್‌, 'ಚಿತ್ರದಲ್ಲಿ ನಟಿಸಿರುವುದು ಖುಷಿ ಕೊಟ್ಟಿದೆ' ಎಂದು ಹೇಳಿದ್ದಾರೆ. ವೆಂಕಿ ಕುಡುಮುಲ ನಿರ್ದೇಶನದ ‘ರಾಬಿನ್‌ಹುಡ್‌’ ಚಿತ್ರವನ್ನು ‘ಮೈತ್ರಿ ಮೂವಿ ಮೇಕರ್ಸ್‌’ ನಿರ್ಮಿಸುತ್ತಿದೆ. ನಾಯಕನ ಪಾತ್ರದಲ್ಲಿ ನಿತಿನ್‌ ಮತ್ತು ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ನಟಿಸುತ್ತಿದ್ದಾರೆ. ಜಿ.ವಿ. ಪ್ರಕಾಶ್ ಕುಮಾರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.