Friday, 18th June 2021

ಕರ್ಪ್ಯೂ ವಿಸ್ತರಣೆ ಬಗ್ಗೆ ಏ.20ರಂದು ತೀರ್ಮಾನ: ಸಿಎಂ ಬಿಎಸ್’ವೈ

ಬೆಂಗಳೂರು: ಕರೋನಾ ಮಹಾಮಾರಿ ಬೆಂಗಳೂರು ಸೇರಿ ಹಲವೆಡೆ ಮಿತಿ ಮೀರಿದೆ. ಈ ಬಗ್ಗೆ ಸಮಗ್ರ ಚರ್ಚೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಿಧಿಸಿರುವ ನೈಟ್ ಕರ್ಪ್ಯೂ ಮುಂದುವರೆಯಲಿದೆ. ಬೇರೆ ಜಿಲ್ಲೆಗಳಿಗೆ ಕರ್ಪ್ಯೂ ವಿಸ್ತರಿಸುವ ಬಗ್ಗೆ ಇದೇ ೨೦ ರಂದು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಸಭೆ ಬಳಿಕ ತಿಳಿಸಿದರು.

ಕರ್ನಾಟಕವನ್ನು ಇತರೆ ರಾಜ್ಯಗಳಿಗೆ ಹೋಲಿಸುವುದು ಸರಿಯಲ್ಲ. ರಾಜ್ಯದ 8 ಜಿಲ್ಲೆಗಳಲ್ಲಿ ನೈಟ್ ಕರ್ಪ್ಯೂ ಇದೇ 20 ರವರೆಗೆ ಮುಂದುವರೆಯಲಿದೆ. ಏ.೨೦ ರಂದು ಪುನಃ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ತಜ್ಞರ ಸಮಿತಿ ನೀಡಿರುವ ವರದಿ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗಿದೆ.

Leave a Reply

Your email address will not be published. Required fields are marked *