Friday, 2nd December 2022

ರಾಜ್ಯದಲ್ಲಿ ನೈಟ್ ಕರ್ಫ್ಯು: ನಾಳೆ ಬೊಮ್ಮಾಯಿ ನೇತೃತ್ವದಲ್ಲಿ ಸಭೆ

Bommai

ವಿಜಯಪುರ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕರೋನಾ ಸೋಂಕು ಹಾಗೂ ಓಮ್ರಿಕ್ರಾನ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಈ ಬಗ್ಗೆ ಮಾಹಿತಿ ನೀಡಿದರು. ಹೊಸ ವರ್ಷಾಚರಣೆ ಸೇರಿದಂತೆ ಕರೋನ ಹಾಗೂ ಒಮಿಕ್ರಾನ್‌ ಸೋಂಕಿಗೆ ಸಂಬಂಧಪಟ್ಟಂತೆ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಲಾಗುವುದು, ಇದೇ ವೇಳೆಯಲ್ಲಿ, ಸಭೆಯಲ್ಲಿ ನೈಟ್ ಕರ್ಫ್ಯು ಬಗ್ಗೆಯೂ ನಾಳೆ ಚರ್ಚೆ ಮಾಡಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು. ಇನ್ನೂ ಒಮಿಕ್ರಾನ್ ಸೋಂಕು ಮಹಾರಾಷ್ಟ್ರ, ಕೇರಳದಿಂದ ಬರುವ ಸಾಧ್ಯ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಗಡಿ ಭಾಗಗಳಲ್ಲಿ ಎಲ್ಲಾ ರೀತಿಯಲ್ಲಿ ಕಟ್ಟೆಚ್ಚರ ತೆಗೆದುಕೊಳ್ಳಲಾಗು ವುದು ಅಂಥ ಹೇಳಿದರು.

ಎಸ್ ಸಿ, ಎಸ್ ಟಿ ಸಮುದಾಯದವರು ಮತಾಂತರ ಆದರೆ, ಮತಾಂತರದ ಬಳಿಕ ಸರ್ಕಾರ ನೀಡುತ್ತಿರುವ ಸವಲತ್ತು ಗಳನ್ನ ನಿಲ್ಲಿಸಲಾಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಮತಾಂತರ ಆದವರು ಎಸ್ ಸಿ, ಎಸ್ ಟಿ ಆಗಿದ್ದರೇ ಮತಾಂತರ ಬಳಿಕ ಸರ್ಕಾರ ನೀಡುತ್ತಿರುವ ಸವಲತ್ತು ಗಳನ್ನ ನಿಲ್ಲಿಸಲಾಗುತ್ತದೆ. ಮತಾಂತರ ಆದವರ ಮಾಹಿತಿ ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಾಗಬೇಕು. ಮಕ್ಕಳ ಬರ್ತ್ ಸರ್ಟಿಫಿಕೆಟ್, ಶಾಲಾ ದಾಖಲಾತಿಗಳಲ್ಲಿ ಮತಾಂತರವಾಗಿರುವ ಬಗ್ಗೆ ಮಾಹಿತಿ ದಾಖಲು ಮಾಡಬೇಕು ಎಂದು ತಿಳಿಸಿದ್ದಾರೆ.

ಸ್ವಯಂಪ್ರೇರಿತರಾಗಿ ಮತಾಂತರವಾಗುವುದಕ್ಕೆ ಅಡ್ಡಿಯಿಲ್ಲ. ವಿಧಾನ ಪರಿಷತ್​ನಲ್ಲಿಯೂ ವಿಧೇಯಕ ಮಂಡಿಸುತ್ತೇವೆ. ಜನವರಿಯಲ್ಲಿ ವಿಧೇಯಕ ಮಂಡಿಸುತ್ತೇವೆ ಎಂದು ಹೇಳಿದ್ದಾರೆ.