Friday, 9th December 2022

ಹೆಜ್ಜೇನು ದಾಳಿ: ಕಾಫಿ ಮಂಡಳಿ ಅಧ್ಯಕ್ಷ ಸಾವು

ಚಿಕ್ಕಮಗಳೂರು: ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭ ಹೆಜ್ಜೇನು ದಾಳಿ ನಡೆಸಿದ ಕಾರಣ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್ ಬೋಜೇಗೌಡ (74) ಮೃತಪಟ್ಟಿದ್ದಾರೆ.

ಶನಿವಾರ ಚಿಕ್ಕಮಗಳೂರು ತಾಲೂಕಿನ ಕೃಷ್ಣಗಿರಿ ಎಸ್ಟೇಟ್ ಗೆ ತಮ್ಮ ಕಾಫಿ ತೋಟಕ್ಕೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್ ಬೋಜೇ ಗೌಡ ತೆರಳಿದ್ದರು. ತೋಟದಲ್ಲಿ ಸುತ್ತಾಡುತ್ತಿದ್ದ ಸಂದರ್ಭ ದಿಢೀರ್ ಸಾವಿರಾರು ಹೆಜ್ಜೇನುಗಳು ದಾಳಿ ಮಾಡಿವೆ.

ದಾಳಿ ನಡೆಸಿ ಕಚ್ಚಿದ ಪರಿಣಾಮ, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುದಕ್ಕಾಗಿ ಕಾರಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವರದಿಯಾಗಿದೆ.