Wednesday, 11th December 2024

Money Tips: ಆಧಾರ್ ಸಹಾಯದಿಂದ ಇ-ಪ್ಯಾನ್‌ ಕಾರ್ಡ್ ಡೌನ್‌ಲೋಡ್ ಮಾಡಬೇಕೆ? ಈ ವಿಧಾನ ಫಾಲೋ ಮಾಡಿ

Money Tips

ಬೆಂಗಳೂರು: ದೇಶದಲ್ಲಿ ಆಧಾರ್‌ನಷ್ಟೇ ಇನ್ನೊಂದು ಪ್ರಮುಖ ಗುರುತಿನ ಚೀಟಿ ಎಂದರೆ ಅದು ಪ್ಯಾನ್‌ (PAN) ಕಾರ್ಡ್‌. ಪರ್ಮನೆಂಟ್‌ ಅಕೌಂಟ್‌ ನಂಬರ್‌ (Permanent Account Number) ಅನ್ನು ಕಡ್ಡಾಯಗೊಳಿಸದಿದ್ದರೂ ಆರ್ಥಿಕ ವ್ಯವಹಾರಗಳಿಗೆ ಬೇಕೇ ಬೇಕು. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಬ್ಯಾಂಕ್ ಖಾತೆ (Bank account), ಡಿಮ್ಯಾಟ್ ಖಾತೆ (Demat account) ತೆರೆಯುವಾಗಲೂ ಪ್ಯಾನ್ ಕಾರ್ಡ್ ಪ್ರತಿ ನೀಡುವುದು ಕಡ್ಡಾಯ. ಅಷ್ಟೇ ಏಕೆ ಒಂದು ವೇಳೆ ನೀವು ಬ್ಯಾಂಕಿನಲ್ಲಿ 50,000 ರೂ.ಗಿಂತ ಅಧಿಕ ಹಣ ಜಮೆ ಮಾಡಬೇಕಾದರೂ ಪ್ಯಾನ್ ನಂಬರ್‌ ನಮೂದಿಸಲೇ ಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ನೀಡುವ ಈ 10 ಅಂಕಿಗಳ ವಿಶಿಷ್ಟ ಗುರುತಿನ ಚೀಟಿ ಆರ್ಥಿಕ ವ್ಯವಹಾರವನ್ನು ಪತ್ತೆಹಚ್ಚುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ಭೌತಿಕ ಪ್ಯಾನ್ ಕಾರ್ಡ್ ಮುದ್ರಣ, ಅಂಚೆ ಮೂಲಕ ರವಾನೆ ಮತ್ತು ಹಸ್ತಚಾಲಿತ ನಿರ್ವಹಣೆ ಹೀಗೆ ಹಲವು ಹಂತಗಳಲ್ಲಿ ನಡೆಯುವುದರಿಂದ ನಾವು ಪಡೆದುಕೊಳ್ಳಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದಾಗ್ಯೂ ಈ ಸಮಸ್ಯೆ ನಿವಾರಣೆಗೆ ಇ-ಪ್ಯಾನ್‌ (e-PAN) ಪರಿಚಯಿಸಲಾಗಿದೆ. ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ (Money Tips).

ಇ-ಪ್ಯಾನ್ ಡೌನ್‌ಲೋಡ್‌ ಮಾಡಿಟ್ಟುಕೊಂಡರೆ ಯಾವಾಗ ಬೇಕಾದರೂ ಅದನ್ನು ಸಂಬಂಧಪಟ್ಟವರಿಗೆ ಸಲ್ಲಿಸಬಹುದು. ಇದರಿಂದ ಭೌತಿಕ ಪ್ಯಾನ್ ಕಾರ್ಡ್ ಅನ್ನು ಸದಾ ಕೈಯಲ್ಲೇ ಇಟ್ಟುಕೊಂಡು ಓಡಾಡಬೇಕಾದ ಆವಶ್ಯಕತೆಯೇ ಕಂಡು ಬರುವುದಿಲ್ಲ. ಜೊತೆಗೆ ಕಳೆದು ಹೋಗುವ ಭಯವೂ ಇರುವುದಿಲ್ಲ. ಭೌತಿಕ ಪ್ಯಾನ್‌ ಕಾರ್ಡ್‌ನಂತೆಯೇ ಇದು ಕೂಡ ಕಾರ್ಯ ನಿರ್ವಹಿಸುತ್ತದೆ. ಪ್ಯಾನ್‌ ಅನ್ನು ಉಲ್ಲೇಖಿಸಲು ಕಡ್ಡಾಯವಾಗಿರುವ ಎಲ್ಲಾ ಹಣಕಾಸು ವಹಿವಾಟುಗಳಲ್ಲಿ ಇ-ಪ್ಯಾನ್‌ ಸಲ್ಲಿಸಬಹುದು. ಅಂದರೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು, ಹಣಕಾಸು ವಹಿವಾಟುಗಳನ್ನು ನಡೆಸುವುದು ಮತ್ತು ಕೆವೈಸಿ ಅವಶ್ಯಕತೆಗಳನ್ನು ಪೂರೈಸುವುದು ಸೇರಿದಂತೆ ಪ್ಯಾನ್ ಅಗತ್ಯವಿರುವ ಎಲ್ಲಾ ಉದ್ದೇಶಗಳಿಗಾಗಿ ಇ-ಪ್ಯಾನ್ ಅನ್ನು ಬಳಸಬಹುದು.

ಇ-ಪ್ಯಾನ್‌ ಕಾರ್ಡ್‌ನ ವೈಶಿಷ್ಟ್ಯ

  • ಸುಲಭ ಮತ್ತು ಕಾಗದ ರಹಿತ
  • ಕೊಂಡೊಯ್ಯಲು ಸುಲಭ
  • ಅರ್ಜಿ ಸಲ್ಲಿಸಲು ಆಧಾರ್‌ ಮತ್ತು ಮೊಬೈಲ್‌ ನಂಬರ್‌ ಇದ್ದರೆ ಸಾಕು

ಇ-ಪ್ಯಾನ್‌ ಕಾರ್ಡ್‌ಗೆ ಹೀಗೆ ಅಪ್ಲೈ ಮಾಡಿ

  • ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌: https://www.incometax.gov.in/iec/foportal/ಗೆ ಭೇಟಿ ನೀಡಿ ಅಥವಾ ಇಲ್ಲಿ ಕ್ಲಿಕ್‌ ಮಾಡಿ.
  • ಈಗ ತೆರೆದುಕೊಳ್ಳುವ ಹೊಸ ಪುಟದಲ್ಲಿ ಕಾಣಿಸುವ Instant e-PAN ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಈಗ Get New e-PAN ಆಪ್ಶನ್‌ ಆಯ್ಕೆ ಮಾಡಿ.
  • ಈ ತೆರೆದುಕೊಳ್ಳುವ ಹೊಸ ಪುಟದಲ್ಲಿ ನಿಮ್ಮ 12 ಅಂಕೆಗಳ ಆಧಾರ್‌ ನಂಬರ್‌ ನಮೂದಿಸಿ. ಬಳಿಕ I confirm that ಮತ್ತು Continue ಬಟನ್‌ ಕ್ಲಿಕ್‌ ಮಾಡಿ.
  • ಆಗ OTP ವ್ಯಾಲಿಡೇಷನ್‌ ಪುಟ ತೆರೆದುಕೊಳ್ಳುತ್ತದೆ. I have read the consent terms and agree ಮೇಲೆ ಕ್ಲಿಕ್‌ ಮಾಡಿ ನಂತರ Continue ಆಯ್ಕೆ ಸೆಲೆಕ್ಟ್‌ ಮಾಡಿ.
  • ಆಧಾರ್‌ ನಂಬರ್‌ನೊಂದಿಗೆ ಲಿಂಕ್‌ ಆಗಿರುವ ನಿಮ್ಮ ಮೊಬೈಲ್‌ ನಂಬರ್‌ಗೆ ಬಂದಿರುವ ಒಟಿಪಿ ಸಂಖ್ಯೆ ನಮೂದಿಸಿ. ನಂತರ Continue ಬಟನ್‌ ಕ್ಲಿಕ್‌ ಮಾಡಿ.
  • ಕೊನೆಗೆ ವ್ಯಾಲಿಡೇಷನ್‌ ಆಧಾರ್‌ ಡೀಟೈಲ್‌ ಪುಟ್‌ದಲ್ಲಿ I Accept ಮತ್ತು Continue ಆಪ್ಶನ್‌ ಸೆಲೆಕ್ಟ್‌ ಮಾಡಿದರೆ ಸಾಕು.

ಪರದೆ ಮೇಲೆ ಸ್ವೀಕೃತಿ ಸಂಖ್ಯೆ ಮೂಡುತ್ತದೆ. ಅದೇ ನಂಬರ್‌ ಫೋನ್‌ಗೂ ಎಸ್‌ಎಂಎಸ್‌ ರೂಪದಲ್ಲಿ ಬಂದಿರುತ್ತದೆ. ಬಳಿಕ ನೀವು ಇ-ಪ್ಯಾನ್‌ ಅನ್ನು ಪಿಡಿಎಫ್‌ ರೂಪದಲ್ಲಿ ಡೌನ್‌ಲೋಡ್‌ ಮಾಡಬಹುದು.

ಈ ಸುದ್ದಿಯನ್ನೂ ಓದಿ: Money Tips: ಆದಾಯ ತೆರಿಗೆ ರಿಫಂಡ್‌ ಇನ್ನೂ ಬಂದಿಲ್ಲವೆ? ಕಾರಣ, ಪರಿಹಾರ ಇಲ್ಲಿದೆ