MSME Financing: MSME ಫೈನಾನ್ಸಿಂಗ್‌ಗೆ ಮತ್ತಷ್ಟು ಬಲ ನೀಡಿದ ಟಾಟಾ ಕ್ಯಾಪಿಟಲ್ - ಸಿಡ್‌ಬಿ ಒಪ್ಪಂದ
ಸಿಡ್‌ಬಿ, ಟಾಟಾ ಕ್ಯಾಪಿಟಲ್ ಲಿಮಿಟೆಡ್ ಜತೆಗೆ ಎಮ್‌ಎಸ್‌ಎಮ್‌ಇ ಹಣಕಾಸು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಿಂದ ಎಮ್ ಎಸ್‌ಎಮ್‌ಇ ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿಯ ಬಲ ದೊರೆಯುವಂತೆ ಆಗಿದೆ. ಸಾಲ ಸೌಲಭ್ಯ ವಿಸ್ತರಿಸುವ ಜತೆಗೆ ರಿಸ್ಕ್ ಶೇರಿಂಗ್, ಸಹ -ಸಾಲ, ಜಂಟಿ ಹಣಕಾಸು ವ್ಯವಸ್ಥೆ ಯನ್ನು ಕೂಡ ಅನ್ವೇಶಿಸಲಿದೆ.

ಎಡದಿಂದ ಬಲಕ್ಕೆ - SIDBI ಮುಖ್ಯ ಜನರಲ್ ಮ್ಯಾನೇಜರ್ ವಿವೇಕ್ ಕುಮಾರ್ ಮಲ್ಹೋತ್ರಾ, ಮತ್ತುTCL ಕಾರ್ಯಾಚರಣಾ ಅಧಿಕಾರಿ ವಿವೇಕ್ ಚೋಪ್ರಾ

ನವದೆಹಲಿ: ಸಣ್ಣ, ಮಧ್ಯಮ ಮತ್ತು ಸೂಕ್ಷ್ಮ ಕೈಗಾರಿಕಾ ಸಂಸ್ಥೆಗಳಿಗೆ ಹಣಕಾಸು ನೆರವಿನ ವಿಚಾರವಾಗಿ ಸಿಡ್‌ಬಿ, ಟಾಟಾ ಕ್ಯಾಪಿಟಲ್ ಲಿಮಿಟೆಡ್ ಜತೆಗೆ ಎಮ್‌ಎಸ್‌ಎಮ್‌ಇ ಹಣಕಾಸು ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದೆ(MSME Financing). ಈ ಒಪ್ಪಂದದಿಂದ ಎಮ್‌ಎಸ್‌ಎಮ್‌ಇ ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ಧಿಯ ಬಲ ದೊರೆಯುವಂತೆ ಆಗಿದೆ. ಉಪಕರಣಗಳು, ಮಷೀನ್‌ಗಳ ಖರೀದಿಗೆ ಹಣಕಾಸು ಸೌಲಭ್ಯ, ವರ್ಕಿಂಗ್ ಕೆಪಿಟಲ್ ,ಒಡಿ/ಸಿಸಿ , ವ್ಯಾವಹಾರಿಕ ಸಾಲ ಹಾಗೂ ಆಸ್ತಿಗಳ ಮೇಲೆ ಸಾಲ ಹೀಗೆ ವಿವಿಧ ಮಾರ್ಗಗಳ ಮೂಲಕ ಹಣಕಾಸು ಸೌಲಭ್ಯ ನೀಡುವ ಮೂಲಕ ಎಮ್‌ಎಸ್‌ಎಮ್‌ಇ ಅಭಿವೃದ್ಧಿ ಹಾಗೂ ಏಳಿಗೆಗೆ ಈ ಒಪ್ಪಂದ ಬಹಳಷ್ಟು ಕೇಂದ್ರೀಕೃತವಾಗಲಿದ್ದು ಬಹಳಷ್ಟು ಸಹಕಾರಿಯಾಗಲಿದೆ.
ಸಾಲ ಸೌಲಭ್ಯ ವಿಸ್ತರಿಸುವ ಜತೆಗೆ ರಿಸ್ಕ್ ಶೇರಿಂಗ್, ಸಹ -ಸಾಲ, ಜಂಟಿ ಹಣಕಾಸು ವ್ಯವಸ್ಥೆಯನ್ನು ಕೂಡ ಮಾಡಿ ಕೊಡಲಿದೆ. ಈ ಒಪ್ಪಂದಕ್ಕೆ ಸಿಡ್‌ಬಿ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ವಿವೇಕ್ ಕುಮಾರ್ ಮಲ್ಹೋತ್ರಾ, ಟಾಟಾ ಕೆಪಿಟಲ್ ಲಿಮಿಟೆಡ್, ರಿಟೇಲ್ ಫೈನಾನ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಚೋಪ್ರಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಹಿ ಹಾಕಿದ್ದು ಈ ಮೂಲಕ ಎಮ್‌ಎಸ್‌ಎಮ್‌ಇಗಳಿಗೆ ಮತ್ತಷ್ಟು ಬಲ ನೀಡಿದಂತಾಗಿದೆ.
MSME ಅಭಿವೃದ್ಧಿಯಲ್ಲಿ SIDBI ಪಾತ್ರ:
1990 ರಲ್ಲಿ ಸ್ಥಾಪಿತವಾದ SIDBI MSME ವಲಯವನ್ನು ಉತ್ತೇಜಿಸಲು ಮತ್ತು ಹಣಕಾಸು ಒದಗಿಸಲು ಪ್ರಮುಖ ರೀತಿಯಲ್ಲಿ ಹಣಕಾಸು ಸಂಸ್ಥೆಯಾಗಿ ಕೆಲಸ ನಿರ್ವಹಿಸಲಿದೆ. ಟಾಟಾ ಕ್ಯಾಪಿಟಲ್ ನೊಂದಿಗಿನ ಈ ಪಾಲುದಾರಿಕೆಯು ಭಾರತದಲ್ಲಿ MSME ಹಣಕಾಸನ್ನು ಬಲಪಡಿಸಲು ಸಹಕಾರಿಯಾಗಲಿದೆ.
ಇದನ್ನು ಓದಿ: South Indian Bank: ಸೌತ್ ಇಂಡಿಯನ್ ಬ್ಯಾಂಕ್‌ನಿಂದ ಸುಲಭ, ತ್ವರಿತ ‘ಸ್ಥಿರ ಠೇವಣಿ’ ಯೋಜನೆ
ಪರೋಕ್ಷ ಸಾಲ: MSMEಗಳಿಗೆ ಸಾಲವನ್ನು ವಿಸ್ತರಿಸಲು ಹಣಕಾಸು ಸಂಸ್ಥೆಗಳೊಂದಿಗೆ ಪಾಲುದಾರಿಕೆಯಾಗಿ ಕೆಲಸ ನಿರ್ವಹಿಸಲಿದೆ.
ನೇರ ಸಾಲ: ನೇರ ಹಣಕಾಸಿನ ಮೂಲಕ ಸಾಲದ ಅಂತರವನ್ನು ಪರಿಹರಿಸಲಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸಲಿದೆ.
ಪ್ರಚಾರ ಮತ್ತು ಅಭಿವೃದ್ಧಿ: MSME ಬೆಳವಣಿಗೆಗೆ ಕ್ರೆಡಿಟ್-ಪ್ಲಸ್ ಪ್ರಚಾರ ಒದಗಿಸುವುದು.
ಸೌಲಭ್ಯ: ಎಂಎಸ್‌ಎಂಇಗಳನ್ನು ಗುರಿಯಾಗಿಸಿಕೊಂಡು ಸರ್ಕಾರಿ ಯೋಜನೆಗಳಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದೆ