#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

union budget 2025: ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ

ಮುಂದಿನ ವಾರ ಹೊಸ ಆದಾಯ ತೆರಿಗೆ ವಿಧೇಯಕ(budget 2025) ಮಂಡನೆಯಾಗಲಿದೆ. ಅದರಲ್ಲಿ ಮತ್ತಷ್ಟು ವಿವರಗಳು ತಿಳಿಯಲಿದೆ. ಮುಖ್ಯವಾಗಿ ಸರ್ಕಾರ ನೇರ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಈ ವಿಧೇಯಕವನ್ನು ತರುತ್ತಿದೆ.

union budget 2025: ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತ ಸಾಲ

infrastructure development

Profile Abhilash BC Feb 1, 2025 2:56 PM

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ(union budget 2025) ರಾಜ್ಯಗಳಿಗೆ 50 ವರ್ಷಗಳ ಅವಧಿಗೆ ಬಡ್ಡಿ ರಹಿತವಾಗಿ 1.5 ಲಕ್ಷ ಕೋಟಿ ನೆರವನ್ನು ಮೂಲಸೌಕರ್ಯ ಅಭಿವೃದ್ಧಿಗೆ ನೀಡುವುದಾಗಿ ನಿರ್ಮಲಾ ಸೀತಾರಾಮನ್‌ ಘೋಷಿಸಿದ್ದಾರೆ. 2021ರಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ಜಾರಿಗೆ ತರಲಾಗಿತ್ತು. ಅದರ ಯಶಸ್ಸಿನ ಆಧಾರದ ಮೇಲೆ ಈ ಬಾರಿಯ ಬಜೆಟ್‌ನಲ್ಲಿ 2ನೇ ಯೋಜನೆಯನ್ನು 2025 ರಿಂದ 2030ಕ್ಕೆ ವಿಸ್ತರಿಸಲಾಗಿದೆ. ಒಟ್ಟು 10 ಲಕ್ಷ ಕೋಟಿ ಮೀಸಲಿಡಲಾಗಿದೆ.

ಮಧ್ಯಮ ವರ್ಗದ ವೇತನದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಾರ್ಷಿಕ 12 ಲಕ್ಷ ರೂಪಾಯಿ ತನಕ ಆದಾಯಕ್ಕೆ ಇನ್ನು ಮುಂದೆ ಆದಾಯ ತೆರಿಗೆ ಇಲ್ಲ. ಇದು ಹೊಸ ತೆರಿಗೆ ಪದ್ಧತಿಯಲ್ಲಿ ಅನ್ವಯವಾಗಲಿದೆ. ವೇತನದಾರರಿಗೆ 12,75,000 ರೂಪಾಯಿ ತನಕ ಯಾವುದೇ ಆದಾಯ ತೆರಿಗೆ ಕಟ್ಟುವ ಅಗತ್ಯವಿಲ್ಲ.

ಮುಂದಿನ ವಾರ ಹೊಸ ಆದಾಯ ತೆರಿಗೆ ವಿಧೇಯಕ ಮಂಡನೆಯಾಗಲಿದೆ. ಅದರಲ್ಲಿ ಮತ್ತಷ್ಟು ವಿವರಗಳು ತಿಳಿಯಲಿದೆ. ಮುಖ್ಯವಾಗಿ ಸರ್ಕಾರ ನೇರ ತೆರಿಗೆ ಪದ್ಧತಿಯನ್ನು ಮತ್ತಷ್ಟು ಸರಳ ಮತ್ತು ಸುಧಾರಣೆ ಮಾಡುವ ಉದ್ದೇಶದಿಂದ ಈ ವಿಧೇಯಕವನ್ನು ತರುತ್ತಿದೆ.



ಈ ಬಾರಿಯ ಬಜೆಟ್ ಭಾಷಣವು ಕೇವಲ 1 ಗಂಟೆ 14 ನಿಮಿಷಕ್ಕೆ ಮುಕ್ತಾಯ ಕಂಡಿತು. ಇದು ಅತ್ಯಂತ ಚಿಕ್ಕ ಬಜೆಟ್‌ ಭಾಷಣಗಳಲ್ಲಿ ಇದೂ ಒಂದು ಎನಿಸಿಕೊಂಡಿದೆ (Union Budget 2025-26). ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಇತಿಹಾಸದಲ್ಲಿಯೇ ಅತಿ ಉದ್ದದ ಬಜೆಟ್ ಭಾಷಣ ಮಾಡಿದ್ದರು. ಅಂದು ಅವರ ಬಜೆಟ್ ಭಾಷಣ 2 ಗಂಟೆ 40 ನಿಮಿಷಗಳ ಕಾಲ ನಡೆದಿತ್ತು.

ಇದನ್ನೂ ಓದಿ Agriculture Budget 2025: ಬಜೆಟ್‌ನಲ್ಲಿ ಕೃಷಿ ವಲಯಕ್ಕೆ ಬಂಪರ್‌ ಕೊಡುಗೆ ಘೋಷಿಸಿದ ಕೇಂದ್ರ

ಭಾರತದಲ್ಲಿ ಅತ್ಯಂತ ಕಡಿಮೆ ಅವಧಿಯ ಬಜೆಟ್ ಭಾಷಣ ನಡೆಸಿದ ದಾಖಲೆ ಹಣಕಾಸು ಸಚಿವ ಹಿರುಭಾಯಿ ಎಂ. ಪಟೇಲ್ ಅವರ ಹೆಸರಿಲ್ಲಿದೆ. 1977ರಲ್ಲಿ ಅವರು ಮಂಡಿಸಿದ ಬಜೆಟ್‌ ಕೇವಲ 800 ಪದಗಳನ್ನು ಒಳಗೊಂಡಿತ್ತು.