Friday, 27th May 2022

ನಾಟಕಗಳಲ್ಲಿ ಪಾಲ್ಗೊಳ್ಳುವಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ: ಜಯಶ್ರೀ ರೆಡ್ಡಿ

ಕಲಬುರಗಿ: ಯಶಸ್ವಿ ಮಾರ್ಗದರ್ಶಿನಿ ಕೋಚಿಂಗ್ ಸೆಂಟರ್ ವತಿಯಿಂದ ‘ಧೀಯೇಟರ್ ಮೂಲಕ ಶಿಕ್ಷಣ’ ಎಂಬ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ರಂಗಕಲಾವಿದ, ನಿಕಟಪೂರ್ವ ರಂಗಾಯಣ ನಿರ್ದೇಶಕ ಮಹೇಶ ವ್ಹಿ.ಪಾಟೀಲ್ ನಿರ್ದೇಶನ ಮಾಡಿರುವ ಡಾ. ಸಿದ್ಧಲಿಂಗಯ್ಯನವರ “ಕತ್ತೆ ಮತ್ತು ಧರ್ಮ” ಎಂಬ ಕವನಾಧಾರಿತ ವಿಡಂಭನಾತ್ಮಕ ನಾಟಕವನ್ನು 7 ದಿಂದ 15 ವರ್ಷದ ಮಕ್ಕಳು ಪ್ರದರ್ಶಿನ ಮಾಡಿದರು.

ಯಶಸ್ವಿ ಮಾರ್ಗದರ್ಶಿನಿ ಕೋಚಿಂಗ್ ಸೆಂಟರ್ ನಿರ್ದೇಶಕಿ ಶಿಕ್ಷಣ ತಜ್ಞೆ ಹಾಗೂ ಮನೋವಿಜ್ಞಾನಿ ಡಾ. ಜಯಶ್ರೀ ಎಸ್. ರೆಡ್ಡಿ ಮಾತನಾಡಿ, ನಾಟಕಗಳಲ್ಲಿ ಪಾಲ್ಗೊಳ್ಳು ವಿಕೆ ಹಾಗೂ ಪ್ರದರ್ಶನದ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ, ಅಭಿವ್ಯಕ್ತಿಕೌಶಲ್ಯ, ಸಾಮಾಜಿಕ ಕಳಕಳಿ, ಸಂಸ್ಕಾರ ಹಾಗೂ ವ್ಯಕ್ತಿತ್ವ ವಿಕಸನ ಅಭಿವೃದ್ಧಿಗೆ ಸಾಧ್ಯವಾ ಗುತ್ತದೆ. ಶಿಕ್ಷಣ ಹಾಗೂ ಮನೋವೈಜ್ಞಾನಿಕ ಧೆರಪಿ (ಚಿಕಿತ್ಸ) ಗಳಲ್ಲಿ ನಾಟ್ಯರೂಪಕ ಗಳನ್ನು ಬಳಸಲಾಗುವುದು ಎಂದು ತಿಳಿಸಿದರು.

ಪ್ರಸನ್ನ ಹನುಮಾನ್ ದೇವಸ್ಥಾನ ಕಮಿಟಿಯ ಅಧ್ಯಕ್ಷ ಡಿ.ವ್ಹಿ. ಕುಲಕರ್ಣಿ ಮಾತನಾಡಿ, ಇದೊಂದು ಅತ್ಯಧ್ಬುತ ಪ್ರಯತ್ನವಾಗಿದೆ. ನಾಟಕದ ಪಾತ್ರದಾರಿಗಳು ಹಾಗೂ ನಿರ್ದೇ ಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿಗಳಾದ ಅನಿತಾ ಚಕ್ಕಿ, ಪಲ್ಲವಿ ಕುಲಕರ್ಣಿ ವಿವಿಧ ಬಡಾವಣೆಯ ಜನತೆ ಹಾಗೂ ಪಾಲಕರು ಉಪಸ್ಥಿತರಿದ್ದರು.